Advertisment

ಪತ್ನಿಯಿದ್ದೂ ಗೆಳತಿಯ ಜೊತೆ ಲವ್ವಿ-ಡವ್ವಿ ಆಟ; ಮನೆಗೆ ಬಂದು ತಲುಪಿತ್ತು ದಂಡ ಹಾಗೂ ಗಂಡನ ಕಳ್ಳಾಟ!

author-image
Gopal Kulkarni
Updated On
ಪತ್ನಿಯಿದ್ದೂ ಗೆಳತಿಯ ಜೊತೆ ಲವ್ವಿ-ಡವ್ವಿ ಆಟ; ಮನೆಗೆ ಬಂದು ತಲುಪಿತ್ತು ದಂಡ ಹಾಗೂ ಗಂಡನ ಕಳ್ಳಾಟ!
Advertisment
  • ಹೆಲ್ಮೆಟ್ ಹಾಕಿಕೊಳ್ಳದೇ ಸ್ಕೂಟರ್ ಓಡಿಸಿದ್ದಕ್ಕೆ ಪತಿಗೆ ಪೀಕಲಾಟ
  • ಮನೆಗೆ ರಸ್ತೆ ನಿಯಮ ಉಲ್ಲಂಘನೆ ಫೋಟೋ ಕಳಿಸಿದ ಪೊಲೀಸರು
  • ಫೋಟೋದಲ್ಲಿ ಕಂಡು ಬಂತು ಪತಿಯ ಕಳ್ಳಾಟ, ಪತ್ನಿ ಮಾಡಿದ್ದೇನು ಗೊತ್ತಾ?

ಕಳ್ಳ ಸಂಬಂಧಗಳು ಹಾಗೆಯೇ, ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದ ರೀತಿ ಇರುತ್ತವೆ.ಗಾಳಿ ಬೀಸಿದ ಮೇಲೆ ಇಡೀ ಜಗತ್ತಿಗೆ ಕಾಣುವ ಹಾಗೆ ನಿಗಿನಿಗಿಯಾಗಿ ಉರಿಯುತ್ತವೆ. ಕೇರಳದಲ್ಲಿ ಇಂತಹುದೇ ಒಂದು ಘಟನೆ ನಡೆದಿದೆ. ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್ ಸವಾರಿ ಮಾಡಿ ಪೇಚಿಗೆ ಸಿಲುಕಿಕೊಂಡಿದ್ದಾನೆ ಕೇರಳದ ಒಬ್ಬ ವ್ಯಕ್ತಿ .

Advertisment

ಏಪ್ರಿಲ್ 25 ರಂದು ಕೇರಳದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸದೇ ತನ್ನ ಸ್ಕೂಟರ್​ನಲ್ಲಿ ಪ್ರಯಾಣ ಮಾಡಿದ್ದಾನೆ. ಇದು ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ರಸ್ತೆ ಸುರಕ್ಷತಾ ನಿಯಮದ ಅಡಿ ಪೊಲೀಸರು ಆ ವ್ಯಕ್ತಿಯ ಮನೆಗೆ ದಂಡದ ಮೊತ್ತದ ಜೊತೆಗೆ ಸಿಸಿಟಿವಿಯಲ್ಲಿ ಸೆರೆಯಾದ ಫೋಟೋಗಳನ್ನು ಕಳುಹಿಸಿದ್ದಾರೆ. ಇನ್ನು ಒಂದು ಅಚ್ಚರಿಯ ಸಂಗತಿ ಅಂದ್ರೆ ಸ್ಕೂಟರ್ ಆ ವ್ಯಕ್ತಿಯ ಪತ್ನಿಯ ಹೆಸರಲ್ಲಿತ್ತು, ಮನೆಗೆ ಬಂದ ದಂಡದ ಮೊತ್ತ ಹಾಗೂ ಫೋಟೋವನ್ನು ಗಮನಿಸಿದಾಗ, ಸ್ಕೂಟರ್ ಹಿಂದೆ ಬೇರೆ ಮಹಿಳೆಯೊಬ್ಬಳ ಜೊತೆ ತನ್ನ ಪತಿ ಹೋಗುತ್ತಿರುವುದ ಕಂಡು ಬಂದಿದೆ. ಇದರಿಂದ ರೊಚ್ಚಿಗೆದ್ದ ಆತನ ಪತ್ನಿ ಪತಿಯನ್ನು ನಿಮ್ಮ ಹಿಂದೆ ಕುಳಿತಿದ್ದ ಯುವತಿ ಯಾರು?ಎಂದು ಕೇಳಿದ್ದಾಳೆ. ಅದಕ್ಕೆ ಪತಿ, ಯಾರು ಇಲ್ಲ, ಹಾದಿಯಲ್ಲಿ ಯಾರೋ ಲಿಫ್ಟ್ ಕೇಳಿದ್ರು, ಅದಕ್ಕೆ ಲಿಫ್ಟ್ ಕೊಟ್ಟೆ ಅಂತ ಹೇಳಿದ್ದಾನೆ. ಈ ಒಂದು ವಿಚಾರ ತಾರಕಕ್ಕೇ ಹೋಗಿದೆ.

ಇದನ್ನೂ ಓದಿ:‘ಓಕೆ‘ ಎಂದ ಸ್ಟೇಷನ್ ಮಾಸ್ಟರ್​, ನಕ್ಸಲ್​ ಬಾಹುಳ್ಯ ಪ್ರದೇಶದಲ್ಲಿ ನಿಂತ ರೈಲು! ಇಲಾಖೆಗೆ 3 ಕೋಟಿ ರೂಪಾಯಿ ಲಾಸ್​! ಆಗಿದ್ದೇನು?

ಪತಿಯ ಯಾವುದೇ ಮಾತನ್ನು, ಯಾವುದೇ ವಿವರಣೆಯನ್ನೂ ನಂಬದ ಪತ್ನಿ ನೇರವಾಗಿ ಕರಮಾನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಗಂಡನ ಮೇಲೆ ಕಿರುಕುಳ ಹಾಗೂ ಹಲ್ಲೆಯ ಪ್ರಕರಣ ದಾಖಲಿಸಿದ್ದಾಳೆ. ಅವಳ ಹೇಳಿಕೆ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆಕೆಯ ಪತಿ ವಿರುದ್ಧ ಐಪಿಸಿ ಸೆಕ್ಷನ್ 321, 341, 294 ಹಾಗೂ 75ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈಗಾಗಲೇ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿದೆ. ಒಂದೇ ಒಂದು ರಸ್ತೆ ನಿಯಮ ಉಲ್ಲಂಘನೆ ಕೇಸ್ ಇಷ್ಟೆಲ್ಲಾ ಸಮಸ್ಯೆಗಳನ್ನು ಸೃಷ್ಟಿಮಾಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment