ಮೊಟ್ಟೆ ಇಡದೇ ಜನ್ಮ ನೀಡುವ ಪ್ರಾಣಿ ಟೀಚರ್- ಮಕ್ಕಳ ಉತ್ತರಕ್ಕೆ ಬೇಸರಗೊಳ್ಳದೇ ಫುಲ್ ಮಾರ್ಕ್ಸ್​ ಕೊಟ್ಟ ಶಿಕ್ಷಕಿ

author-image
Bheemappa
Updated On
ಮೊಟ್ಟೆ ಇಡದೇ ಜನ್ಮ ನೀಡುವ ಪ್ರಾಣಿ ಟೀಚರ್- ಮಕ್ಕಳ ಉತ್ತರಕ್ಕೆ ಬೇಸರಗೊಳ್ಳದೇ ಫುಲ್ ಮಾರ್ಕ್ಸ್​ ಕೊಟ್ಟ ಶಿಕ್ಷಕಿ
Advertisment
  • ಮೊಟ್ಟೆಗಳನ್ನು ಇಟ್ಟು ಮರಿ ಮಾಡುವ ಪಕ್ಷಿಗಳು ಯಾವುವು?
  • ವಿದ್ಯಾರ್ಥಿನಿಯರು ಬರೆದ ಉತ್ತರಕ್ಕೆ ಶಾಕ್ ಆದ ಶಾಲಾ ಶಿಕ್ಷಕಿ
  • ನೇರ ಮರಿ ಹಾಕುವ ಪ್ರಾಣಿಗಳು ಯಾವುವು, ನಿಮ್ಗೆ ಗೊತ್ತಾ?

ಈಗಿನ ಮಕ್ಕಳ ಮೈಂಡ್ ಹೇಗೆಲ್ಲಾ ರನ್ ಆಗುತ್ತೆ ಎಂದು ಊಹಿಸುವುದೇ ಕಷ್ಟ. ಏಕೆಂದರೆ ಚಿತ್ರದುರ್ಗದಲ್ಲಿ 5ನೇ ತರಗತಿಯ ಇಬ್ಬರು ಶಾಲಾ ಮಕ್ಕಳು ಪ್ರಾಜೆಕ್ಟ್ ವರ್ಕ್ ಮಾಡಿಲ್ಲದ್ದಕ್ಕೆ ನಮ್ಮನ್ನು ಯಾರೋ ಕಿಡ್ನಾಪ್ ಮಾಡಿದ್ದರು ಎಂದು ಕತೆ ಕಟ್ಟಿದ್ದರು. ಇಬ್ಬರು ಸೇರಿ ಪೊಲೀಸರು, ಗ್ರಾಮಸ್ಥರನ್ನೇ ಯಾಮಾರಿಸಿಬಿಟ್ಟಿದ್ದರು. ಇದೀಗ ಅಂತಹದ್ದೆ ಒಂದು ಸುದ್ದಿಯಾದ್ರೂ, ಆದರೆ 2ನೇ ತರಗತಿ ವಿದ್ಯಾರ್ಥಿನಿಯರು ಮಾತ್ರ ಫುಲ್ ಮಾರ್ಕ್ಸ್​ ಪಡೆದುಕೊಂಡಿದ್ದಾರೆ.

ಕೇರಳದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿ ಸುನಿತಾ ಎನ್ನುವರು ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿನಿಯರಿಗೆ ಹೀಗೊಂದು ಪ್ರಶ್ನೆ ನೀಡಿ ಉತ್ತರಿಸಲು ಹೇಳಿದ್ದರು. ಮೊಟ್ಟೆಗಳನ್ನು ಇಟ್ಟು ಮರಿ ಮಾಡುವ ಪಕ್ಷಿಗಳು ಹಾಗೂ ನೇರವಾಗಿ ಮರಿಗೆ ಜನ್ಮ ನೀಡುವ ಪ್ರಾಣಿಗಳನ್ನು ಪಟ್ಟಿ ಮಾಡುವಂತೆ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಹೇಳಿದ್ದರು.

publive-image

ಇದನ್ನೂ ಓದಿ:BBK11; ವೈಲ್ಡ್​ ಕಾರ್ಡ್ ಎಂಟ್ರಿ ರಜತ್ ಈಗ ಕ್ಯಾಪ್ಟನ್​.. ಕಿಚ್ಚ ಬರೆದ ಪತ್ರದಲ್ಲಿ ಏನಿದೆ?

ಈ ಪ್ರಶ್ನೆಗೆ ಎರಡನೇ ತರಗತಿಯ ವಿದ್ಯಾರ್ಥಿನಿಯರು ಆಕರ್ಷಕ ಉತ್ತರಗಳನ್ನ ಬರೆದಿದ್ದಾರೆ. ಮೊಟ್ಟೆ ಇಟ್ಟು ಜನ್ಮ ನೀಡುವ ಪಕ್ಷಿಗಳು ಬಾತುಕೋಳಿ, ಹಾವು, ಮೀನು ಮತ್ತು ಕಾಗೆ ಹೆಸರುಗಳನ್ನು ಬರೆದರೆ, ಮೊಟ್ಟೆ ಇಡದೆ ನೇರವಾಗಿ ಮರಿಗೆ ಜನ್ಮ ನೀಡುವ ಪ್ರಾಣಿಗಳು ಆನೆ, ನಾಯಿ, ಹಸು, ಹುಲಿ, ಸಿಂಹ, ಚಿರತೆ ಹಾಗೂ ಶಿಕ್ಷಕಿ ಹೆಸರು ಸುನಿತಾ ಎಂದು ಬರೆದಿದ್ದಾರೆ. ಮನುಷ್ಯರು ಕೂಡ ನೇರವಾಗಿ ಜನ್ಮ ನೀಡುತ್ತಾರೆ ಎಂಬುದನ್ನ ಅರಿತ ವಿದ್ಯಾರ್ಥಿನಿಯರು ಶಿಕ್ಷಕಿಯ ಹೆಸರನ್ನೂ ಬರೆದಿದ್ದಾರೆ.

ಇಲ್ಲಿ ಉತ್ತರ ತಪ್ಪು ಎಂದು ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಪೂರ್ಣ ಅಂಕ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶಿಕ್ಷಕಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗಿದೆ. ಹೀಗಾಗಿ ಪೋಸ್ಟ್ ಅನ್ನು ನೋಡಿದ ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment