ಮಕ್ಕಳಿಗೆ ಪಾಠ ಮಾಡಲು ಈಜಿ ಹೋಗುವ ಗಣಿತ ಶಿಕ್ಷಕ.. 20 ವರ್ಷಗಳಲ್ಲಿ ಒಂದು ದಿನವೂ ರಜೆ ಹಾಕಿಲ್ಲ

author-image
admin
ಮಕ್ಕಳಿಗೆ ಪಾಠ ಮಾಡಲು ಈಜಿ ಹೋಗುವ ಗಣಿತ ಶಿಕ್ಷಕ.. 20 ವರ್ಷಗಳಲ್ಲಿ ಒಂದು ದಿನವೂ ರಜೆ ಹಾಕಿಲ್ಲ
Advertisment
  • ಜೋರು ಮಳೆ, ನದಿಯಲ್ಲಿ ಪ್ರವಾಹ ಬಂದ್ರೂ ಈಜೋದನ್ನು ಬಿಟ್ಟಿಲ್ಲ
  • ಸಣ್ಣ ಹಳ್ಳಿಯ ಗಣಿತ ಶಿಕ್ಷಕ 20 ವರ್ಷಗಳಿಂದ ಶಾಲೆಗೆ ರಜೆ ಹಾಕಿಲ್ಲ
  • ಈ ಶಿಕ್ಷಕರನ್ನ ನೋಡಿ ವಿದ್ಯಾರ್ಥಿಗಳು, ಶಿಕ್ಷಕರು ಕೂಡ ಕಲಿಯಬೇಕು

ನೀವೆಂದೂ ನೋಡದೇ ಇರೋ, ಕೇಳದೇ ಇರೋ ಶಿಕ್ಷಕ ಇವರು. ಈ ಶಿಕ್ಷಕರನ್ನ ನೋಡಿ ವಿದ್ಯಾರ್ಥಿಗಳು ಕಲಿಯಬೇಕಿದೆ. ಶಿಕ್ಷಕರು ಕೂಡ ಈ ಟೀಚರ್​​ನ ನೋಡಿ, ತಿಳಿದುಕೊಳ್ಳಬೇಕಿದೆ.

ಅಬ್ದುಲ್ ಮಲಿಕ್.. ಕೇರಳ ರಾಜ್ಯದಲ್ಲಿರೋ ಪದಿಂಜತ್ತುಮುರಿ ಅನ್ನೋ ಸಣ್ಣ ಹಳ್ಳಿಯ ಗಣಿತ ಶಿಕ್ಷಕ. 20 ವರ್ಷಗಳಿಂದಲೂ ಕೂಡ, ಶಾಲೆಗೆ ರಜೆನೇ ಹಾಕಿಲ್ಲ. ಇನ್ನೊಂದು ಮುಖ್ಯವಾದ ವಿಚಾರ ಕೇಳಿದ್ರೇ ನೀವು ಹೌಹಾರ್ತೀರ. ತಮ್ಮ ಮನೆಯಿಂದ ಶಾಲೆ ತಲುಪೋಕೆ ಪ್ರತಿದಿನ ಕಡಲುಂಡಿ ನದಿಯನ್ನು ದಾಟಲೇ ಬೇಕು.

publive-image

ಹೀಗಾಗಿ 12 ಕಿಲೋಮೀಟರ್ ರಸ್ತೆಯಲ್ಲಿ ನಡೆಯೋ ಬದಲು, ಸಮಯ ಉಳಿಸೋಕೆ ನದಿಯಲ್ಲಿ ಈಜುಕೊಂಡೇ ದಿನಾ ಟ್ರಾವೆಲ್ ಮಾಡ್ತಾರೆ. ಅಬ್ದುಲ್ ಅವರ ಬಟ್ಟೆ, ಪುಸ್ತಕಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಹಳೇ ಟೈರ್ ಟ್ಯೂಬ್ ಅನ್ನು ತೇಲೋ ರೀತಿ ಸ್ವಿಮ್ಮಿಂಗ್ ಮಾಡಿಕೊಂಡು ದಡ ದಾಟ್ತಾರೆ. ಮಳೆನೇ ಬರಲಿ, ನದಿ ಜೋರಾಗಿ ಹರಿಯಲಿ, ಮಲಿಕ್ ಅವರು ಮಾತ್ರ ಯಾವತ್ತೂ ಕೂಡ ಶಾಲೆಗೆ ಹೋಗೋದನ್ನ ತಪ್ಪಿಸಿಕೊಂಡಿಲ್ಲ.

ಈ ಸ್ವಿಮ್ಮಿಂಗ್ ಪ್ರಯಾಣ 1994ರಲ್ಲಿ ಶುರುವಾಗಿದೆ. ಅವತ್ತಿನಿಂದ ಇವತ್ತಿನವರೆಗೂ ನದಿಯಲ್ಲಿ ಈಜಾಡಿಕೊಂಡೇ ಹೋಗೋದು ಮಾತ್ರ ಬಿಟ್ಟಿಲ್ಲ. ಜೋರು ಮಳೆ, ಹೆಚ್ಚಿನ ನದಿ ಪ್ರವಾಹದ ಬಂದ್ರೂ ಈಜೋದನ್ನ ಬಿಟ್ಟಿಲ್ಲ. ಮಲಿಕ್‌ ಅವರಿಗೆ, ತನ್ನ ವಿದ್ಯಾರ್ಥಿಗಳ ಜೊತೆಗಿದ್ರೇ ಸಾಕು, ಪ್ರಪಂಚವನ್ನೇ ಮರೆತೆ ಬಿಡ್ತಾರೆ. ಒಳ್ಳೇ ಎಜುಕೇಷನ್​ ಕೊಡೋಕೆ ಇವರು ಅರ್ಹರು, ಇವರು ನಿಜವಾಗಿಯೂ ಕಾಳಜಿ ವಹಿಸೋ ಶಿಕ್ಷಕ ಅಂತ ಪ್ರತಿ ಮಗು ಕೂಡ ನಂಬುತ್ತಾರೆ.

publive-image

ಇದನ್ನೂ ಓದಿ: ಚೈತ್ರಾ ಕುಂದಾಪುರ ತಂದೆ ಆರೋಪ ಆಸ್ತಿಗೋಸ್ಕರ; ಒಂದೊಂದು ಮಾತಿಗೂ ತಾಯಿ ರೋಹಿಣಿ ಕೌಂಟರ್ 

ಕೆಲವೊಂದ್ ಸರಿ, ಶಾಲೆ ಕೆಲಸ ಬೇಗ ಇದ್ರೇ ಅಥವಾ ಎರ್ಮೆಜೆನ್ಸಿ ಟೈಂನಲ್ಲಿ ಅವಾಗವಾಗ ರಸ್ತೆಯಲ್ಲೇ ಹೋಗಿ ಶಾಲೆ ತಲುಪ್ತಾರೆ. ತಿದ್ದಿ ಹೇಳಿ ಪಾಠ ಮಾಡೋ ಈ ಶಿಕ್ಷಕನ ಕೆಲಸದಲ್ಲಿ ಕಿಂಚಿತ್ತು ಲೋಪ ಆಗದಂತೆ ನಡೆದುಕೊಳ್ತಾರೆ. ಅಬ್ದುಲ್ ಅವರು, ತಮ್ಮ ಸ್ಟುಡೆಂಟ್ಸ್​​ಗೆ ಪ್ರಕೃತಿ ಬಗ್ಗೆ ತಿಳಿಸಿಕೊಳ್ತಾರೆ. ನದಿ ಶುಚಿಗೊಳಿಸೋ ಡ್ರೈವ್‌ಗಳನ್ನು ಮಾಡ್ತಾರೆ. ಇದ್ರ ಜೊತೆಗೆ, ಮಕ್ಕಳಿಗೆ ಈಜೋದನ್ನು ಕಲಿಸ್ತಾರೆ ಹಾಗೂ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದನ್ನ ಈಸಿ ಮೆಥೆಡ್​​ನಲ್ಲಿ ಹೇಳಿಕೊಡ್ತಾರೆ. ಇದ್ರಿಂದ, ಪ್ರಾಕ್ಟಿಕಲಿ ಹಾಗೂ ಥಿಯರಿ ಮೂಲಕ ಮೂಲಕ ತಿಳಿ ಹೇಳಿ ಪಾಠ ಮಾಡ್ತಾರೆ.

publive-image

ಒಂದಲ್ಲ.. ಎರಡಲ್ಲ.. 2 ದಶಕಗಳಿಂದ ಮಕ್ಕಳಿಗೆ ಪಾಠ ಮಾಡೋದು ಮಾತ್ರ, ಕಷ್ಟ ಅನ್ಕೊಳ್ಳದೇ, ಇಷ್ಟ ಪಟ್ಕೊಂಡು, ಈ ಮಟ್ಟಿಗೆ ನದಿಯಲ್ಲಿ ಈಜಿ ಪ್ರಯಾಣ ಮಾಡೋ ಈ ದಿಟ್ಟ ಶಿಕ್ಷಕನ ಬಗ್ಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗ್ತಿದೆ. 12 ಕಿಲೋ ಮೀಟರ್ ನದಿಯಲ್ಲೇ 15 ರಿಂದ 20 ನಿಮಿಷ ಈಜಾಡಿಕೊಂಡೇ ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಓಡಾಡೋ ಈ ಗಣಿತ ಶಿಕ್ಷಕರಿಗೆ ಟ್ಯೂಬ್ ಮಾಸ್ಟರ್ ಅಂತಾನೇ ಸಖತ್ ಫೇಮಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment