newsfirstkannada.com

WATCH: ಪ್ರಧಾನಿ ಸುತ್ತಾ ಸೂಟುಬೂಟಿನಲ್ಲಿ ಇರ್ತಿದ್ದ SPG ವೇಷ ದಿಢೀರ್‌ ಚೇಂಜ್; ಏನಿದರ ಸ್ಪೆಷಲ್‌?

Share :

Published January 17, 2024 at 2:54pm

Update January 17, 2024 at 2:56pm

    ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಮೋದಿ ಪ್ರವಾಸ

    ಪ್ರಧಾನಿ ಸುತ್ತ ಸೂಟುಬೂಟಿನಲ್ಲಿ ಇರ್ತಿದ್ದ SPG ಸಿಬ್ಬಂದಿ ಡ್ರೆಸ್ ಚೇಂಜ್!

    ತಿಪ್ರಯೂರ್ ರಾಮಸ್ವಾಮಿ, ಗುರುವಾಯೂರು ದೇವಾಲಯಕ್ಕೆ ನಮೋ ಭೇಟಿ

ಕೊಚ್ಚಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿರಾಜಮಾನನಾಗಿ ಕಂಗೊಳಿಸಲು ದಿನಗಣನೆ ಶುರುವಾಗಿದೆ. ಪ್ರಾಣ ಪ್ರತಿಷ್ಠಾಪನೆಯ ವಿಧಿವಿಧಾನಗಳು ಈಗಾಗಲೇ ಶುರುವಾಗಿವೆ. ಮರ್ಯಾದಾ ಪುರುಷೋತ್ತಮ ಬಾಲರಾಮನಾಗಿ ಜ.22ರಂದು ಪಟ್ಟಾಭಿಷಿಕ್ತನಾಗಲಿದ್ದು ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ ವಿವಿಧ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಕೇರಳಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಅವರ ಭದ್ರತಾ ಸಿಬ್ಬಂದಿ ಗಮನ ಸೆಳೆದಿದ್ದಾರೆ. ಪ್ರಧಾನಿ ಸುತ್ತ ಇರುತ್ತಿದ್ದ ಎಸ್‌ಪಿಜಿ ಸಿಬ್ಬಂದಿ ಸೂಟುಬೂಟು ಇಲ್ಲದೇ ಪಂಚೆ, ಶಲ್ಯ ಧರಿಸಿ ನ್ಯೂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ​

ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ಗುರುವಾಯೂರು ದೇವಾಲಯ, ತಿಪ್ರಯೂರ್ ರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಎಸ್​ಪಿಜಿ ಸಿಬ್ಬಂದಿ ಪಂಚೆ, ಶಲ್ಯ ಧರಿಸಿ ಪ್ರಧಾನಿಗೆ ಭದ್ರತೆ ನೀಡಿದ್ದಾರೆ. ಪ್ರಧಾನಿ ಮೋದಿ ಸುತ್ತ ಸದಾ ಸೂಟುಬೂಟು ಧರಿಸಿ ಕಪ್ಪು ಕನ್ನಡಕ ಹಾಕಿಕೊಂಡು ಹದ್ದಿನ ಕಣ್ಣಿಟ್ಟು ಓಡಾಡುತ್ತಿದ್ದ ಎಸ್‌ಪಿಜಿ ಸಿಬ್ಬಂದಿಯವರು ಇಂದು ಸಂಪ್ರದಾಯದಂತೆ ಪಂಚೆ, ಶಲ್ಯ ಧರಿಸಿ ಹೆಜ್ಜೆ ಹಾಕಿರುವುದು ಕಂಡು ಬಂದಿದೆ.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.22ರ ವರೆಗೆ ಮೋದಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಧಾರ್ಮಿಕ ಸ್ಥಳವಾಗಿದ್ದರಿಂದ ಎಸ್‌ಪಿಜಿ ಸಿಬ್ಬಂದಿ ಮೋದಿಯಂತೆ ಉಡುಪು ಧರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಸದ್ಯ ದೇಶದಲ್ಲಿ ಪ್ರಧಾನಿ ಮೋದಿಯವರಿಗೆ ಮಾತ್ರ ಈ ವಿಶೇಷ ಎಸ್‌ಪಿಜಿ ಭದ್ರತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಪ್ರಧಾನಿ ಸುತ್ತಾ ಸೂಟುಬೂಟಿನಲ್ಲಿ ಇರ್ತಿದ್ದ SPG ವೇಷ ದಿಢೀರ್‌ ಚೇಂಜ್; ಏನಿದರ ಸ್ಪೆಷಲ್‌?

https://newsfirstlive.com/wp-content/uploads/2024/01/MODI_SPG.jpg

Load More