newsfirstkannada.com

‘ಅಂಬಾಟಿ ರಾಯುಡು ಜೋಕರ್​’ ಎಂದಿದ್ದ ಪೀಟರ್ಸನ್​​.. ಕೊಹ್ಲಿ ಫ್ಯಾನ್ಸ್​ಗೆ ಮಾಡಿದ ಮನವಿ ಏನು?

Share :

Published May 28, 2024 at 5:51pm

  2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ

  ಮತ್ತೆ ಆರ್​​ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್​ ರಾಯುಡು

  ವಿರಾಟ್​ ಬಗ್ಗೆ ಮಾತಾಡಿದ ಅಂಬಾಟಿ ರಾಯುಡುಗೆ ಫುಲ್​​ ಕ್ಲಾಸ್​​​!

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಗ್ಗೆ ಮಾತಾಡಿದ್ದ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ವಿರುದ್ಧ ದಿಗ್ಗಜ ಕೆವಿನ್ ಪೀಟರ್ಸನ್ ಕಿಡಿಕಾರಿದ್ದರು. ಈ ಬೆನ್ನಲ್ಲೇ ಅಂಬಾಟಿ ರಾಯುಡುಗೆ ಬೈಬೇಡಿ ಪ್ಲೀಸ್​ ಎಂದು ಕೊಹ್ಲಿ ಫ್ಯಾನ್ಸ್​ಗೆ ಕೆವಿನ್​ ಪೀಟರ್ಸನ್​ ಮನವಿ ಮಾಡಿದ್ದಾರೆ.

ಯಾರ ವಿರುದ್ಧ ಯಾರು ಮಾತಾಡೋದು ಬೇಡಿ. ನಾನು ಅಂಬಾಟಿ ರಾಯುಡುಗೆ ಜೋಕರ್​ ಎಂದಿದ್ದು ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ರಾಯುಡು ಅವರನ್ನು ಎಲ್ಲರೂ ಬೈಯುತ್ತಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸಿಬಿಡೋಣ ಎಂದು ಕೆವಿನ್​ ಪೀಟರ್ಸನ್​​​​​ ಟ್ವೀಟ್​ ಮಾಡಿದ್ದಾರೆ.

ಅಸಲಿಗೆ ಆಗಿದ್ದೇನು?

ಈ ಹಿಂದೆ ಹೈದರಾಬಾದ್​​ ವಿರುದ್ಧ ಕೆಕೆಆರ್​​ ಫೈನಲ್​ ಪಂದ್ಯದಲ್ಲಿ ಗೆದ್ದ ಕೂಡಲೇ ಲೈವ್​ ಟಿವಿಯಲ್ಲಿ ಮಾತಾಡಿದ್ದ ಅಂಬಾಟಿ ರಾಯುಡು ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೀಯಾಳಿಸಿದ್ದರು. ಈ ಕೂಡಲೇ ಸಿಟ್ಟಿಗೆದ್ದ ಕೆವಿನ್​ ಪೀಟರ್ಸನ್​​ ನೀನು ಜೋಕರ್​ ಎಂದು ಕಿಡಿಕಾರಿದ್ರು. ನೀನೋರ್ವ ಜೋಕರ್​​, ಕೊಹ್ಲಿ ಬಗ್ಗೆ ಹಾಗೇ ಮಾತಾಡಬಾರದು ಎಂದು ರಾಯುಡುಗೆ ಕೆವಿನ್​ ಪೀಟರ್ಸನ್​ ಬೈದರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿತ್ತು.

ಇನ್ನು, 2024ರ ಐಪಿಎಲ್​ ಸೀಸನ್​​ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್‌ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್​ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಅಂಬಾಟಿ ರಾಯುಡು ಜೋಕರ್​’ ಎಂದಿದ್ದ ಪೀಟರ್ಸನ್​​.. ಕೊಹ್ಲಿ ಫ್ಯಾನ್ಸ್​ಗೆ ಮಾಡಿದ ಮನವಿ ಏನು?

https://newsfirstlive.com/wp-content/uploads/2024/05/Ambati-Rayudu_Kohli.jpg

Load More