/newsfirstlive-kannada/media/post_attachments/wp-content/uploads/2025/01/kerala-Love-Story-4.jpg)
ಪ್ರೀತಿ.. ಪ್ರೀತಿ ಅಂತ ಒಂದು ವರ್ಷದಿಂದ ಯುವಕನ ಜೊತೆ ಸುತ್ತಾಡಿದ್ದ ಯುವತಿಯೊಬ್ಬಳು ಅಪ್ಪ ಹುಡುಕಿದ ವರನ ಜೊತೆ ಸುಖಜೀವನ ನಡೆಸಲು ಪ್ರಿಯಕರನಿಗೆ ಮುಹೂರ್ತ ಇಟ್ಟಿದ್ದಳು. ತನ್ನ ಮನೆಗೆ ಪ್ರಿಯಕರನನ್ನ ಕರೆಸಿ ಕೀಟನಾಶಕ ಬೆರೆಸಿದ ಜ್ಯೂಸ್ ನೀಡಿ ಪ್ರಿಯಕರನ ಪ್ರಾಣವನ್ನೇ ತೆಗೆದಿದ್ದಳು.
ಕೇರಳದ ತಿರುವನಂತಪುರಂನಲ್ಲಿ ಪ್ರಿಯಕರನ ಪ್ರಾಣ ತೆಗೆದ ಪಾಪಿ ಯುವತಿ ನನಗೇನು ಗೊತ್ತಿಲ್ಲ ಎನ್ನುವಂತೆ ನವರಂಗಿ ನಾಟಕ ಸಹ ಆಡಿದ್ದಳು. 2022ರಲ್ಲಿ ನಡೆದಿದ್ದ ಈ ಘಟನೆಯ ತನಿಖೆ ವೇಳೆ ಪೊಲೀಸರ ಕೈಗೆ ಲಾಕ್ ಆಗಿದ್ದ ಯುವತಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.
ಪ್ರೀತಿ ಕೊಂದ ಕೊಲೆಗಾತಿ!
ಕೇರಳದ ತಿರುವನಂತಪುರಂನಲ್ಲಿ ಶರೋನ್ ಎಂಬ ಯುವಕ ರೇಡಿಯಾಲಜಿ ವಿದ್ಯಾರ್ಥಿನಿಯಾಗಿದ್ದ 23 ವರ್ಷದ ಗ್ರೀಷ್ಮಾಳನ್ನು ಪ್ರೀತಿ ಮಾಡುತ್ತಿದ್ದ. ಗ್ರೀಷ್ಮಾ ಹಾಗೂ ಶರೋನ್ ಇಬ್ಬರು ಪ್ರೀತಿ, ಪ್ರೇಮ ಅಂತ 1 ವರ್ಷದಿಂದ ಸುತ್ತಾಡಿದ್ದರು.
ಪ್ರೀತಿ ಚೆನ್ನಾಗಿರುವಾಗಲೇ ಗ್ರೀಷ್ಮಾ ಪೋಷಕರು ವರ ಹುಡುಕುವ ಕೆಲಸಕ್ಕೆ ಕೈಹಾಕಿದ್ದರು. ಪೋಷಕರು ತೋರಿಸಿದ್ದವನ ಜೊತೆ ಮದುವೆ ಗ್ರೀಷ್ಮಾ ಒಪ್ಪಿಗೆ ನೀಡಿದ್ದಾಳೆ. ಮನೆಯವರು ನೋಡಿದ್ದ ಹುಡುಗನ ಬ್ಯಾಕ್ಗ್ರೌಂಡ್ ನೋಡಿ ಮನಸೋತಿದ್ದಳು. ಆತನನ್ನ ಮದುವೆ ಆಗಿ ಲಕ್ಸುರಿ ಜೀವನ ನಡೆಸುವ ಹಂಬಲ ಅವಳಿಗಿತ್ತು.
ಮದುವೆ ಫಿಕ್ಸ್ ಆದ ಮೇಲೆ ಗ್ರೀಷ್ಮಾ ನಿನಗೆ ಜಾತಕ ದೋಷ ಅಂತ ಪ್ರಿಯಕರನಿಗೆ ಕತೆ ಕಟ್ಟಿದ್ದಳು. ಆದರೆ ಏನೇ ಆದ್ರೂ ನಿನ್ನ ಕೈ ಬಿಡಲ್ಲ ಅಂತ ಶರೋನ್ ಹಠ ಹಿಡಿದಿದ್ದ. ಶರೋನ್ನ ದೂರ ಮಾಡೋಕೆ ಗ್ರೀಷ್ಮಾ ಈ ಜ್ಯೂಸ್ ಸ್ಕೆಚ್ ಹಾಕಿದ್ದಳು.
ಪ್ರಿಯಕರ ಶರೋನ್ ಅನ್ನ ಮನೆಗೆ ಕರೆಸಿ ಗ್ರೀಷ್ಮಾ ಜ್ಯೂಸ್ ನೀಡಿದ್ದಳು. ಜ್ಯೂಸ್ಗೆ ಮೊದಲೇ ಕೀಟನಾಶಕ ಬೆರೆಸಿ ಇಟ್ಟಿದ್ದರಿಂದ ಜ್ಯೂಸ್ ಕುಡಿದ ಶರೋನ್ ತೀವ್ರ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಕೊನೆಯುಸಿರೆಳೆಯುವಾಗ ಶರೋನ್ ನನಗೆ ಯಾರ ಮೇಲೂ ಅನುಮಾನವಿಲ್ಲ ಎಂದಿದ್ದ.
ಕಳೆದ 2022ರಲ್ಲಿ ಗ್ರೀಷ್ಮಾಳ ಮೋಸದಾಟಕ್ಕೆ ಶರೋನ್ ಬಲಿಯಾಗಿದ್ದ. ವಿಷ ಸೇವಿಸಿದ್ದು ಯಾಕೆ ಎಂದು ಪೊಲೀಸರಿಗೆ ಟೆನ್ಶನ್ ಆಗಿದ್ದು, ಗ್ರೀಷ್ಮಾಳ ತೀವ್ರವಾದ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿತ್ತು. ತಿರುವನಂತಪುರಂನ ಜಿಲ್ಲಾ ಸೆಷನ್ಸ್ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಪಾಪಿ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ಪ್ರಕಟ ಮಾಡಿದೆ.
ಇದನ್ನೂ ಓದಿ: ಮಗಳ ಲಗ್ನಪತ್ರಿಕೆ ಕೊಟ್ಟು ಬರುವಾಗ ಅಪ್ಪನ ದುರಂತ ಅಂತ್ಯ.. ಮದುವೆ ಮಂಟಪದಲ್ಲಿ ಆಗಿದ್ದೇನು?
ತಿರುವನಂತಪುರಂನ ಕೋರ್ಟ್ ಈ ತೀರ್ಪು ಐತಿಹಾಸಿಕವಾಗಿದ್ದು, 23 ವರ್ಷದ ಗ್ರೀಷ್ಮಾ ಕೇರಳ ರಾಜ್ಯದಲ್ಲೇ ಅತಿ ಕಿರಿಯ ವಯಸ್ಸಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಯುವತಿ ಅನ್ನೋ ಕುಖ್ಯಾತಿ ಪಾತ್ರಳಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ