/newsfirstlive-kannada/media/post_attachments/wp-content/uploads/2024/07/nipah_virus.jpg)
ತಿರುವನಂತಪುರಂ: ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನೋರ್ವನಿಗೆ ನಿಫಾ ವೈರಸ್​ ಇರುವುದನ್ನು ಪುಣೆಯ ವೈರಾಲಜಿ ಲ್ಯಾಬ್ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಬಾಲಕನಿದ್ದ ಪಂಡಿಕ್ಕಾಡ್ ಗ್ರಾಮದ ಸುತ್ತ 3 ಕಿಲೋ ಮೀಟರ್​ವರೆಗೆ ಯಾರು ಸುಳಿಯದಂತೆ ನಿರ್ಬಂಧ ವಿಧಿಸಲಾಗಿದೆ.
ಬಾಲಕನಿಗೆ ನಿಫಾ ವೈರಸ್​ ದೃಢವಾದ ಸುದ್ದಿ ತಿಳಿಯುತ್ತಿದ್ದಂತೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, ನಿಫಾ ವೈರಸ್ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಕುರಿತು ಮಲಪ್ಪುರಂ ಜಿಲ್ಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಾಜ್ಯದೆಲ್ಲೆಡೆ ಜನರು ಜಾಗರೂಕತೆಯಿಂದ ಇರಬೇಕು. ಸದ್ಯದ ಪರಿಸ್ಥಿತಿ ಕುರಿತು ಗಮನದಲ್ಲಿ ಇಟ್ಟುಕೊಂಡು ಮಾಸ್ಕ್​ ಸೇರಿದಂತೆ ಇತರೆ ಸೂಚನೆಗಳನ್ನು ಪಾಲಿಸಬೇಕು. ಮಲಪ್ಪುರಂನ ಸಾರ್ವಜನಿಕ ಸ್ಥಳಗಳಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿ ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/nipah_virus_1.jpg)
ಜುಲೈ 19ರಂದು ಪುಣೆಯ ವೈರಾಲಜಿ ಪ್ರಯೋಗಾಲಯಕ್ಕೆ ಬಾಲಕನ ಮಾದರಿಗಳನ್ನ ಕಳುಹಿಸಲಾಗಿತ್ತು. ಅಲ್ಲಿಂದ ಬಂದಂತಹ ಮಾದರಿಗಳು ಪ್ರಸ್ತುತ ವೆಂಟಿಲೇಟರ್​ನಲ್ಲಿವೆ. ಬಾಲಕನ ಸ್ಥಿತಿ ಗಂಭೀರವಾದರೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗುವುದು. ಇನ್ನು ಬಾಲಕನನ್ನು ಸಂಪರ್ಕ ಮಾಡಿದ್ದವರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು ಇದುವರೆಗೆ 214 ಜನರನ್ನು ಅಬ್ಜರ್​ವೇಷನ್​​ನಲ್ಲಿ ಇಡಲಾಗಿದೆ. 60 ಜನರಿಗೆ ರಿಸ್ಕ್​ ಇದೆ ಎನ್ನಲಾಗಿದೆ. ವೈರಸ್​ ಅನ್ನು ನಿಯಂತ್ರಕ್ಕೆ ತೆಗೆದುಕೊಳ್ಳಲು ಏನೇನು ಮಾಡಬೇಕೋ ಅದನ್ನೆಲ್ಲ ರಾಜ್ಯ ಸರ್ಕಾರ ಮಾಡಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
2018ರಿಂದ ಇದುವರೆಗೂ ಕೇರಳದಲ್ಲಿ ನಾಲ್ಕು ಬಾರಿ ಈ ನಿಫಾ ವೈರಸ್ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಅಲ್ಲದೇ 2018ರಿಂದ ಇದುವರೆಗೂ 18 ಜನರಲ್ಲಿ ಈ ಭಯಾನಕ ವೈರಸ್​ ದೃಢವಾಗಿತ್ತು. ಇದರಲ್ಲಿ 17 ಜನರು ಅಸುನೀಗಿದ್ದರು ಎಂದು ವರದಿ ಹೇಳುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us