Advertisment

ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸುಗೂಸುಗಳಿಗೆ ಹಾಲುಣಿಸಿದ ತಾಯಿ!

author-image
Bheemappa
Updated On
ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!
Advertisment
  • ಗಂಡ ಬದುಕಿದ್ದಾನೋ, ಸಾವನ್ನಪ್ಪಿದ್ದಾನೋ ಎನ್ನುವುದು ಪತ್ನಿ ಗೊತ್ತಿಲ್ಲ
  • ಗುಡ್ಡದ ಭೂತದಿಂದ ಎಲ್ಲವೂ ಸರ್ವನಾಶ, ಉಟ್ಟ ಬಟ್ಟೆಯಲ್ಲಿದ್ದಾರೆ ಜನ
  • ವಯನಾಡಿನ ದುರಂತದಲ್ಲಿ ಸ್ವಾರ್ಥ ಸತ್ತು, ಮಾನವೀಯತೆ ಅನಾವರಣ

ಭೂ ಜಲ ಪ್ರಳಯಕ್ಕೆ ನಲುಗಿರುವ ವಯನಾಡು ಅಕ್ಷರಶಃ ದುರಂತ ಭೂಮಿಯಾಗಿದೆ. ಗಂಟೆಗಳು ಕಳೆದಂತೆಲ್ಲ ಒಂದೊಂದು ಕಣ್ಣೀರು ಕಥೆಗಳು ಕರುಳು ಹಿಂಡುತ್ತಿವೆ. ಇದೆಲ್ಲದರ ಮಧ್ಯೆ ನೊಂದವರಿಗಾಗಿ ನೂರಾರು ಹೃದಯಗಳು ಮಿಡಿಯುತ್ತಿವೆ. ತಮ್ಮವರ ಕಣ್ಣೀರಿಗೆ ಸಂಕಟಕ್ಕೆ ಮಿಡಿದ ಆ ವಿಶಾಲ ಹೃದಯಗಳು ಒಂದೊಂದು ಕಥೆ ರೋಮಾಂಚನವಾಗುತ್ತೆ. ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ಅಜ್ಜ. ಹಸೂಗೂಸುಗಳಿಗೆ ತನ್ನ ಎದೆ ಹಾಲನ್ನೆ ಉಣಿಸುವೆ ಎಂದ ಮಹಾತಾಯಿ. ವಯನಾಡಿನ ರಕ್ಷಣಾ ದೇವೆತಗಳ ಸ್ಪೇಷಲ್​ ರಿಪೋರ್ಟ್​ ಇಲ್ಲಿದೆ.

Advertisment

ಇದನ್ನೂ ಓದಿ: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?

ಪ್ರಕೃತಿ ಮುನಿಸಿನಿಂದಾಗಿ ನಿಂತ ನೆಲವೇ ಕುಸಿದು ಹೋಗಿದೆ. ದೇವರನಾಡಿಯಲ್ಲಿ ಈಗ ಚಿಂತೆಯೇ ಗುಡ್ಡವಾಗುತ್ತಿದೆ. ಎಲ್ಲವನ್ನೂ ಎಲ್ಲರನ್ನ ಆಪೋಶನ ಪಡೆದ ಗುಡ್ಡದ ಭೂತದಿಂದ ಎತ್ತ ನೋಡಿದ್ರೂ ನೋವಿನ ನೋಟಗಳೇ ಕಣ್ಣಿಗೆ ಬೀಳುತ್ತಿವೆ. ಬೆಟ್ಟದ ಜೀವಗಳ ಆಕ್ರಂದನದ ಸದ್ದು ರಭಸದಿಂದ ಹರಿಯುತ್ತಿರುವ ನೀರಿನ ಬೋರ್ಗರೆತವನ್ನೂ ಮೀರಿ ಕೇಳಿಸುತ್ತಿದೆ. ದಿಕ್ಕು ತಪ್ಪಿ ಹರಿದ ನದಿಯ ಆರ್ಭಟಕ್ಕೆ ಕುಸಿದ ಗುಡ್ಡಗಳ ನಡುವೆ ಹಲವರ ಬದುಕು ಅವರು ಕನಸುಗಳು ಸಮಾಧಿಯಾಗಿ ಹೋಗಿವೆ. ಆದ್ರೆ ಇದೆಲ್ಲದರ ಮಧ್ಯೆ ಮಾನವೀಯತೆಯೂ ಗೆದ್ದು ಬೀಗಿದೆ. ಸ್ವಾರ್ಥ ಪ್ರಪಂಚದಲ್ಲಿ ನಮ್ಮ ಕಷ್ಟ ನಮಗೆ ಅಂತ ಹೇಳೋರೆ ಹೆಚ್ಚು.. ಆದ್ರೆ ವಯನಾಡಿನ ದುರಂತದಲ್ಲಿ ಸ್ವಾರ್ಥ ಸತ್ತು ಹೋಗಿ ಮಾನವೀಯತೆ ಮುಖ ಅನಾವರಣಗೊಂಡಿದೆ. ನೊಂದವರ ಕಷ್ಟಕ್ಕೆ.. ತಮ್ಮವರನ್ನ ಕಳೆದುಕೊಂಡವರ ನೋವಿಗಾಗಿ ನೂರಾರು ಹೃದಯಗಳು ಮಿಡಿಯುತ್ತಿವೆ.

ಇದನ್ನೂ ಓದಿ: ₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ.. ₹120 ಬಕೆಟ್​ ಮೇಲೆ ಅವಲಂಬಿತ ಆಯ್ತಾವೆಂದು ವ್ಯಂಗ್ಯ

Advertisment

publive-image

ವಿಶಾಲವಾದ ಹೃದಯಕ್ಕಿಂತ ಗುಡಿಯು ಎಲ್ಲಿದೆ. ಪ್ರೀತಿಯು ತೋರಿಸೋ ಮನುಜ ಬಿಟ್ಟು ದೈವವೂ ಬೇರೆ ಎಲ್ಲಿದೆ. ಈ ಸಾಲುಗಳು ವಯನಾಡಿನ ದುರಂತದಲ್ಲಿ ಸತ್ಯವಾಗಿವೆ. ಯಾಕಂದ್ರೆ ಮಹಾ ಪ್ರಳಯದಲ್ಲಿ ಮನೆ ಮಠ.. ಅಪ್ಪ ಅಮ್ಮ.. ಅಣ್ಣ ತಂಗಿ.. ಸಂಬಂಧಿಗಳನ್ನ ಕಳೆದುಕೊಂಡು ನೂರಾರು ಜನ ನಿರಾಶ್ರಿತರಾಗಿದ್ದಾರೆ. ಒದೊಂದು ಕುಟುಂಬದಲ್ಲಿ ಒಬ್ಬರೂ ಇಬ್ಬರೂ ಮಾತ್ರ ಉಳಿದುಕೊಂಡಿದ್ದಾರೆ. ಅವರೆಲ್ಲ ನಮಗೆಲ್ಲ ಯಾರು ದಿಕ್ಕು.. ನಮ್ಮವರು ಯಾರು.. ಮುಂದಿನ ಬದುಕು ಏನು ಯಕ್ಷ ಪ್ರಶ್ನೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ.. ಆದ್ರೆ ಇಂಥ ನೊಂದ ಜೀವಗಳಿಗೆ ಒಂದಿಷ್ಟು ವಿಶಾಲ ಹೃದಯಗಳು ಆಸರೆ ಕೈ ಚಾಚಿವೆ. ಕರುಣೆ, ವಾತ್ಸಲ್ಯ ಸೌಜನ್ಯವೂ ಲೋಕಕ್ಕೆ ಜೀವ ಅನ್ನೋ ಮಾತಿನಂತೆ.. ಈ ಸಹೃದಯಿಗಳು ನೀನು, ನಾನು ಎಂಬ ಭೇದ ಮರೆತು ಭೂ ಪ್ರಳಯದಲ್ಲಿ ಬೆಂದ ಜೀವಗಳಿಗೆ ನೆರವಾಗಿದ್ದಾರೆ.

ಅನಾಥವಾದ ಹಸುಗೂಸುಗಳಿಗೆ ಹಾಲು ಉಣಿಸಲು ಬಂದ ತಾಯಿ

ದೇವರನಾಡು ಕೇರಳದ ವಯನಾಡು ಅಕ್ಷರಶಃ ಸ್ಮಶಾನವಾಗಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಲೆಕ್ಕವೇ ಸಿಗ್ತಿಲ್ಲ. ಸತ್ತವರ ದೇಹ ಸಿಕ್ರೂ ತಮ್ಮವರು ಯಾರು ಅಂತ ಗುರುತು ಸಿಗದಂತ ಪರಿಸ್ಥಿತಿ. ಈ ಮಧ್ಯೆ ಮರಣ ಮಳೆಯಿಂದ ಅದೆಷ್ಟು ಕಂದಮ್ಮಗಳು ಅನಾಥವಾಗಿವೆ. ಅದ್ರಲ್ಲೂ ಹಾಲು ಕುಡಿಯುವ ಹಸುಗೂಸುಗಳು ಅಮ್ಮನಿಲದೇ ರೋದನೆ ಅನುಭವಿಸ್ತಿವೆ. ಅಮ್ಮನ ಬೆಚ್ಚಗೆಯ ಅಪ್ಪುಗೆಯಲ್ಲಿ ಸಿಹಿ ನಿದ್ದೆ ಮಾಡಬೇಕಿದ್ದ ಕಂದಮ್ಮ ಕಾಳಜಿ ಕೇಂದ್ರದಲ್ಲಿ ಅಮ್ಮ ಅಮ್ಮ ಅಂತ ಕೂಗುತ್ತಿವೆ. ಆ ಮಕ್ಕಳ ಗೋಳಾಟ ನೋಡಿದ್ರೆ ಕಣ್ಣಾಲಿಗಳಲ್ಲಿ ಕಂಬನಿ ಹಾಗೆ ಜಾರಿ ಬಿಡುತ್ತೇನೂ. ಆದ್ರೆ ಇಂಥ ಮಕ್ಕಳಿಗಾಗಿ ಇಲ್ಲೋಬ್ಬ ಮಹಾತಾಯಿ ಆಸರೆಯಾಗಿ ನಾನಿದ್ದೀನಿ ಎಂದಿದ್ದಾರೆ. ತಾಯಂದಿರನ್ನ ಕಳೆದುಕೊಂಡ ಹಸುಗೂಸುಗಳಿಗೆ ಎದೆಹಾಲು ಕೊಡುತ್ತೇನೆ ಅಂತ ಈ ತಾಯಿ ಮುಂದೆ ಬಂದಿದ್ದಾರೆ.

ತಾಯಿ ಕರುಳು ಅಂದ್ರೆನೇ ಹಾಗೇ ಅಲ್ವಾ.. ಆಕೆ ತ್ಯಾಗಮಯಿ.. ಕರುಣಾಮಯಿ ಅನ್ನೋದಕ್ಕೆ ಉದಾಹರಣೆಗಳು ಬೇಕಿಲ್ಲ. ಕೇರಳದ ಕಾಳಜಿ ಕೇಂದ್ರದಲ್ಲಿ ಅಮ್ಮನಲ್ಲಿ ಮರುಗುತ್ತಿರುವ ಪುಟ್ಟ ಕಂದಮ್ಮಗಳಿಗಾಗಿ ಈ ತಾಯಿ ಹೃದಯ ಮಿಡಿದಿದೆ. ಇಡುಕ್ಕಿಯಲ್ಲಿರುವ ಸಜೀನ್ ಪಾರೇಕರ್ ಪತ್ನಿ ಭಾವನಾ ಅಮ್ಮನಿಲ್ಲದ ಕಂದಮ್ಮಳಿಗಾಗಿ ತಮ್ಮ ಎದೆ ಹಾಲೂಣಿಸುವ ಮನಸ್ಸು ಮಾಡಿದ್ದಾರೆ.

Advertisment

ಇದನ್ನೂ ಓದಿ: KL ರಾಹುಲ್​- ಪಂತ್​ ಮಧ್ಯೆ ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಬಿಗ್ ಫೈಟ್​.. ಯಾರಿಗೆ ಸಿಗುತ್ತೆ ಚಾನ್ಸ್​?

ಸಚಿನ್ ಪಾರೇಕರ್​ ಮತ್ತು ಭಾವನಾ ದಂಪತಿಗೂ ಒಂದು ಹೆಣ್ಣು ಒಂದು ಗಂಡು ಮಗುವಿದೆ. ಗಂಡು ಮಗುವಿನ ಹೆಸರು ಎಲ್ವಿನ್ ಅಂತ. ಈ ಎಲ್ವಿನ್​ ಹುಟ್ಟಿ ಜಸ್ಟ್ 4 ತಿಂಗಳಷ್ಟೆ. ಹಾಗಾಗಿ ಎಲ್ವಿನ್​ಗೆ ಸ್ವಲ್ಪ ಹಾಲುಣಿಸೋದು ತಡವಾದ್ರೂ ಅವನು ಅಳ್ತಿರೋದು ನೋಡೋದನ್ನ ಭಾವಾನಾಗೆ ಕಷ್ಟ ಆಗ್ತಿತ್ತು. ವಯನಾಡಿನ ದುರಂತದಲ್ಲೂ ಅದೆಷ್ಟು ಕಂದಮ್ಮಗಳು ಅಮ್ಮನಿಲ್ಲದೇ ಎದೆ ಹಾಲಿಲ್ಲದೇ ಅದೆಷ್ಟು ಸಂಕಷ್ಟ ಪಡ್ತಿರಬೇಕು ಅನ್ನೋದು ಈ ದಂಪತಿಯ ಅರಿವಿಗೆ ಬಂದಿತ್ತು. ಹೀಗಾಗಿ ಸಜೀನ್ ಮತ್ತು ಭಾವನಾ ಇಬ್ಬರು ನಿರ್ಧಾರ ಮಾಡಿ ಕೊನೆಗೆ ಇಡುಕ್ಕಿಯಿಂದ ವಯನಾಡಿಗೆ ಬಂದಿದ್ದಾರೆ. ಇದಷ್ಟೆ ಅಲ್ಲ ವಾಟ್ಸಪ್​ನಲ್ಲೂ ಮಾಹಿತಿ ಹಂಚಿಕೊಂಡಿರುವ ಈ ಸಹೃದಯಿಗಳು ಅನಾಥ ಹಸೂಗೂಸುಗಳಿಗೆ ಎದೆ ಹಾಲುಣಿಸುತ್ತಿದ್ದಾರೆ. ಈ ಮೂಲಕ ಮಾನವೀಯತೆಯನ್ನೆ ಎತ್ತಿ ಹಿಡಿದಿದ್ದಾರೆ.

ಶಿವಗಾಮಿಯಂತೆ ಮೊಮ್ಮಗ & ಮಗಳನ್ನ ಕಾಪಾಡಿದ ಅಜ್ಜ!

ಬಲ್ಲಾಳನಿಂದ ಬಾಹುಬಲಿಯ ಮಗನನ್ನ ರಕ್ಷಣೆ ಮಾಡೋದಕ್ಕೆ ಶಿವಗಾಮಿಯ ಸಾಹಸ ನೋಡಿದ ಜನ ನಿಬ್ಬೆರಗಾಗಿದ್ದರು. ಇತ್ತ ವಯನಾಡಿನ ಗುಡ್ಡದ ದುರಂತದಲ್ಲೂ ಥೇಟ್ ಶಿವಗಾಮಿಯಂತೆ ಅಜ್ಜನೊಬ್ಬ ಮಗಳು ಮೊಮ್ಮಕ್ಕಳನ್ನ ರಕ್ಷಣೆ ಮಾಡಿದ್ದಾನೆ. ವಯನಾಡಿನ 60 ವರ್ಷದ ಅಜ್ಜ ಮೋಯಿದ್ ರಾತ್ರಿ ನೆಮ್ಮದಿಯಾಗಿ ನಿದ್ರೆಗೆ ಜಾರಿದ್ದ. ಆದ್ರೆ ಏಕಾಏಕಿ ರಾತ್ರಿ ನೀರು ಮನೆಗೆ ನುಗ್ಗಿ ಬಿಟ್ಟಿತ್ತು. ಈ ವೇಳೆ ಮೊಯಿದ್​ ಕೊಂಚ ಅಳುಕಲಿಲ್ಲ. ಹರಿವ ನೀರಿನಲ್ಲೇ ಮಗಳ ಕೋಣೆಗೆ ಹೋಗಿ ನೋಡಿದ್ರೆ, ಆಕೆ ಕೋಣೆಯೂ ನೀರಿನಿಂದ ಆವರಿಸಿತ್ತು. ಕೈಯಲ್ಲಿದ್ದ ಮಗು ಅಳ್ತಿತ್ತು. ಎದೆಯೆತ್ತರಕ್ಕೆ ನೀರು ತುಂಬಿತ್ತು. ಆದ್ರೂ 60 ವರ್ಷದ ಮೊಯಿದ್ ಮಗಳು ಮೊಮ್ಮಗನನ್ನ ಕಾಪಾಡೋದಕ್ಕೆ ಹರಸಾಹಸವನ್ನೆ ಪಟ್ಟು ಬಿಟ್ಟಿದ್ದ.

Advertisment

ಒಂದು ಕೈಯಲ್ಲಿ ಮೊಮ್ಮಗ.. ಅಪ್ಪನ ಬೆನ್ನು ಹಿಡಿದು ನಿಂತ ಮಗಳು.. ಇನ್ನೊಂದು ಕೈಯಲ್ಲಿ ಫ್ಯಾನ್ ಹಿಡಿದುಕೊಂಡು ನೀರು ಕಮ್ಮಿಯಾಗುವರೆಗೂ ಮೊಯಿದ್​ ಹಾಗೆಯೇ ನಿಂತಿದ್ದ. ಬೆಳಗಿನ ಜಾವ ನೀರು ಕಮ್ಮಿಯಾಗುವರೆಗೂ ನೀರಲ್ಲೇ ನಿಂತಿದ್ದ ಮೊಯಿದ್ ಅಜ್ಜ. ನೀರು ಕಮ್ಮಿಯಾದ್ಮೆಲೆ ಹೊರಗೆ ಬಂದು ರಸ್ತೆಗೆ ಬಂದು ನಿಂತಿದ್ರು. ಅಷ್ಟರಲ್ಲೇ ರಸ್ತೆಯಲ್ಲಿ ಜೀಪ್ ಒಂದು ಬರ್ತಿತ್ತು. ಇವರ ಪರಿಸ್ಥಿತಿ ಕಂಡ ಜೀಪ್​ನಲ್ಲಿದ್ದ ಜನ. ತಕ್ಷಣವೇ ಮೂವರನ್ನ ಜೀಪ್​ಗೆ ಹತ್ತಿಸಿಕೊಂಡು ಆಸ್ಪತ್ರೆಗೆ ಕರ್ಕೊಂಡು ಬಂದಿದ್ರು. ಹೀಗೆ ಮೊಯಿದ್ ಅಜ್ಜ ಪ್ರವಾಹದ ಮಧ್ಯೆ ಹಿಂಜರಿಯದೇ ನಿಂತು ಮಗಳು ಮೊಮ್ಮಗಳನ್ನ ಕಾಪಾಡಿದ್ದ.

ಮನೆಯವರನ್ನು ಕಾಪಾಡಿ ಪ್ರಾಣ ಕಳೆದುಕೊಂಡ ಮುನೀರ್​

ಮೋಯಿದ್​ ದು ಒಂದು ಕತೆಯಾದ್ರೆ.. ಇತ್ತ ಚೂರಲ್​ ಮಲಾ ನಿವಾಸಿ ಮುನೀರ್​ದು ಮತ್ತೊಂದು ಕರುಣಾಮಯಿ ಕಥೆ. ರಾತ್ರಿ 2 ಗಂಟೆ ಸುಮಾರಿಗೆ ಮುನೀರ್​ ಮನೆಗೆ ನದಿಯ ನೀರು ನುಗ್ಗಿಬಿಟ್ಟಿತ್ತು. ನೀರಿನ ಶಬ್ಧಕ್ಕೆ ಎಚ್ಚರಗೊಂಡ ಮುನೀರ್ ಪತ್ನಿ ಶಬಾನಾ ಪತಿ ಮುನೀರ್​ನ್ನ ಎಚ್ಚರಿಸಿದ್ದಾರೆ. ನೋಡಿದ್ರೆ ಮನೆ ತುಂಬಾ ನೀರು. ತಕ್ಷಣವೇ ಮುನೀತ್ ಪತ್ನಿ ಶಬಾನ ಮತ್ತು ಮಕ್ಕಳನ್ನ ಹೆಗಲ ಮೇಲೆ ಹೊತ್ತು ನೀರಿನಿಂದ ಆಚೆ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದ. ಆದ್ರೆ ಹೆಂಡತಿ ಮಕ್ಕಳನ್ನ ಕಾಪಾಡಿದ ಮುನೀರ್​ ಬದುಕುಳಿದಿಲ್ಲ.

ಇದನ್ನೂ ಓದಿ: IPL 2025; ಶಾರುಕ್​ ಖಾನ್- ಪಂಜಾಬ್​ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?

Advertisment

ಯಾರೇ ಆಗಲಿ ತಾವೊಬ್ಬರು ಬಚಾವ್ ಆದ್ರೆ ಸಾಕು ಅಂತ ನೋಡ್ತಾರೆ.. ಆದ್ರೆ ಮುನೀರ್ ಮಾನವೀಯತೆಯನ್ನ ಮರೆತಿರಲಿಲ್ಲ. ತನ್ನ ಹೆಂಡತಿ ಮಕ್ಕಳನ್ನ ಕಾಪಾಡಿದ್ರೂ ಪ್ರವಾಹದಲ್ಲಿ ಸಿಲುಕಿದ್ದ ನೆರೆ ಮನೆಯವರ ರಕ್ಷಣೆಗೆ ಮುಂದಾಗಿದ್ದ ಮತ್ತೆ ವಾಪಸ್ ಹೋಗಿದ್ದ.ದುರಂತ ಏನಂದ್ರೆ ವಾಪಸ್ ಹೋದ ಮುನೀರ್ ಎಲ್ಲಿದ್ದಾನೆ ಅನ್ನೋದೆ ಗೊತ್ತಾಗಿಲ್ಲ. ಇತ್ತ ಕಾಳಜಿ ಕೇಂದ್ರ ಸೇರಿರುವ ಮುನೀರ್ ಪತ್ನಿ ಮತ್ತು ಮಕ್ಕಳು ಅಪ್ಪನ ಬರುವಿಕೆಗಾಗಿ ಆಸೆಗಣ್ಣಿನಿಂದ ಕಾಯ್ತಿದ್ದಾರೆ. ಇನ್ನಾರದ್ದು ಪ್ರಾಣ ಉಳಿಸಲು ಹೋದ ಮುನೀರ್ ಕಣ್ಮರೆಯಾಗಿದ್ದು ಬದುಕಿದ್ದಾನಾ? ಇಲ್ವಾ ಅನ್ನೋದೆ ಈಗ ಪತ್ನಿಗೆ ಪ್ರಶ್ನೆಯಾಗಿ ಉಳಿದಿದೆ.

ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

publive-image

ದಿಕ್ಕೆಟ್ಟವರಿಗೆ ಚೀಲಗಟ್ಟಲೆ ಬಟ್ಟೆ, ಚಪ್ಪಲಿ ಕೊಟ್ಟ ವ್ಯಾಪಾರಿಗಳು!

ಕುಸಿದು ಬಂದ ಬೆಟ್ಟದಿಂದಾಗಿ ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ. ಸೋಮವಾರದ ತನಕ ನೆಮ್ಮದಿಯಾಗಿದ್ದವರು ಇವತ್ತು ಊಟಕ್ಕಾಗಿ ಬಟ್ಟೆಗಾಗಿ ಪರದಾಡುವಂತ ಪರಿಸ್ಥಿತಿಗೆ ಬಂದಿದ್ದಾರೆ. ಗುಡ್ಡದ ಭೂತದಿಂದ ಎಲ್ಲವೂ ಸರ್ವನಾಶವಾಗಿದೆ. ಪರಿಣಾಮ ಉಟ್ಟ ಬಟ್ಟೆಯಲ್ಲೆ ಅದೆಷ್ಟು ಜನ ಕಾಳಜಿ ಕೇಂದ್ರ ಸೇರಿದ್ದಾರೆ.. ಹಾಗಾಗಿ ನಿರಾಶ್ರಿತ್ರರಿಗಾಗಿ ವಯನಾಡಿನ ವ್ಯಾಪಾರಿಗಳು ನೆರವಿನ ಹಸ್ತ ಚಾಚಿದ್ದಾರೆ. ವಡಕಾರ್ ಪುತ್ತೂರಿನಲ್ಲಿರುವ ಕರೀಮ ಎಂಬ ಬಟ್ಟೆ ವ್ಯಾಪಾರಿ.. ಅಂಗಡಿಯಲ್ಲಿದ್ದ ಬಟ್ಟೆಗಳನ್ನಲ ನಿರಾಶ್ರಿತರಿಗಾಗಿ ದಾನ ಮಾಡಿದ್ದಾರೆ. ಗಂಡನ ಸಹಾಯಕ್ಕೆ ಕರೀಮ ಪತ್ನಿ ಕೂಡ ಕೈ ಚಾಚಿದ್ದು ದಂಪತಿ ಜೊತೆಗೂಡಿ ನೊಂದ ಜೀವಗಳಿಗೆ ನೆರವಾಗುವ ಮನಸ್ಸು ಮಾಡಿದ್ದಾರೆ.

ಇನ್ನೊಂದೆಡೆ ಶೂ ವ್ಯಾಪಾರಿಯೊಬ್ಬರು ನಿರಾಶ್ರಿತರಿಗಾಗಿ ಚೀಲಗಟ್ಟಲೇ ಶೂಗಳನ್ನ ನೀಡಿದ್ದಾರೆ. ಅಂಗಡಿಯಲ್ಲಿದ್ದ ಚಪ್ಪಲಿ ಶೂಗಳನ್ನ ಚೀಲದಲ್ಲಿ ತುಂಬಿಸಿ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಕಳಿಸಿಕೊಟ್ಟಿದ್ದಾರೆ. ಈ ಮೂಲಕ ಎಲ್ಲದಕ್ಕಿಂತ ಮನುಷ್ಯತ್ವ ಮತ್ತು ಮಾನವೀಯತೆ ದೊಡ್ಡದು ಅನ್ನೋ ಮಂತ್ರವನ್ನು ಈ ಸಹೃದಯಿಗಳು ಸಾರಿದ್ದಾರೆ. ಕೇವಲ ದೊಡ್ಡವರು ಮಾತ್ರವಲ್ಲ ಪುಟ್ಟ ಕಂದಮ್ಮಗಳು ಸಹ ನೆರೆಯಿಂದ ನಿರಾಶ್ರಿತರಾದವರಿಗಾಗಿ ಮಿಡಿದಿವೆ. ಪುಟ್ಟ ಹೃದಯಗಳು ಸಹ ನೊಂದ ಜೀವಿಗಳಿಗಾಗಿ ಆಸರೆಯಾಗಿರುವ ಕತೆಗಳು ಕೇಳಿದ್ರೆ ನಿಮ್ಮ ಮನಸ್ಸು ಕೂಡ ಮಮ್ಮಲ ಮರುಗಿಬಿಡುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment