/newsfirstlive-kannada/media/post_attachments/wp-content/uploads/2025/07/KERAL-WOMEN-1.jpg)
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಕೇರಳದ ಮಹಿಳೆಯೊಬ್ಬಳು ಮಗುವಿನ ಜೀವ ತೆಗೆದು ತಾನೂ ಕೂಡ ಸಾ*ವಿಗೆ ಶರಣಾಗಿರುವ ಘಟನೆ ಶಾರ್ಜಾದಲ್ಲಿ ನಡೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ವಿಪಂಜಿಕಾ ಮಣಿ ತನ್ನ ಒಂದೂವರೆ ವರ್ಷದ ಮಗಳು ವೈಭವಿಯನ್ನು ಹ*ತ್ಯೆ ಮಾಡಿ ಬಳಿಕ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್ ಫೇವರಿಟ್..!
ಶಾರ್ಜಾದ ಅಲ್ ನಹ್ದಾದಲ್ಲಿ ವಾಸಿಸುತ್ತಿದ್ದರು. ಪ್ರಕರಣದಲ್ಲಿ ವಿಪಂಜಿಕಾ ಅವರ ಪತಿ ನಿಧೀಶ್ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ನಂತರ ಅವರ ಸಹೋದರಿ ನೀತು ಮತ್ತು ಅವರ ತಂದೆಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ವರದಕ್ಷಿಣೆಗಾಗಿ ವಿಪಂಜಿಕಾ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾಯಿ ನೀಡಿದ ದೂರಿನ ಪ್ರಕಾರ.. ಕೊಟ್ಟ ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಹೇಳಿ ವಿಪಂಜಿಕಾಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದರು. ಆಕೆ ತುಂಬಾ ಸುಂದರವಾಗಿದ್ದು, ಆಕೆಯ ಗಂಡನ ಬಣ್ಣ ಕಪ್ಪು. ಹೀಗಾಗಿ ಆಕೆಯೂ ಕೂಡ ಕೆಟ್ಟದ್ದಾಗಿ ಕಾಣಬೇಕೆಂದು ಆಕೆಯ ತಲೆ ಬೋಳಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾಗೃತಿ ವಿಡಿಯೋ ಡಿಲೀಟ್! ಕ್ಷಮೆ ಕೇಳಿ ಬೇಸರ ಹೊರ ಹಾಕಿದ ಶಿಕ್ಷಕಿ ವಂದನಾ ರೈ..!
ವೈಪಂಜಿಕಾ ಸ್ಪುರದ್ರೂಪಿ ಹೆಣ್ಣು ಮಗಳು. ಪತಿ ಕಪ್ಪಾಗಿದ್ದ, ಈಕೆ ಇನ್ಯಾರದ್ದು ಜೊತೆ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಕಿರುಕುಳ ನೀಡ್ತಿದ್ರು. ಈಕೆ ಕುರೂಪಿಯಾಗಿ ಕಾಣ್ಬೇಕು ಅಂತ ಆಕೆ ಕೂದಲನ್ನ ಪೂರ್ತಿಯಾಗಿ ಬೋಳಿಸಿದ್ದ. ಡೈವೋರ್ಸ್ ಕೇಳಿದಕ್ಕೆ ಮನೆಯಲ್ಲಿ ಕೂಡಿ ಹಾಕಿ ಕೂದಲನ್ನ ಶೇವ್ ಮಾಡಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಇದೆ.
ಫೇಸ್ಬುಕ್ನಲ್ಲಿ ಡೆತ್ನೋಟ್!
ಫೇಸ್ಬುಕ್ನಲ್ಲಿ ಡೆತ್ನೋಟ್ ಬರೆಯಲಾಗಿದ್ದು ತನಗೆ ನೀಡುತ್ತಿದ್ದ ಕ್ರೂರ ಶಿಕ್ಷೆಯ ಬಗ್ಗೆ ಬರೆದುಕೊಂಡಿದ್ದಾಳೆ. ಮಾವ ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಲೈಂಗಿಕವಾಗಿ ಕಿರುಕುಳ ಕೊಟ್ಟಿರೋದ್ರ ಬಗ್ಗೆ ಹೇಳಿದ್ದಾಳೆ. ನೀನು ನನಗೆ ಮಾತ್ರವಲ್ಲ ನನ್ನ ಅಪ್ಪನಿಗೂ ಸಹಕಾರ ನೀಡ್ಬೇಕು ಅಂತ ಅಶ್ಲೀಲ ವಿಡಿಯೋ ತೋರಿಸಿ ಬೆಡ್ನಲ್ಲಿ ಇದೇ ರೀತಿ ಮಾಡ್ಬೇಕು ಅಂತಿದ್ದನಂತೆ. ನನಗೆ ನಾಯಿ ತರಹ ಹೊಡೆಯುತ್ತಿದ್ದ. ಈ ಹಿಂಸೆಯನ್ನೂ ಸಹಿಸಲಾಗದು. ಅವರನ್ನೂ ಬಿಡಬೇಡಿ ತಕ್ಕ ಶಿಕ್ಷೆ ಕೊಡಿಸಬೇಕು ಅಂತ ಗೃಹಿಣಿ ನೋಟ್ ಬರೆದಿದ್ದಾಳೆ. ಖಲೀಜಾ ಟೈಮ್ಸ್ ವರದಿ ಪ್ರಕಾರ, ಮಹಿಳೆಯೇ ತನ್ನ ಕೈಯಾರೆ ಮಲಯಾಳಿ ಭಾಷೆಯಲ್ಲಿ ಬರೆದಿದ್ದಾಳೆ.
ವೈಪಂಜಿಕಾ ಮಣಿಯ ತಾಯಿ ಕೊಟ್ಟ ದೂರಿನ ಆಧಾರದ ಮೇಲೆ ಪತಿ ಹಾಗೂ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಾಗಿದೆ. ವೈಪಂಜಿಕಾ ಮಣಿ, ತನ್ನ ಒಂದು ವರ್ಷದ ಮಗಳನ್ನು ಉಸಿರುಗಟ್ಟಿಸಿ ಮುಗಿಸಿದ್ದಾಳೆ. ಬಳಿಕ ತಾನೂ ಕೂಡ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ವೈಪಂಜಿಕಾ ಮಣಿ, ಕೇರಳದ ಕೊಲ್ಲಂ ಜಿಲ್ಲೆಯವರು. ಮದುವೆಯ ಬಳಿಕ ಪತಿ ನಿಧೀಶ್ ಜೊತೆಗೆ ಯುಎಇಯ ಶಾರ್ಜಾಗೆ ಹೋಗಿದ್ದಳು.
ಇದನ್ನೂ ಓದಿ: ಅಮೆರಿಕಾದಲ್ಲಿ ಮಾಂಸ ತಿನ್ನುವ ಹಸುಗಳು.. ನಾನ್ವೆಜ್ ಹಾಲು ಭಾರತಕ್ಕೆ ಬೇಡ ಎಂದ ಮೋದಿ ಸರ್ಕಾರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ