/newsfirstlive-kannada/media/post_attachments/wp-content/uploads/2024/11/JOBS_SPORTS.jpg)
2023-24ನೇ ಸಾಲಿನಲ್ಲಿ ಕರ್ನಾಟಕ ಅರಣ್ಯ ಇಲಾಖೆಯು 540 ಅರಣ್ಯ ರಕ್ಷಕ ಹುದ್ದೆಗಳನ್ನು ಆಹ್ವಾನ ಮಾಡಿತ್ತು. ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದನ್ನು ಸ್ವೀಕರಿಸಿರುವ ಇಲಾಖೆಯು, ಈಗಾಗಲೇ ಪರಿಶೀಲನೆ ಮಾಡಿದೆ. ಅರಣ್ಯ ಇಲಾಖೆಗಳಲ್ಲಿ ವಿವಿಧ ವೃತ್ತಗಳಲ್ಲಿನ ಅಧಿಸೂಚಿತ ಹುದ್ದೆಗಳಿಗೆ ನಿಯಮಾನುಸಾರ 1:20 (ಹುದ್ದೆ-ಅಭ್ಯರ್ಥಿ) ಅಂತಿಮ ಅರ್ಹತೆ ಪಟ್ಟಿ ಸಿದ್ಧಪಡಿಸಲಾಗಿದೆ.
ಸಿದ್ಧಪಡಿಸಲಾದ ಈ ಅಂತಿಮ ಅರ್ಹತೆ ಪಟ್ಟಿಗಳನ್ನು ಆಯಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ/ ಅರಣ್ಯ ಸಂರಕ್ಷಣಾಧಿಕಾರಿಗೆ ಕಳುಹಿಸಿಕೊಡಲಾಗಿದೆ. ಅವರು ಇಲಾಖೆಯ ಅಧಿಕೃತ ವೆಬ್ಸೈಟ್ www.aranya.gov.in ನಲ್ಲಿ ಈಗಾಗಲೇ ಪ್ರಕಡಿಸಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬಹುದು.
1:20 ಅಂತಿಮ ಅರ್ಹತಾ ಪಟ್ಟಿಗಳಲ್ಲಿ ಹೆಸರು ಪಡೆದ ಅಭ್ಯರ್ಥಿಗಳು
ದೈಹಿಕ ತಾಳ್ವಿಕೆ ಪರೀಕ್ಷೆ (Physical endurance Test)
ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ (Physical Efficiency Test)
ಶಾರೀರಿಕ ಮಾನದಂಡಗಳ ಪರೀಕ್ಷೆ (Physical Standard Test)ಗೆ
ಅಭ್ಯರ್ಥಿಗಳು ಹಾಜರಾಗಬೇಕು. 16 ಏಪ್ರಿಲ್ 2025 ರಿಂದ ಈ ಪರೀಕ್ಷೆಗಳು ಆರಂಭವಾಗುತ್ತವೆ. ಈ ಕುರಿತ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ನಿಂದ ಪಡೆದು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ನಿಗದಿತ ಸಮಯದಲ್ಲಿ ಹಾಜರಾಗದೇ ಇರುವ ಅಭ್ಯರ್ಥಿಗಳನ್ನು ಅನರ್ಹ ಎಂದು ಪರಿಗಣನೆಗೆ ತೆಗೆದುಕೊಳ್ಳಲ್ಲ. ಅಲ್ಲದೇ ಬದಲಿ ದಿನಾಂಕವನ್ನು ನೀಡುವುದಿಲ್ಲ ಎಂದು ಇಲಾಖೆ ಹೇಳಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಗುಡ್ನ್ಯೂಸ್.. ಉದ್ಯೋಗಗಳಿಗೆ ಆಹ್ವಾನ ಮಾಡಿದ BMRCL
ಈ ದೈಹಿಕ ಪರೀಕ್ಷೆಗಳಿಗೆ ಹಾಜರಾಗಬೇಕಾದ ಸ್ಥಳಗಳ ವಿವರಗಳನ್ನು ಆಯಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಇಲಾಖೆಯ ವೆಬ್ಸೈಟ್ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ತಮ್ಮ ಹೆಸರು ನೋಡಿಕೊಂಡು ಸ್ಥಳ, ದಿನಾಂಕ ಪರಿಶೀಲನೆ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.
ಹಾಜರು ಪಡಿಸಬೇಕಾದ ದಾಖಲಾತಿಗಳು
- ವಿಶೇಷ ಸೂಚನೆಯಲ್ಲಿರುವ ಅಂಶಗಳನ್ನು ಅಭ್ಯರ್ಥಿಗಳು ಪಾಲಿಸಲೇಬೇಕು
- 3 ವಿಧದ ಪರೀಕ್ಷೆಗೆ ಅಭ್ಯರ್ಥಿಗಳು ಪ್ರತ್ಯೇಕವಾಗಿ ಈ ಕೆಳಗೆ ತಿಳಿಸಿರುವ ದಾಖಲಾತಿಗಳೊಂದಿಗೆ ಹಾಜರಾಗಬೇಕು
- ಒಂದು ಗುರುತಿನ ಚೀಟಿಯ ಮೂಲ ಪ್ರತಿ (ಆಧಾರ್, ವೋಟರ್ ಐಡಿ)
- ಪಿಡಿಎಫ್ನಲ್ಲಿ ಪಡೆದ ಅರ್ಜಿಯ ಜೆರಾಕ್ಸ್
- ಇತ್ತೀಚಿನ 5 ಪಾಸ್ಪೋಟೋಗಳು (ಪೋಟೋ ಹಿಂದೆ ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ ಕಡ್ಡಾಯವಾಗಿ ಬರೆದಿರಬೇಕು)
ಪರೀಕ್ಷೆಯ ಮಾಹಿತಿಗಾಗಿ-
https://static-cdn.publive.online/newsfirstlive-kannada/media/pdf_files/wp-content/uploads/2025/03group-c.pdf
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ