/newsfirstlive-kannada/media/post_attachments/wp-content/uploads/2025/07/NIMISHA_PRIYA.jpg)
ನವದೆಹಲಿ: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ತಿಳಿಸಲಾಗಿದೆ. ಜುಲೈ 16 ಅಂದರೆ ನಾಳೆ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ನಿಗದಿ ಮಾಡಲಾಗಿತ್ತು. ಆದರೆ ಇದಕ್ಕೂ ಮೊದಲು ಕ್ಷಮೆಗೆ ಬದಲಾಗಿದೆ ಹಣ ತೆಗೆದುಕೊಳ್ಳುವಂತೆ ಸಂತ್ರಸ್ತನ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ಮನವೋಲಿಸಲಾಗುತ್ತಿದೆ. ಇದರಿಂದ ಶಿಕ್ಷೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಭಾರತದ ಗ್ರ್ಯಾಂಡ್ ಮುಫ್ತಿ ಎಂದೇ ಕರೆಯಲ್ಪಡುವ ಕೇರಳದ ಪ್ರಭಾವಿ ಸುನ್ನಿ ಸಮುದಾಯದ ಹಿರಿಯ ನಾಯಕ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು, ಯೆಮೆನನ್ ಸಂತ್ರಸ್ತ ತಲಾಲ್ ಅಬ್ದೊ ಮಹ್ದಿ ಅವರ ಕುಟುಂಬಸ್ಥರೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ. ಜೀವ ತೆಗೆದಿರುವುದಕ್ಕೆ ಕ್ಷಮೆಗೆ ಬದಲಾಗಿ ಹಣ ತೆಗೆದುಕೊಳ್ಳುವಂತೆ (ಬ್ಲಡ್ಮನಿ) ಮನವೊಲಿಸಲು ಹಿರಿಯ ನಾಯಕ ಅಬೂಬಕರ್ ಅವರು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:ಮಿತಿಮೀರಿ ಚಹಾ ಸೇವಿಸಿದರೆ ದೇಹಕ್ಕೆ ಏನೆಲ್ಲಾ ಆಗುತ್ತದೆ.. ದಿನಕ್ಕೆ ಎಷ್ಟು ಕಪ್ ಟೀ ಕುಡಿಯಬೇಕು?
94 ವರ್ಷದ ಹಿರಿಯ ನಾಯಕ ಕಾಂತಪುರಂ ಎಪಿ ಅಬೂಬಕರ್ ಅವರು ಯೆಮನ್ನ ಧಾರ್ಮಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಬೂಬಕರ್ ಅವರ ಆದೇಶದಂತೆ ಪ್ರಮುಖ ಧಾರ್ಮಿಕ ಸೂಫಿ ನಾಯಕ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರ ನೇತೃತ್ವದಲ್ಲಿ ಇಂದು ಧಮರ್‌ನಲ್ಲಿ ಸಭೆ ನಡೆಯಲಿದೆ. ಉಮರ್ ಬಿನ್ ಹಫೀಜ್ ಅವರ ಪ್ರತಿನಿಧಿಗಳು ಸಂತ್ರಸ್ಥ ಮಹ್ದಿ ಅವರ ಕುಟುಂಬಸ್ಥರೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಬೂಬಕರ್ ಅವರಿಗೆ ಸಂಬಂಧಿಸಿದವರು ಮಾತನಾಡಿ, ಸಂತ್ರಸ್ತನ ಸಂಬಂಧಿ ಈಗ ಹೊಡೈದಾ ರಾಜ್ಯ ಕೋರ್ಟ್ನ ಮುಖ್ಯ ನ್ಯಾಯಾಧೀಶರು ಆಗಿದ್ದಾರೆ. ಇವರು ಧಮರ್‌ನಲ್ಲಿ ನಡೆಯುವ ಮಾತುಕತೆಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಉಮರ್ ಬಿನ್ ಹಫೀಜ್ ಅವರೂ ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ಕುಟುಂಬಕ್ಕೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಕುಟುಂಬವನ್ನು ಮನವೊಲಿಸುವುದರ ಜೊತೆಗೆ, ನಾಳೆಗೆ ನಿಗದಿಯಾದ ಶಿಕ್ಷೆಯನ್ನ ಮುಂದೂಡಲು ಪ್ರಯತ್ನ ನಡೆದಿದೆ. ಅಟಾರ್ನಿ ಜನರಲ್ರನ್ನ ಭೇಟಿ ಮಾಡುವ ನಿರೀಕ್ಷೆ ಇದೆ ಎಂದು ಅಬೂಬಕರ್ಗೆ ಸಂಬಂಧಿಸಿದವರು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ