ಮಂಗನ ಕಾಯಿಲೆ ಕುರಿತು ಆಘಾತಕಾರಿ ಮಾಹಿತಿ; ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ರಿವೀಲ್..!

author-image
Ganesh
Updated On
ಮಂಗನ ಕಾಯಿಲೆ ಕುರಿತು ಆಘಾತಕಾರಿ ಮಾಹಿತಿ; ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ರಿವೀಲ್..!
Advertisment
  • ಮಲೆನಾಡಿಗರ ಜೀವ ಹಿಂಡುತ್ತಿರುವ ಕೆಎಫ್​ಡಿ ಕಾಯಿಲೆ
  • 32ಕ್ಕೂ ಅಧಿಕ ಜಾತಿಯ ಕೆಎಫ್‌ಡಿ ಹರಡಬಲ್ಲ ಉಣುಗುಗಳು
  • ಐಸಿಎಂಆರ್ ಸಂಶೋಧನೆಯಲ್ಲಿ ತಜ್ಞರಿಗೆ ಗೊತ್ತಾಗಿದ್ದು ಏನು?

ಮಲೆನಾಡು ಜನರ ಪಾಲಿಗೆ ಕೆಎಫ್​ಡಿ (Kyasanur Forest disease) ಶಾಪವಾಗಿ ಪರಿಣಮಿಸಿದೆ. ಬೇಸಿಗೆಕಾಲ ಶುರುವಾಗುತ್ತಿದ್ದಂತೆಯೇ ಮಂಗನ ಕಾಯಿಲೆಯ ಭಯ ಶುರುವಾಗುತ್ತದೆ. ಈಗಾಗಲೇ ಚಿಕ್ಕಮಗಳೂರು ಭಾಗದಲ್ಲಿ ಅನೇಕರನ್ನು ಕೆಎಫ್​ಡಿ ಕಾಡಲು ಶುರು ಮಾಡಿದೆ. ಇದೇ ಮಂಗನ ಕಾಯಿಲೆಗೆ ಸಂಬಂಧಿಸಿ ಆಘಾತಕಾರಿ ಸುದ್ದಿಯೊಂದು ಇದೀಗ ಹೊರಬಿದ್ದಿದೆ.

ಮಲೆನಾಡಿಗರನ್ನು ಕಾಡುತ್ತಿರುವ ಕೆಎಫ್​ಡಿ ವಿಚಾರದಲ್ಲಿ ಮತ್ತೊಂದು ಭಯಾನಕ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮಘಟ್ಟ ಕಾಡಿನಲ್ಲಿ ಕಂಡು ಬರುವ 32ಕ್ಕೂ ಅಧಿಕ ಜಾತಿಯ ಕೆಎಫ್‌ಡಿ ವೈರಸ್ ಹರಡಬಲ್ಲ ಉಣುಗುಗಳು (Tick) ಪತ್ತೆಯಾಗಿವೆ. ಅದರಲ್ಲಿ ಅನುವಂಶಿಕವಾಗಿ ವೈರಸ್ ವರ್ಗಾವಣೆ ಮಾಡಬಲ್ಲ ಎರಡು ಪ್ರಭೇದಗಳು ಪತ್ತೆಯಾಗಿವೆ. ಈ ಎರಡು ಜಾತಿಯ ಉಣುಗುಗಳು ಅನುವಂಶಿಕವಾಗಿ ಕೆಎಫ್‌ಡಿ ವೈರಸ್ ಅನ್ನು ಮತ್ತೊಂದು ಪೀಳಿಗೆಗೆ ವರ್ಗಾಯಿಸೋದು ದೃಢವಾಗಿದೆ.

ಇದನ್ನೂ ಓದಿಉಪ್ಪಿಟ್ಟು ಬೇಡ, ಚಿಕನ್ ಬಿರಿಯಾನಿ ಬೇಕೆಂದ ಅಂಗನವಾಡಿಯ ಮಗು; ಕಂದನ ಬೇಡಿಕೆಗೆ ಸ್ಪಂದಿಸಿದ ಸರ್ಕಾರ

[caption id="attachment_109041" align="aligncenter" width="800"]ಉಣುಗು ಉಣುಗು[/caption]

ಕೆಎಫ್​ಡಿ ವೈರಸ್ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. ಈ ಹಿಂದೆ ವೈರಸನ್ನು ಪ್ರಾಣಿ, ಪಕ್ಷಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಮಾಡುತ್ತಿವೆ ಎಂದು ನಂಬಲಾಗಿತ್ತು. ಇದೀಗ ಉಣುಗುಗಳೇ ಅನುವಂಶಿಕವಾಗಿ ಹರಡಿಸಬಲ್ಲವು ಅನ್ನೋದು ದೃಢವಾಗಿದೆ. ಈ ಉಣುಗುಗಳು ಮನುಷ್ಯರಿಗೆ ಕಚ್ಚುವುದರ ಜೊತೆಗೆ ಕೆಎಫ್​ಡಿ ಬರಬಹುದು. ಜೊತೆಗೆ ಸಾಕು ಪ್ರಾಣಿಗಳಿಂದಲೂ ಕೆಎಫ್​ಡಿ ಹರಡಬಹುದು ಎಂದು ಹೇಳಲಾಗುತ್ತಿದೆ. ಕೆಎಫ್​ಡಿ ವೈರಸ್ ತಾಯಿ ಉಣುಗುನಿಂದ ನೇರವಾಗಿ ಮರಿ ಉಣುಗಿಗೆ ವರ್ಗಾವಣೆಯಾಗುತ್ತವೆ.

ಲಾರ್ವಗಳಿಂದಲೂ (Larvae) ಕೆಎಫ್‌ಡಿ ಹರಡುವ ಸಾಧ್ಯತೆ ಇದೆ ಎಂದು ಸಂಶೋಧನೆ ಹೇಳಿದೆ. ಹಾಗಾಗಿ ಇನ್ಮುಂದೆ ಲಾರ್ವಗಳಿಂದಲೂ ಎಚ್ಚರಿಕೆಯಿಂದ ಇರಬೇಕಾಗಿದೆ. 2018 ರಿಂದ ಈವರೆಗೆ 16 ಸಾವಿರ ಉಣುಗುಗಳ ಸಂಗ್ರಹಣೆ ಮಾಡಲಾಗಿತ್ತು. ಕೇರಳ ಮತ್ತು ಶಿವಮೊಗ್ಗದ ಭಾಗಗಳಲ್ಲಿ ಉಣುಗುಗಳ ಸಂಗ್ರಹಣೆ ಮಾಡಿ ಅಧ್ಯಯನ ನಡೆಸಲಾಗಿದೆ. ಹೆಮಾಫಿಸಾಲಿಸ್ (Haemaphysalis) ಮತ್ತು ರಿಫಿಸೆಫಾಲಿಸ್ ಎಂಬ ಪ್ರಭೇದಗಳು ಅನುವಂಶಿಕವಾಗಿ ವರ್ಗಾಹಿಸುತ್ತವೆ ಅನ್ನೋದು ದೃಢವಾಗಿದೆ.

publive-image

ಅಧ್ಯಯ ನಡೆಸಿದ್ದು ಯಾರು..?

ಐಸಿಎಂಆರ್ (Indian Council of Medical Research), ಐಸಿಎಆರ್ (Indian Council of Agricultural Research) ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಅಡಿಯಲ್ಲಿ ಸಂಶೋಧನೆ ನಡೆಯುತ್ತಿದೆ. ಈ ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೆಎಫ್​ಡಿ ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: ಹೆಣ್ಣಿನ ಸೌಂದರ್ಯಕ್ಕೆ ಅನಗತ್ಯ ಕೂದಲುಗಳೇ ದಕ್ಕೆ.. ಇದಕ್ಕೆ ಪರಿಹಾರ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment