/newsfirstlive-kannada/media/post_attachments/wp-content/uploads/2025/07/Nimisha-Priya3.jpg)
ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಳ (Nurse from Kerala, Nimisha Priya) ಮರಣದಂಡನೆ ಪ್ರಕರಣ ತಿರುವು ಪಡೆದುಕೊಂಡಿದೆ. ನಿಮಿಷಾ ಪ್ರಿಯಾ ಕುಟುಂಬವು ‘ರಕ್ತದ ಹಣ’ (Blood Money) ನೀಡುವ ಪ್ರಸ್ತಾಪವನ್ನು ಮೃತನ ಕುಟುಂಬವು ತಿರಸ್ಕರಿಸಿದೆ.
8.60 ಕೋಟಿ ನೀಡಲು ಸಿದ್ಧ
ಇತ್ತ ನಿಮಿಷಾ ಪ್ರಿಯಾಳನ್ನ ಉಳಿಸಿಕೊಳ್ಳಲು ಆಕೆಯ ಪೋಷಕರು ಸಂತ್ರಸ್ತ ಕುಟುಂಬಕ್ಕೆ 8 ಕೋಟಿ 60 ಲಕ್ಷ ಬ್ಲಡ್ ಮನಿ ನೀಡಲು ಸಿದ್ಧವಾಗಿದೆ. ಆದರೆ ಅವರು ಅದನ್ನು ಸ್ವೀಕರಿಸುತ್ತಿಲ್ಲ. ಹಣದಿಂದ ರಕ್ತವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ತಲಾಲ್ ಅಬ್ದೊಲ್ ಮೆಹದಿ (Talal Abdol Mehdi) ಕುಟುಂಬ ಹೇಳಿದೆ. ಇದರ ಮಧ್ಯೆ ನಿಮಿಷಾ ಪ್ರಿಯಾಳ ಮರಣದಂಡನೆ ಪ್ರಕ್ರಿಯೆಯನ್ನು ಯೆಮೆನ್ ಸರ್ಕಾರ ಮುಂದೂಡಿದೆ. ಇದು ಸ್ವಲ್ಪ ಸಮಾಧಾನ ತಂದಿದೆ.
ಇದನ್ನೂ ಓದಿ: 2017ರಲ್ಲಿ ಪ್ರೀತಿ, ಇಬ್ಬರು ಮಕ್ಕಳು.. ಆಮೇಲೆ ನಿಗೂಢ ಕಣ್ಮರೆ.. ಗುಹೆ ಲೇಡಿ ಲವ್ ಕಹಾನಿ ರೋಚಕ..!
ವಾಸ್ತವವಾಗಿ ನಿನ್ನೆ ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಬೇಕಿತ್ತು. ಕೇರಳದ ಧರ್ಮಗುರು ಅಬು ಬಕರ್ (Sheikh Abubakr Ahmad) ಅವರ ಹಸ್ತಕ್ಷೇಪದಿಂದಾಗಿ ನೇಣು ಹಾಕುವಿಕೆಯನ್ನು ಮುಂದೂಡಲಾಗಿದೆ. ಯೆಮೆನ್‌ನಲ್ಲಿ ಹೌತಿ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಅಂತಾ ಅಬು ಬಕರ್ ಘೋಷಿಸಿದ್ದಾರೆ.
ಹಣದಿಂದ ಜೀವ ಖರೀದಿಸಲು ಆಗಲ್ಲ
ನಿಮಿಷಾಳಿಗೆ ಶಿಕ್ಷೆಯಾಗಬೇಕು ಎಂದು ಮೃತ ತಲಾಲ್ ಆದಿಬ್ ಮೆಹದಿ ಕುಟುಂಬ ಒತ್ತಾಯಿಸುತ್ತಿದೆ. ಮೃತನ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ ಪ್ರತಿಕ್ರಿಯಿಸಿ.. ಆಕೆಯ ಅಪರಾಧಕ್ಕೆ ಕ್ಷಮೆ ಇಲ್ಲ. ಆಕೆಗೆ ಶಿಕ್ಷೆಯಾಗಬೇಕು. ರಕ್ತದ ಹಣವನ್ನು ಸ್ವೀಕರಿಸಲ್ಲ. ಹಣದಿಂದ ಜೀವ ಖರೀದಿಸಲು ಸಾಧ್ಯವಿಲ್ಲ. ನಮಗೆ ನ್ಯಾಯ ಬೇಕು. ಅಪರಾಧಿಯನ್ನು ಬಲಿಪಶು ಎಂದು ಬಿಂಬಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಯೆಮೆನ್‌ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ.. ಕಾರಣವೇನು..?
ಇನ್ನು, ನಿಮಿಷ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್ ಕೋರ್ ಕಮೀಟಿ ಸದಸ್ಯ ದಿನೇಶ್ ನಾಯರ್ ಪ್ರತಿಕ್ರಿಯಿಸಿ.. ನಿಮಿಷಾ ಪ್ರಿಯಾಗೆ ಕ್ಷಮಾದಾನಕ್ಕೆ ನಮ್ಮ ಮಂಡಳಿ ಅವಿರತ ಶ್ರಮ ಪಡ್ತಿದೆ. ಸಂತ್ರಸ್ತ ಕುಟುಂಬದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕ್ಷಮಾದಾನಕ್ಕಾಗಿ ದೊಡ್ಡ ಪ್ರಮಾಣದ ರಕ್ತದಾನ ವ್ಯವಸ್ಥೆ ಮಾಡಿದ್ದೇವೆ. ಆದರೆ ಸಂತ್ರಸ್ತೆಯ ಕುಟುಂಬವು ಅದನ್ನು ಸ್ವೀಕರಿಸಲು ನಿರಾಕರಿಸಿದೆ. ನಮ್ಮ ಪ್ರಯತ್ನ ಮುಂದುವರಿಯಲಿದೆ. ನಿಮಿಷಾ ಪ್ರಿಯಾಳ ಬಿಡುಗಡೆಗಾಗಿ ಸಂಭಾವ್ಯ ಎಲ್ಲಾ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಪ್ರಯತ್ನಕ್ಕೆ ಮುಂದಾಗಿದೆ. ಅದು ಯೆಮೆನ್ ಜೈಲು ಅಧಿಕಾರಿಗಳು ಹಾಗೂ ಪ್ರಾಸಿಕ್ಯೂಷನ್ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇದನ್ನೇ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇನ್ನಾರು ದಿನದಲ್ಲಿ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ.. ಕೊನೆ ಕ್ಷಣದಲ್ಲಿ ಪ್ರಕರಣಕ್ಕೆ ಕೇಂದ್ರ ಸರ್ಕಾರದಿಂದ ಟ್ವಿಸ್ಟ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ