ಉಪ್ಪಿಟ್ಟು ಬೇಡ, ಚಿಕನ್ ಬಿರಿಯಾನಿ ಬೇಕೆಂದ ಅಂಗನವಾಡಿಯ ಮಗು; ಕಂದನ ಬೇಡಿಕೆಗೆ ಸ್ಪಂದಿಸಿದ ಸರ್ಕಾರ

author-image
Gopal Kulkarni
Updated On
ಉಪ್ಪಿಟ್ಟು ಬೇಡ, ಚಿಕನ್ ಬಿರಿಯಾನಿ ಬೇಕೆಂದ ಅಂಗನವಾಡಿಯ ಮಗು; ಕಂದನ ಬೇಡಿಕೆಗೆ ಸ್ಪಂದಿಸಿದ ಸರ್ಕಾರ
Advertisment
  • ನನಗೆ ಉಪ್ಪಿಟ್ಟು ಬೇಡ ಬಿರಿಯಾನಿ ಬೇಕು ಎಂದ ಬಾಲಕ
  • ಅಂಗನವಾಡಿ ಬಾಲಕನ ಬೇಡಿಕೆಯ ವಿಡಿಯೋ ವೈರಲ್​
  • ಮಗುವಿನ ಬೇಡಿಕೆ ಈಡೇರಿಸವುದಾಗಿ ಹೇಳಿದ ಸರ್ಕಾರ

ಪುಟ್ಟ ಮಕ್ಕಳು ಏನು ಮಾಡಿದರು ಚೆಂದವೇ. ಅವುಗಳ ತೊದಲು ನುಡಿಯಿಂದ ಆಡುವ ಒಂದೊಂದು ಮಾತುಗಳು ಅದರಲ್ಲೂ ಅಂಗನವಾಡಿ, ಎಲ್​ಕೆಜಿ ಯುಕೆಜಿ ಮಕ್ಕಳು ಆಡುವ ಮಾತುಗಳು ವೈರಲ್ ಆಗುತ್ತವೆ. ಆದ್ರೆ ಇಲ್ಲೊಬ್ಬ ಅಂಗಡನವಾಡಿ ಬಾಲಕ ಆಡಿದ ಮಾತುಗಳು ಸರ್ಕಾರದವರೆಗೂ ಮುಟ್ಟಿದ ವಿಚಿತ್ರ ಘಟನೆ ನಡೆದಿದೆ. ಕೇರಳದ ಅಂಗನವಾಡಿ ಪುಟ್ಟ ಬಾಲಕನೊಬ್ಬ ಉಪ್ಪಿಟ್ಟಿನ ಬದಲು ಚಿಕನ್ ಫ್ರೈ ಇಲ್ಲವೇ ಚಿಕನ್ ಬಿರಿಯಾನಿ ಬೇಕು ಎಂದು ತನ್ನ ತಾಯಿಯ ಹತ್ತಿರ ಬೇಡಿಕೆ ಇಟ್ಟಿದ್ದಾನೆ ಈ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಬಾಲಕನ ಈ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ವೀಣಾ ಜಾರ್ಜ್ ಮಗುವಿನ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?

ಈ ವಿಡಿಯೋವನ್ನು ಹಂಚಿಕೊಂಡಿರುವ ವೀಣಾ ಜಾರ್ಜ್ ಶಂಕು ಎಂಬ ಮಗು ತುಂಬಾ ಮುಗ್ಧವಾಗಿ ಒಂದು ಮನವಿಯನ್ನು ಮಾಡಿಕೊಂಡಿದೆ. ಇದನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ. ಮಗು ಶಂಕುವಿಗೆ, ಅವರ ತಾಯಿಗೆ ಹಾಗೂ ಅಂಗನವಾಡಿ ಸಿಬ್ಬಂದಿಗೆ ಸಂದೇಶ ನೀಡಿರುವ ಸಚಿವೆ, ಅಂಗನವಾಡಿಗೆ ನೀಡಲಾಗುವ ಆಹಾರದ ಮೆನುವನ್ನು ಪರಿಶೀಲಿಸಲಾಗುವುದು, ಶಂಕುವಿನ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ನಾವು ಅಂಗನವಾಡಿಗೆ ಅನೇಕರ ರೀತಿಯ ಪೌಷ್ಠಿಕಾಂಶ ನೀಡುವ ಆಹಾರವನ್ನು ನೀಡುತ್ತಿದ್ದೇವೆ. ಈಗ ಮಗು ಈ ಮನವಿಯನ್ನು ಮಾಡಿಕೊಂಡಿದ್ದು ಇದನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.


">February 3, 2025

ನಮ್ಮ ಸರ್ಕಾರದ ಯೋಜನೆಯಲ್ಲಿ ಅಂಗನವಾಡಿಗೆ ಮೊಟ್ಟೆ ಮತ್ತು ಹಾಲನ್ನು ಪೂರೈಸುವ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ, ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಈಗಾಗಲೇ ವಿವಿಧ ರೀತಿಯ ಆಹಾರವನ್ನು ಅಂಗನವಾಡಿ ಮಕ್ಕಳಿಗೆ ಸರ್ಕಾರ ನೀಡುತ್ತಿದೆ ಎಂದು ಜಾರ್ಜ್ ಹೇಳಿದ್ದಾರೆ.

ಇದನ್ನೂ ಓದಿ: ಕಬಾಲಿ ಸಿನಿಮಾ ನಿರ್ಮಾಪಕ ಕೆ.ಪಿ ಚೌದರಿ ಇನ್ನಿಲ್ಲ; ಜೀವ ಕಳೆದುಕೊಂಡ ಕಾರಣ ರಿವೀಲ್

ವೈರಲ್ ಆದ ವಿಡಿಯೋದಲ್ಲಿ ಮಗುವೊಂದು ತಲೆಯ ಮೇಲೋಂದು ಕ್ಯಾಪ್ ಹಾಕಿಕೊಂಡು ತನ್ನ ತಾಯಿಯ ಹತ್ತಿರ, ತೊದಲು ನುಡಿಯಿಂದ ನನಗೆ ಉಪ್ಪಿಟ್ಟಿನ ಬದಲು ಬಿರ್ನಾನಿ (ಬಿರಿಯಾನಿ) ಮತ್ತು ಪೊರಚಿ ಕೊಚಿ(ಚಿಕನ್ ಫ್ರೈ) ಬೇಕು ಎಂದು ಮುಗ್ಧವಾಗಿ ಹೇಳಿಕೊಂಡಿದೆ. ಇದನ್ನು ವಿಡಿಯೋ ಮಾಡಿಕೊಂಡಿರುವ ತಾಯಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಸರ್ಕಾರದ ಗಮನಕ್ಕೆ ತಲುಪುವವರೆಗೆ ಸುದ್ದಿಯಾಗಿದೆ, ನೆಟ್ಟಿಗರು ಕೂಡ ಅವನ ಬೇಡಿಕೆಗೆ ಬೆಂಬಲ ನೀಡಿದ್ದಾರೆ. ಜೈಲಿನಲ್ಲಿ ಅಪರಾಧಿಗಳಿಗೆ ನೀಡುವ ಆಹಾರವನ್ನು ಕಡಿಮೆ ಮಾಡಿ ಅಂಗನವಾಡಿ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಹೆಚ್ಚು ಆಹಾರ ಪೂರೈಸಿ ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸರ್ಕಾರದ ಗಮನವನ್ನು ಕೂಡ ಸೆಳೆದಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್​ ಅಂಗನವಾಡಿ ಆಹಾರದ ಪಟ್ಟಿಯನ್ನು ಸದ್ಯದಲ್ಲಿಯೇ ಆ ಮಗುವಿನ ಬೇಡಿಕೆಗೆ ಅನುಗುಣವಾಗಿ ಪರಿಶೀಲನೆಗೊಳಪಡಿಸಲಾಗುವುದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment