93ಕ್ಕೇರಿದ ಸಾವು.. ಭೂ ಕುಸಿತಕ್ಕೆ ಬೆಚ್ಚಿ ಬಿದ್ದ ಕೇರಳ; ಸಿಎಂ ಪಿಣರಾಯಿ ವಿಜಯನ್ ಹೇಳಿದ್ದೇನು?

author-image
Gopal Kulkarni
Updated On
93ಕ್ಕೇರಿದ ಸಾವು.. ಭೂ ಕುಸಿತಕ್ಕೆ ಬೆಚ್ಚಿ ಬಿದ್ದ ಕೇರಳ; ಸಿಎಂ ಪಿಣರಾಯಿ ವಿಜಯನ್ ಹೇಳಿದ್ದೇನು?
Advertisment
  • ಕೇರಳ, ವಯನಾಡ್​ ಪ್ರವಾಸದಲ್ಲಿರುವ ನಿಮ್ಮವರ ರಕ್ಷಿಸಲು ಏನು ಮಾಡಬೇಕು?
  • ಭೂ ಕುಸಿತದ ಬಳಿಕ ಕೇರಳ ಸಿಎಂ ಪಿಣರಾಯಿ ವಿಜಯನ್ ಸುದ್ದಿಗೋಷ್ಟಿ
  • ವಯನಾಡ್​, ಮುನ್ನಾರ್ ಪ್ರವಾಸಕ್ಕೆ ಹೋಗುವ ಮುನ್ನ ಇರಲಿ ಎಚ್ಚರ!

ವಯನಾಡ್: ಕೇರಳದ ಸುಂದರ ನಗರಿಗಳಲ್ಲಿ ಒಂದಾದ ವಯನಾಡಿನ​ ಮೇಲೆ ವರುಣ ದೇವನ ಕ್ರೂರ ದೃಷ್ಟಿ ಬಿದ್ದಿದೆ. ಭೂಕುಸಿತದ ಪರಿಣಾಮವಾಗಿ ಇಡೀ ಜಿಲ್ಲೆಯೇ ಈಗ ಮುರುಕು ಮಂಟಪದಂತೆ ಕಾಣುತ್ತಿದೆ. ಭೂಕುಸಿತದ ತೀವ್ರತೆಗೆ ನೂರಾರು ಜನ ಕಾಣೆಯಾಗಿದ್ದರೆ, ಸದ್ಯ ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Landslide: 5 ವರ್ಷದ ಹಿಂದೆ ಕೇರಳ ಪುತ್ತುಮಲೆ ದುರಂತ.. ಅದೇ ಜಾಗದಿಂದ 2 ಕಿಮೀ ದೂರದಲ್ಲಿ ಪರ್ವತ ಪ್ರವಾಹ..! 

ಕೇರಳ ಸಿಎಂ ಪಿಣರಾಯಿ ವಿಜಯಯನ್ ಅವರು ಸುದ್ದಿಗೋಷ್ಟಿ ನಡೆಸಿ ಭೂಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಇಂದು ಮುಂಜಾನೆ 4.10ಕ್ಕೆ ಕಂಡು ಕೇಳರಿಯದ ಭೂ ಕುಸಿತ ಸಂಭವಿಸಿದೆ. ಸದ್ಯ 93 ಜನರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 128 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದಿದ್ದಾರೆ.

publive-image

ವಯನಾಡ್​ ಜಿಲ್ಲೆ ಸಂಕಷ್ಟದ ತವರಾಗಿ ನರಳಿಕೆಯ ನೆಲೆಯಾಗಿ ಕಾಣುತ್ತಿದೆ. ವಯನಾಡ್​ ಪ್ರಕೃತಿ ಸೌಂದರ್ಯವನ್ನೇ ತನ್ನ ಒಡಲಲ್ಲಿಟ್ಟುಕೊಂಡು ದೇಶ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಸೌಂದರ್ಯದೂರು. ಹೀಗಾಗಿ ಇಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರಮುಖವಾಗಿ ಮುನ್ನಾರು, ವಯನಾಡು ಕೇರಳದ ಟೂರಿಸ್ಟ್​ ಹಬ್​ಗಳಾಗಿಯೇ ಗುರುತಿಸಲ್ಪಟ್ಟಿವೆ. ಈಗಾಗಲೇ ಪ್ರವಾಸಕ್ಕೆ ಅಂತ ವಯನಾಡ್​ಗೆ ಹೋದವರು, ಹಾಗೂ ಹೋಗಬೇಕು ಅಂತ ಪ್ಲ್ಯಾನ್ ಮಾಡಿಕೊಂಡವರು ಈ ಸ್ಟೋರಿಯನ್ನು ತಪ್ಪದೇ ಓದಿ.

ಇದನ್ನೂ ಓದಿ:ಕೇರಳ ಮಳೆಯ ಎಫೆಕ್ಟ್.. ಕೊಡಗಿನಲ್ಲೂ 2 ದಿನ ರೆಡ್ ಅಲರ್ಟ್; ಕಾವೇರಿ ತೀರಕ್ಕೂ ಪ್ರವಾಹದ ಭೀತಿ

ವಯನಾಡ್​ಗೆ ಹೋದವರಿಗೆ ಸಹಾಯ ಬೇಕಾದದಲ್ಲಿ ಇವರನ್ನು ಸಂಪರ್ಕಿಸಿ
ವಯನಾಡ್​ ಜಿಲ್ಲೆಯ ಭೂಕುಸಿತ ಈಗ ಮುಂಡಕ್ಕಾಯಿ, ಚೋರಲ್ಮಾಲಾ, ಅತ್ತಮಲಾ ಹಾಗೂ ನೂರಪ್ಲೂಜಾವನ್ನು ಸಂಪೂರ್ಣವಾಗಿ ತತ್ತರಿಸುವಂತೆ ಮಾಡಿದೆ. ಈ ನಾಲ್ಕು ಪ್ರದೇಶಗಳಲ್ಲಿ ಕುಸಿದ ಭೂಮಿ ಮಹಾದುರಂತಕ್ಕೆ ಸಾಕ್ಷಿಯಾಗಿ ನಿಂತಿದೆ. ಹೀಗಾಗಿ ಯಾರಾದ್ರೂ ಭೂಕುಸಿದಿಂದಾಗಿ ಎಲ್ಲಾದರು ಸಿಲುಕಿಕೊಂಡಿದ್ದರೆ, ಸಹಾಯ ಬೇಕಾಗಿದ್ದರೆ ಕೇರಳ ಸರ್ಕಾರ ನೀಡಿರುವ ಈ ಟಾಲ್​ ಫ್ರೀ ನಂಬರ್​ಗೆ ಕಾಲ್ ಮಾಡಬಹುದು.

ತುರ್ತು ಸಹಾಯವಾಣಿ ವಿವರ
ಟಾಲ್ ಫ್ರೀ ನಂಬರ್ 1077ಗೆ ಕರೆ ಮಾಡಿ ಸಹಾಯ ಪಡೆಯಬಹುದು.
ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಕ್ಕೂ ಕೂಡ ಕರೆ ಮಾಡಿ ಸಹಾಯ ಪಡೆಯಬಹುದು. ಅದು ಬಿಡುಗಡೆ ಮಾಡಿರುವ ನಂಬರ್ ಹೀಗಿದೆ. 04936204151, 9562804151, 8078409770
ಸುಲ್ತಾನ ಬತೇರಿ ಭಾಗದಲ್ಲಿ ಏನಾದರೂ ಸಹಾಯ ಬೇಕಾಗಿದ್ದಲ್ಲಿ ಈ ನಂಬರ್​ಗೆ ಕಾಲ್ ಮಾಡಿ ಸಹಾಯ ಪಡೆಯಬಹುದು: 04936223355, 623841385
ಮನತನವಾಡಿ ಭಾಗದಲ್ಲಿರುವವರಿಗೆ ಏನಾದರೂ ಸಹಾಯ ಬೇಕಾದಲ್ಲಿ ಈ ನಂಬರ್​ಗೆ ಸಂಪರ್ಕ ಮಾಡಿ
04935241111, 9446637748
ವೈತ್ರಿ ಭಾಗದಲ್ಲಿರುವ ಜನರಿಗೆ ಸಹಾಯ ಅವಶ್ಯಕತೆ ಇದ್ದಲ್ಲಿ ಈ ನಂಬರ್​ಗೆ ಕಾಲ್ ಮಾಡಿ
04936256100, 8590842965, 9447097705
ತುರ್ತು ವೈದ್ಯಕೀಯ ಸೇವೆಯ ಅವಶ್ಯಕತೆ ಇದ್ದಲ್ಲಿ ಈ ನಂಬರ್​ಗೆ ಕಾಲ್ ಮಾಡಿ 8086010833 ಮತ್ತು 9656938689

ಇದನ್ನೂ ಓದಿ: ಕೇರಳ ಭೂಕುಸಿತಕ್ಕೆ ಕಾರಣವಾಗಿದ್ದೇ ಶುಂಠಿ ಬೆಳೆನಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

publive-image

ವಯನಾಡ್,​ ಮುನ್ನಾರ್​ನತ್ತ ಪ್ರಯಾಣ ಬೆಳೆಸುವ ಮುನ್ನ ಇರಲಿ ಎಚ್ಚರ

ವಯನಾಡ್ ಹಾಗೂ ಮುನ್ನಾರ್ ಕಡೆ ಪ್ರಯಾಣ ಬೆಳೆಸುವ ವಿಚಾರವಿದ್ದಲ್ಲಿ ಅದನ್ನು ಸದ್ಯಕ್ಕೆ ಮುಂದಕ್ಕೆ ಹಾಕುವುದು ಒಳಿತು. ಯಾಕಂದ್ರೆ ವಯನಾಡ್ ಜಿಲ್ಲೆಯಲ್ಲಾದ ಭೀಕರ ಭೂಕುಸಿತ ಹಲವು ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದೆ. ಈಗಾಗಲೇ ಪೋಪ್ಪರಾ-ಮುನ್ನಾರ್ ರೋಡ್ ಹಾಗೂ ಅಡಿಮಲಿ-ಮುನ್ನಾರ್ ರೋಡ್ ಭೂಕುಸಿತದ ಪರಿಣಾಮವಾಗಿ ಸಂಪೂರ್ಣವಾಗಿ ಬಂದ್ ಆಗಿವೆ. ಅದು ಅಲ್ಲದೇ ಮಳೆಯ ರೌದ್ರಾವತರಕ್ಕೆ ಮುನ್ನಾರ ಕೂಡ ತತ್ತರಿಸಿ ಹೋಗಿದೆ. ಅಲ್ಲಿಯೂ ಕೂಡ ಪ್ರವಾಹ ಉಂಟಾಗಿದ್ದು ನಿಮ್ಮ ಪ್ರವಾಸವನ್ನು ಮುಂದೆ ಹಾಕುವುದು ಒಳಿತು. ಇನ್ನು ಪಣಂಕುಟ್ಟಿ ಬ್ರಿಡ್ಜ್, ಅಡಿಮಿಲಿ ಮತ್ತು ಕುಮಿಲಿ ರಸ್ತೆಗಳು ಕೂಡ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿವೆ. ಹೀಗಾಗಿ ರಸ್ತೆ ಮೂಲಕ ವಯನಾಡ್​ ಹಾಗೂ ಮುನ್ನಾರ್​ ತಲುಪುವುದು ಸರಳ ಸಾಧ್ಯವಿಲ್ಲ.

ಇದನ್ನೂ ಓದಿ: 24 ಗಂಟೆಯಲ್ಲಿ ಮೃತ್ಯು ಮಳೆ.. ವಯನಾಡ್​ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುರಿದ ಮಳೆ ಎಷ್ಟು ಗೊತ್ತಾ?

ರೈಲು ಮಾರ್ಗದಲ್ಲಿಯೂ ಇದೆ ಹಲವಾರು ಸಮಸ್ಯೆ

ವಯನಾಡ್ ಜಿಲ್ಲೆಯಲ್ಲಾಗಿರುವ ಭೀಕರ ಭೂಕುಸಿತ ರೈಲು ಸೇವೆಯ ಮೇಲೂ ಕೂಡ ಪರಿಣಾಮ ಬೀರಿದೆ. ವರುಣನ ಆರ್ಭಟ ಹಾಗೂ ಭೂಕುಸಿತ ಆ ಬದಿಯ ಟ್ರೇನ್​ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ​ ದಕ್ಷಿಣ ರೈಲ್ವೆ ಪ್ರಮುಖವಾಗಿ ಮೂರು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದಾಗಿ ಪ್ರಮುಖ ಮೂರು ರೈಲುಗಳು ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಎರ್ನಾಕುಲಂ ಕನ್ನೂರು ಇಂಟರ್​​ಸಿಟಿ, ತಿರುವನವೇಲು ಪಲಕ್ಕಾಡು ಪಲಾರುವಿ ಎಕ್ಸ್​ಪ್ರೆಸ್ ಮತ್ತು ಶೋರನೂರು ವೆನದಾ ಎಕ್ಸ್​ಪ್ರೆಸ್ ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

publive-image

ಪ್ರಮುಖ ಜಲಪಾತಗಳನ್ನು ಬಂದ್ ಮಾಡಿರುವ ಜಿಲ್ಲಾಡಳಿತ

ಕೇರಳದಲ್ಲಿರುವ ಪ್ರಮುಖ ಜಲಪಾತಗಳ ವೀಕ್ಷಣೆಗೂ ಕೂಡ ತಡೆ ನೀಡಲಾಗಿದೆ. ವಿಪರೀತ ಮಳೆಯಿಂದಾಗಿ ಧುಮ್ಮಿಕ್ಕುತ್ತಿರುವ ಜಲಪಾತಳನ್ನು ನೋಡಲು ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಆದ್ರೆ ಪ್ರವಾಸಿಗರ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಜಲಪಾತಗಳ ವೀಕ್ಷಣೆಗೆ ತಡೆ ನೀಡಲಾಗಿದೆ. ತ್ರಿಸ್ಸೂರಿನಲ್ಲಿರುವ ಅತ್ತಿರಪಿಲ್ಲಿ ಹಾಗೂ ವಜಚಾಲ್​ ಜಲಪಾತಗಳನ್ನು ಬಂದ್ ಮಾಡಲಾಗಿದೆ. ತಂಬರ್ಮುಜಿ ಗಾರ್ಡನ್​ಗೂ ಕೂಡ ಬೀಗ ಹಾಕಲಾಗಿದೆ. ಹೀಗೆ ಹಲವಾರು ಪ್ರವಾಸಿ ತಾಣಗಳು ಭೀಕರ ಮಳೆಯಿಂದಾಗಿ ತಮ್ಮ ಬಾಗಿಲಿಗೆ ಬೀಗ ಹಾಕಿಕೊಂಡಿದ್ದು, ಸದ್ಯಕ್ಕೆ ನಿಮ್ಮ ಪ್ರವಾಸ ಮುಂದೂಡಿದರೆ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment