ಹುಂಜಾ ವಿರುದ್ಧ ರೊಚ್ಚಿಗೆದ್ದ ವೃದ್ಧ; ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.. ಮುಂದೆ ಆಗಿದ್ದೇನು?

author-image
Ganesh
Updated On
ಪೊಲೀಸ್ ಇಲಾಖೆ ಜೊತೆ ಉಡುಪಿ ಜನ ಜಟಾಪಟಿ.. ಕೋಳಿ ರಕ್ತ ಭೂಮಿಗೆ ಬೀಳುವ ಹಿಂದಿನ ನಂಬಿಕೆ ಏನು?
Advertisment
  • ಅಸಲಿ ವಿಚಾರ ತಿಳಿದು ಪೊಲೀಸರೇ ಶಾಕ್
  • ಪಕ್ಕದ ಮನೆಯ ಕೋಳಿ ಕಾಟಕ್ಕೆ ಬೇಸತ್ತಿದ್ದ ವೃದ್ಧ
  • ಕೋಳಿ ವಿರುದ್ಧ ಕೇಸ್ ದಾಖಲಾಗಿದ್ದು ಎಲ್ಲಿ ಗೊತ್ತಾ?

ಸಹಜವಾಗಿ ಊರಲ್ಲಿ ಗಲಾಟೆ, ಕೊಲೆ, ದರೋಡೆ, ನಾಪತ್ತೆ ಆದಾಗೆಲ್ಲಾ ಕೇಸ್‌ ದಾಖಲಿಸೋದು ಕಾಮನ್​. ಆದರೆ ಕೇರಳದಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಬೆಳಗಿನ ಜಾವ ಪಕ್ಕದ ಮನೆಯ ಕೋಳಿ ಕೂಗಿ ನಿದ್ರೆಗೆ ತೊಂದರೆ ಮಾಡ್ತಿದೆ ಅಂತ ವ್ಯಕ್ತಿಯೊಬ್ಬ ದೂರು ನೀಡಿದ್ದಾರೆ. ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಪಲ್ಲಿಕಲ್ ಎಂಬಲ್ಲಿ ಘಟನೆ ನಡೆದಿದೆ. ನಿದ್ರೆ ಸಮಸ್ಯೆಯಿಂದ ಬಳಲ್ತಿರುವ ವಯೋವೃದ್ಧ ರಾಧಾಕೃಷ್ಣ ಕುರುಪ್, ಪಕ್ಕದ ಮನೆ ಕೋಳಿ ಬೆಳಗಿನ ಜಾವ ಮೂರು ಗಂಟೆಗೆ ಕೂಗಿ ತನ್ನ ನಿದ್ರೆ ಭಂಗ ಮಾಡ್ತಿದೆ ಅಂತ ದೂರು ದಾಖಲಿಸಿದ್ದಾರೆ.

ಆಗಿದ್ದೇನು..?

ವೃದ್ಧ ರಾಧಾಕೃಷ್ಣನ ಪಕ್ಕದ ಮನೆಯಲ್ಲಿ ಕೋಳಿ ಹುಂಜಾವೊಂದನ್ನು ಸಾಕಿದ್ದರು. ಅದನ್ನು ಮನೆಯ ಮಾಳಿಗೆಯಲ್ಲಿ ಬಿಡುತ್ತಿದ್ದರು. ಅದು ಪ್ರತಿನಿತ್ಯ ಮುಂಜಾನೇ ಮೂರು ಗಂಟೆಗೆ ಕೂಗುತ್ತಿತ್ತು. ಇದರಿಂದ ರಾಧಾಕೃಷ್ಣ ಅವರ ನಿದ್ರೆಗೆ ಭಂಗ ಆಗುತ್ತಿತ್ತು. ಇದರಿಂದ ರೋಸಿ ಹೋದ ರಾಧಾಕೃಷ್ಣ, ಕೋಳಿ ಹಾಗೂ ಅದರ ಮಾಲೀಕರ ವಿರುದ್ಧ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಠಾಣೆಗೆ ಬಂದು ದೂರು ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲೀಸರು, ಎರಡೂ ಮನೆಯವರನ್ನು ಕರೆಸಿದ್ದಾರೆ. ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ಮೂಲದ ಯುವಕ, ಯುವತಿ ಚಿಕ್ಕಮಗಳೂರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment