/newsfirstlive-kannada/media/post_attachments/wp-content/uploads/2023/06/kgf-roopa-1.jpg)
ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೇ ಚಿತ್ರದಲ್ಲಿ ತನ್ನ ಹೆಣ್ಣು ಮಗುವನ್ನು ಉಳಿಸಿಕೊಳ್ಳುವ ಅಸಹಾಯಕ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ರೂಪಾ ರಾಯಪ್ಪ ಸಖತ್ ಸುದ್ದಿಯಲ್ಲಿದ್ದಾರೆ. ಅದು ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ನಟಿ ರೂಪಾ ರಾಯಪ್ಪ ಅವರು ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ ಸಾಕಷ್ಟು ಜನರಿಂದ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ಈ ಸಿನಿಮಾದ ಮೂಲಕ ನಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ನಟಿ ರೂಪಾ ರಾಯಪ್ಪ ಅವರ ಲೇಟೆಸ್ಟ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಜಿಎಫ್ ಚಿತ್ರದಲ್ಲಿ ಕಂಪ್ಲೀಟ್ ಡಿ-ಗ್ಲಾಮರ್ ರೋಲ್ನಲ್ಲಿ ಕಾಣಿಸಿಕೊಂಡಿದ್ದ ರೂಪಾ, ಈಗ ಫುಲ್ ಗ್ಲಾಮರ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಸದ್ಯ ರವಿಚಂದ್ರನ್ ನಟನೆಯ 'ಜಡ್ಜ್ಮೆಂಟ್' ಚಿತ್ರದಲ್ಲಿ ರೂಪಾ ರಾಯಪ್ಪ ನಟಿಸುತ್ತಿದ್ದಾರೆ. ಇನ್ನು ನಟಿಯ ಲೇಟೆಸ್ಟ್ ಫೋಟೋಗಳನ್ನ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬ್ಯೂಟಿಫುಲ್, ಸೂಪರ್, ಅವರು ಇವರೇನಾ ಎಂದು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಜಿಎಫ್ನಲ್ಲಿ ನಾವು ನೋಡಿದ್ದ ಶಾಂತಿ ಇವರೇನಾ ಅಂತ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ