ಕಣ್ಣೀರಲ್ಲಿ ಮುಳುಗಿದ ಕೇರಳಿಗರು.. ಈಗ ಹೇಗಿದೆ ವಯನಾಡ್‌ ಪರಿಸ್ಥಿತಿ? ಟಾಪ್​ 10 ಫೋಟೋ​ ಇಲ್ಲಿವೆ

author-image
Veena Gangani
Updated On
ಕಣ್ಣೀರಲ್ಲಿ ಮುಳುಗಿದ ಕೇರಳಿಗರು.. ಈಗ ಹೇಗಿದೆ ವಯನಾಡ್‌ ಪರಿಸ್ಥಿತಿ? ಟಾಪ್​ 10 ಫೋಟೋ​ ಇಲ್ಲಿವೆ
Advertisment
  • ಒಂದೇ ಒಂದು ರಾತ್ರಿಯಲ್ಲಿ ಇಡೀ ಊರಿಗೇ ಊರೇ ಜಲಸಮಾಧಿ
  • ಭೂಕುಸಿತದಿಂದ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ
  • ಕೇರಳದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಪ್ರಕೃತಿ ಮುಂದೆ ಮನುಷ್ಯ ನಗಣ್ಯ ಅನ್ನೋದು ಅದೆಷ್ಟೋ ಬಾರಿ ಸಾಬೀತಾಗಿದೆ. ಆದ್ರೂ ಮಾನವ ಸಂಕುಲ ಪ್ರಕೃತಿ ನಾಶವನ್ನು ನಿಲ್ಲಿಸಿಲ್ಲ. ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನ ಅಗೆದು ಲಾಭ ಮಾಡಿಕೊಳ್ತಾನೆ ಇದೆ. ಆದ್ರೆ ಪ್ರಕೃತಿ ಮುನಿದಾಗ ಏನೂ ಇಲ್ಲದ ನಶ್ವರನಾಗಿ ನಿಂತು ಬಿಡುತ್ತಾನೆ. ಇದಕ್ಕೆ ಮತ್ತೊಂದು ಉದಾಹರಣೆ ಕೇರಳದ ವಯನಾಡಿನ ಭೂಜಲ ದುರಂತ.

publive-image

ಇದನ್ನೂ ಓದಿ: ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ

ಧರ ಧರನೆ ಕುಸಿದ ಗುಡ್ಡ ನೂರಾರು ಜನರ ಬದುಕನ್ನೇ ಕಸಿದು ಬಿಟ್ಟಿದೆ. ಹೆಣಗಳ ರಾಶಿ ಮಧ್ಯೆ ಕಣ್ಣೀರಿಡುತ್ತ ತಮ್ಮವರಿಗಾಗಿ ಹುಡುಕತ್ತಿರುವ ದೃಶ್ಯಗಳು ನಿಜಕ್ಕೂ ಕರುಣಾಜಕನವಾಗಿದೆ. ಕೇರಳದ ಒಂದೊಂದು ಕಣ್ಣೀರಿನ ಕಥೆಗಳು ಕರುಳು ಹಿಂಡುತ್ತಿವೆ. ಕ್ಷಣ ಕ್ಷಣಕ್ಕೂ ವಯನಾಡಿನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

publive-image

ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಮೃತಪಟ್ಟವರ ಸಂಖ್ಯೆ 175ಕ್ಕೆ ಏರಿಕೆ ಕಂಡಿದೆ. ಎಲ್ಲಿ ನೋಡಿದರೂ ಹೆಣದ ರಾಶಿ, ಸಾವು ನೋವು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಪೈಕಿ 34 ಮೃತದೇಹಗಳನ್ನು ಗುರುತಿಸಲಾಗಿದ್ದು, 18 ಮಂದಿ ಈಗಾಗಲೇ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇದಲ್ಲದೆ, ಪೋತುಕಲ್ ಗ್ರಾಮದ ಬಳಿಯ ಚಾಲಿಯಾರ್ ನದಿಯಿಂದ 16 ಶವಗಳನ್ನು ಹೊರ ತೆಗೆಯಲಾಗಿದ್ದು, ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ದೇಹದ ಭಾಗಗಳು ಪತ್ತೆಯಾಗಿವೆ.

publive-image

ಭೂಕುಸಿತ ಸ್ಥಳ ಬಿಟ್ಟು ಕಿಲೋಮೀಟರ್  ದೂರದಲ್ಲಿರುವ ನೆರೆಯ ಜಿಲ್ಲೆಯ ಮಲಪ್ಪುರಂನ ಚಾಲಿಯಾರ್ ನದಿಯ ವಿವಿಧ ಭಾಗಗಳಲ್ಲಿ 26ಕ್ಕೂ ಹೆಚ್ಚು ಮೃತದೇಹಗಳು ತೇಲುತ್ತಿರುವುದು ಪತ್ತೆಯಾಗಿದೆ. ಕೈಕಾಲುಗಳು ಮತ್ತು ತಲೆಗಳು ಕಾಣೆಯಾದ ದೇಹಗಳು ದಡದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಾಗ ದೃಶ್ಯಗಳು ಕಂಡು ಬಂದಿದೆ.

ಇದನ್ನೂ ಓದಿ:ಜೀವ ಉಳಿಸಿದ ಆ ಮೆಸೇಜ್! ವಯನಾಡು ದುರಂತದಲ್ಲಿ ಸಾವನ್ನೇ ಗೆದ್ದು ಬಂದ ಬೆಂಗಳೂರು ಕಾರು ಚಾಲಕ..

publive-image

ಇನ್ನೂ, ಇದೇ ಘಟನೆಯಲ್ಲಿ 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರಿಗಾಗಿ NDRF, SDRF, ಸೇನಾ ಸಿಬ್ಬಂದಿ, ಶ್ವಾನ, ಡ್ರೋನ್​, ಹೆಲಿಕಾಪ್ಟರ್​​ ಬಳಸಿ ಕಾರ್ಯಾಚರಣೆ ಮುಂದುವರೆಸಲಾಗಿದೆ. ಜೊತೆಗೆ ಶವಗಳ ಗುರುತು ಪತ್ತೆ ಹಚ್ಚಲು ಕುಟುಂಬಸ್ಥರ ಹರಸಾಹರ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಭೂ ಕುಸಿತದಲ್ಲಿ ತಮ್ಮವರನ್ನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

publive-image

ಈ ಭೀಕರ ಭೂಕುಸಿತದಲ್ಲಿ 128ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದೆ. ಗಂಭೀರವಾಗಿ ಗಾಯಾಗೊಂಡವರಿಗೆ ಮೆಪ್ಪಾಡಿ, ವೈನಾಡು, ಮಲ್ಲಪುರಂ, ಕಾಸರಗೂಡು, ಕರ್ನಾಟಕದ ಹೆಚ್.ಡಿ.ಕೋಟೆ, ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ವಯನಾಡ್ ಮತ್ತು ಹತ್ತಿರದ ಜಿಲ್ಲೆಗಳಾದ ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಡೆಂಗ್ಯೂಗೆ ಬೆಸ್ಟ್​ ಮೆಡಿಸಿನ್​ ಯಾವುದು ಗೊತ್ತಾ? ಜ್ವರ ಬಂದ ತಕ್ಷಣವೇ ರಕ್ತ ಪರೀಕ್ಷೆ ಮಾಡೋದು ವೇಸ್ಟ್​! 

publive-image

ಮತ್ತೊಂದು ಕಡೆ ರಜೆಯಲ್ಲಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ತಕ್ಷಣವೇ ಕರ್ತವ್ಯಕ್ಕೆ ಮರಳಲು ಮತ್ತು ವಯನಾಡಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಸಚಿವರು ಕರೆ ನೀಡಿದ್ದಾರೆ. ಕೇರಳ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಲಿಮಿಟೆಡ್ ಪ್ರದೇಶಕ್ಕೆ ಔಷಧಗಳು, ಉಪಭೋಗ್ಯ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳ ಹೆಚ್ಚುವರಿಯಾಗಿ ಸರಬರಾಜು ಮಾಡಲಾಗುತ್ತಿದೆ. ಸೇನೆ ಮತ್ತು ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ವಯನಾಡಿನ ಹಲವು ಪ್ರದೇಶಗಳಲ್ಲಿ ಮೃತದೇಹಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

publive-image

ಹೀಗಾಗಿ ತಿರುವನಂತಪುರಂನಲ್ಲಿರುವ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಈಗ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ಈ ಕಂಟ್ರೋಲ್ ರೂಂಗೆ ಸಾರ್ವಜನಿಕರು ಮಾಹಿತಿ ನೀಡಲು ಫೋನ್​ ನಂಬರ್​ಗಳನ್ನು ನೀಡಲಾಗಿದೆ  9497900402 ಮತ್ತು 0471 2721566 .

publive-image

ವಯನಾಡ್‌ನಲ್ಲಿನ ರಕ್ಷಣಾ ಕಾರ್ಯಾಚರಣೆಗಳು ಆರಂಭದಲ್ಲಿ ರಕ್ಷಣಾ ಸಿಬ್ಬಂದಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ವಿಶೇಷವಾಗಿ ಸಂಜೆಯ ಹೊತ್ತಿಗೆ, ಪೀಡಿತ ಪ್ರದೇಶಗಳಿಗೆ ಸೇನೆಯು ಕಬ್ಬಿಣದ ಸೇತುವೆಯನ್ನು ನಿರ್ಮಿಸಿ ಮುಂದಿನ ಕಾರ್ಯಾಚರಣೆಗೆ ತಯಾರಿ ನಡೆಸಲಾಗುತ್ತಿದೆ.

publive-image

ಇನ್ನು, ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ಹವಾಮಾನ ಪರಿಸ್ಥಿತಿಗಳನ್ನು ಮರು ಮೌಲ್ಯಮಾಪನ ಮಾಡಿದೆ. ವಯನಾಡ್, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಅಂತ ಸೂಚನೆ ನೀಡಿದೆ.

ಇದನ್ನೂ ಓದಿ:ರಾತ್ರಿ ಇದ್ದ ಮನೆ ಬೆಳಗ್ಗೆ ಇಲ್ಲ.. ಮನೆಯವರೂ ಇಲ್ಲ; ಒಂದೇ ಕುಟುಂಬದ 25 ಮಂದಿ ಕಣ್ಮರೆ; ಉಳಿದವರು ಹೇಳಿದ್ದೇನು?

publive-image

ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 204 ಮಿಮೀ ಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ. ಇದರ ಜೊತೆಗೆ ಕಡಿಮೆ ಅವಧಿಯಲ್ಲಿ ತೀವ್ರ ಮಳೆಯು ಜೊತೆಗೆ ಹಠಾತ್ ಪ್ರವಾಹಕ್ಕೆ ಕಾರಣವಾಗಬಹುದು ಮತ್ತು ಕೇರಳದಾದ್ಯಂತ ಭೂಕುಸಿತಗಳನ್ನು ಉಂಟುಮಾಡಬಹುದು ಎಂದು IMD ತಿಳಿಸಿದೆ.

publive-image

ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂನಲ್ಲಿ 115 ಮಿಮೀ ಮತ್ತು 204 ಮಿಮೀ ಭಾರೀ ಮಳೆಯಾಗುವ ನಿರೀಕ್ಷೆಯಿರುವ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರ ಮತ್ತು ಕೊಲ್ಲಂನಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment