/newsfirstlive-kannada/media/post_attachments/wp-content/uploads/2025/07/KGF-BAABU-CAR-3.jpg)
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ಉದ್ಯಮಿ ಕೆಜಿಎಫ್ ಬಾಬು ನಿವಾಸಕ್ಕೆ ದೌಡಾಯಿಸಿದ್ದರು. ಭಾರೀ ಕಾರು ಕ್ರೇಜ್ ಹೊಂದಿರುವ ಕೆಜಿಎಫ್ ಬಾಬು ಟ್ಯಾಕ್ಸ್ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರನ್ನು ಸೀಜ್ ಮಾಡಲು ಆರ್ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವ ತಂಡ ಕೆಜಿಎಫ್ ಮನೆಗೆ ದೌಡಾಯಿಸಿದ್ದರು.
ಇದೀಗ ಕೆಜಿಎಫ್ ಬಾಬು ಕಾರುಗಳಿಗೆ ಟ್ಯಾಕ್ಸ್ ನೀಡಿದ್ದಾರೆ. RTO ಅಧಿಕಾರಿಗಳಿಗೆ ಡಿಡಿ ಮೂಲಕ ಟ್ಯಾಕ್ಸ್ ಪಾವತಿ ಮಾಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಂದ ಖರೀದಿಸಿದ್ದ ಕಾರಿಗೆ 18 ಲಕ್ಷದ 53 ಸಾವಿರ ರೂಪಾಯಿ ಟ್ಯಾಕ್ಸ್ ಪಾವತಿಸಿದ್ದಾರೆ. ಅದೇ ರೀತಿ ಅಮೀರ್ ಖಾನ್ ಅವರಿಂದ ಪಡೆದಿದ್ದ ಕಾರಿಗೆ 19 ಲಕ್ಷದ 73 ಸಾವಿರ ರೂಪಾಯಿ ಟ್ಯಾಕ್ಸ್ ಪಾವತಿ ಮಾಡಿದ್ದಾರೆ.
ಇದನ್ನೂ ಓದಿ: ಈ ಐದು ಸವಾಲು ಮೆಟ್ಟಿ ನಿಂತ್ರೆ ಟೀಂ ಇಂಡಿಯಾ ಸೇಫ್.. ಇಲ್ಲದಿದ್ರೆ ಕನಸು ಭಗ್ನ..!
MH 02 BB 2 ರೋಲ್ಸ್ ರಾಯ್ ಅಮೀರ್ ಖಾನ್ ಅವರಿಂದ ಪಡೆದಿದ್ದಾರೆ. ಅಮಿರ್ ಖಾನ್ ಒಂದು ವರ್ಷ ಬಳಸಿದ ನಂತರ, ಅದನ್ನು ಖರೀದಿಸಿದ್ದಾರೆ. MH 11 AX 1 ರೋಲ್ಸ್ ರಾಯ್ ಅನ್ನು ಅಮಿತಾಬ್ ಬಚ್ಚನ್ರಿಂದ ಖರೀದಿಸಿದ್ದಾರೆ.
ಬಳಿಕ ಮಾತನಾಡಿರುವ ಕೆಜೆಫ್ ಬಾಬು.. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿರುವ ಎರಡು ರೋಲ್ಸ್ ರಾಯ್ ಕಾರುಗಳಿದ್ವು. ಅಮೀರ್ ಖಾನ್ ಹಾಗೂ ಅಮಿತಾಬ್ ಅವರ ಎರಡು ಕಾರುಗಳನ್ನು ಖರೀದಿ ಮಾಡಿದ್ದೆ. ಮಹಾರಾಷ್ಟ್ರದಲ್ಲಿ ಟ್ಯಾಕ್ಸ್ ಕಟ್ಟಿದ್ದೀನಿ. ಆದರೆ ಕರ್ನಾಟಕದಲ್ಲೂ ಟ್ಯಾಕ್ಸ್ ಕಟ್ಟಬೇಕು ಅಂದ್ರು. ನನಗೆ ಈ ಟ್ಯಾಕ್ಸ್ ಕಟ್ಟುವ ವಿಚಾರ ಗೊತ್ತಿರಲಿಲ್ಲ. ಗೊತ್ತಿಲ್ಲದೇ ತಪ್ಪು ಮಾಡಿದ್ದೀನಿ. ಆರ್ಟಿಓ ಅಧಿಕಾರಿಗಳು ನನಗೆ ಮನವರಿಕೆ ಮಾಡಿದರು. ಇದೀಗ ತೆರಿಗೆ ಪಾವತಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಮೀಟೂ ಸಂಚಲನ ಸೃಷ್ಟಿಸಿದ್ದ ತನುಶ್ರೀ ದತ್ತಾಗೆ ಈಗ ನೋವು, ಕಣ್ಣೀರು.. ಮನೆಯಲ್ಲೇ ನೆಮ್ಮದಿ ಏಕೆ ಇಲ್ಲವಾಯಿತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ