ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ

author-image
Ganesh
Updated On
Mega Auction; ಬಲಿಷ್ಠ ಬೌಲಿಂಗ್ ಸೈನ್ಯ ಕಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು
Advertisment
  • ಪ್ರತಿ ಸೀಸನ್​​ನಲ್ಲೂ ಕೊಹ್ಲಿ ಅದ್ಭುತ ಬ್ಯಾಟಿಂಗ್, ಫೀಲ್ಡಿಂಗ್
  • ದುರಾದೃಷ್ಟಕ್ಕೆ ಇನ್ನೂ ಒಂದೇ ಒಂದು ಕಪ್ ಗೆಲ್ಲಲು ಸಾಧ್ಯ ಆಗಲಿಲ್ಲ
  • 2024ರ ಐಪಿಎಲ್​ನಿಂದ ಹೊರಬಿದ್ದಿರುವ ನಮ್ಮ ಆರ್​ಸಿಬಿ

ಮೊದಲ ಐಪಿಎಲ್ ಸೀಸನ್‌ನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್ ಕೊಹ್ಲಿ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಪ್ರತಿ ಸೀಸನ್‌ಗಳಲ್ಲೂ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್‌ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಹುಶಃ ಈ ದಂತಕಥೆಗೆ ಕಪ್ ಗೆಲ್ಲುವ ಅದೃಷ್ಟ ಇನ್ನೂ ಬಂದಿಲ್ಲ. ಐಪಿಎಲ್ 2024 ರ ಅಗ್ರ ರನ್ ಸ್ಕೋರರ್ ಕೊಹ್ಲಿ ಫ್ರಾಂಚೈಸಿ, ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ.

ವಿರಾಟ್ ಹಲವು ವರ್ಷಗಳ ಕಾಲ ಆರ್​ಸಿಬಿ ಫ್ರಾಂಚೈಸಿಯ ನಾಯಕತ್ವ ವಹಿಸಿದ್ದರು. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ವಿರಾಟ್ ನಾಯಕತ್ವದಲ್ಲಿ ತಂಡ ಫೈನಲ್ ಪ್ರವೇಶ ಮಾಡಿತ್ತು. 2016ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಸೋಲನ್ನು ಕಂಡಿತು. ಈ ಬಾರಿಯೂ ಟೂರ್ನಿಯಿಂದ ಹೊರ ಬಿದ್ದ ಬಿನ್ನಲ್ಲೇ ಕೊಹ್ಲಿ, ತಂಡವನ್ನು ತೊರೆಯಬೇಕು ಅನ್ನೋ ಆಗ್ರಹಗಳು ಕೇಳಿಬಂದಿವೆ. ಕೊಹ್ಲಿ ಆರ್‌ಸಿಬಿ ಬಿಟ್ಟು ಬೇರೆ ತಂಡದಲ್ಲಿ ಆಡಬೇಕು ಎಂಬ ಬೇಡಿಕೆ ಇದೆ.

ಇದನ್ನೂ ಓದಿ:ಮ್ಯಾಕ್ಸಿ ಆರ್​​ಸಿಬಿ ಸೋಲಿಗೆ ಹೆಂಗೆಲ್ಲ ಕಾರಣರಾದರು? ಕಂಪ್ಲೀಟ್ ಡೀಟೈಲ್ಸ್​..!

publive-image

ಆರ್​​ಸಿಬಿ ಸೋಲಿನ ನಂತರ ಇಂಗ್ಲೆಂಡ್ ಲೆಜೆಂಡ್ ಕೆವಿನ್ ಪೀಟರ್ಸನ್ ಕೊಹ್ಲಿ ಬಗ್ಗೆ ಮಾತನಾಡಿ.. ಅನುಭವಿ ಆಟಗಾರ ಐಪಿಎಲ್ ಪ್ರಶಸ್ತಿ ಗೆಲ್ಲಲು ಮತ್ತೊಂದು ಫ್ರಾಂಚೈಸಿಗೆ ಸೇರಬೇಕಾಗಿದೆ. ಇದನ್ನು ನಾನು ಮೊದಲೇ ಹೇಳಿದ್ದೇನೆ, ಈಗ ಮತ್ತೆ ಹೇಳುತ್ತೇನೆ. ಇತರ ಕ್ರೀಡೆಗಳಲ್ಲಿ ಶ್ರೇಷ್ಠ ಆಟಗಾರರು ಬೇರೆಡೆ ಕೀರ್ತಿ ಪಡೆಯಲು ತಂಡಗಳನ್ನು ತೊರೆದಿದ್ದಾರೆ. ಅವರು ತುಂಬಾ ಶ್ರಮ ಪಡುತ್ತಾರೆ. ಕಠಿಣ ಪ್ರಯತ್ನದಿಂದಾಗಿ ಮತ್ತೊಮ್ಮೆ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಆದರೆ ಫ್ರಾಂಚೈಸಿ ಮತ್ತೆ ವಿಫಲವಾಗಿದೆ. ಕೊಹ್ಲಿ ಫ್ರಾಂಚೈಸಿಯ ಬ್ರ್ಯಾಂಡ್ ಮತ್ತು ಅವರು ತಂಡಕ್ಕೆ ಆರ್ಥಿಕ ಲಾಭವನ್ನು ತಂದುಕೊಡುತ್ತಾರೆ ಎಂದು ಅರ್ಥ ಮಾಡಿಕೊಂಡಿದ್ದೇನೆ. ವಿರಾಟ್ ಕೊಹ್ಲಿ ಟ್ರೋಫಿಗೆ ಅರ್ಹರು.

ಇದನ್ನೂ ಓದಿ:ಆರ್​ಸಿಬಿಯಲ್ಲಿ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ..? ಕುತೂಹಲ ಮೂಡಿಸಿದ RCB ಮುಖ್ಯ ಕೋಚ್ ನೀಡಿದ ಹೇಳಿಕೆ

publive-image

ವಿರಾಟ್ ತಂಡ ತೊರೆದು ಮತ್ತೊಂದು ಫ್ರಾಂಚೈಸಿ ಸೇರೋದಾದರೆ ಅದು ದೆಹಲಿ ಆಗಿರಬೇಕು. ವಿರಾಟ್ ಹೋಗಬೇಕಾದ ಸ್ಥಳ ದೆಹಲಿ. ವಿರಾಟ್ ಹೆಚ್ಚಿನ ಸಮಯ ಮನೆಯಲ್ಲಿಯೇ ಇರುತ್ತಾರೆ. ದೆಹಲಿಯಲ್ಲಿ ಅವರ ಮನೆ ಇದೆ, ನನಗೆ ಗೊತ್ತು. ಅವರು ಯುವ ಕುಟುಂಬವನ್ನು ಹೊಂದಿದ್ದಾರೆ. ಅವರು ದೆಹಲಿ ಹುಡುಗ, ಯಾಕೆ ಹಿಂತಿರುಗಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment