newsfirstkannada.com

ನೇಮೋತ್ಸವ ಹರಿಕೆ ತೀರಿಸಿದ ಕೆಜಿಎಫ್​ ಖ್ಯಾತಿಯ ಬ್ಯೂಟಿ ಶ್ರೀನಿಧಿ ಶೆಟ್ಟಿ.. ಎಲ್ಲಿ?

Share :

Published May 8, 2024 at 9:57am

    ಯಶ್ ಅಭಿನಯದ ಕೆಜಿಎಫ್ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ

    ಶ್ರೀನಿಧಿ ಶೆಟ್ಟಿಯವ್ರು ಈಗಾಗಲೇ ಶೂಟಿಂಗ್​ಗಳಲ್ಲಿ ಫುಲ್ ಬ್ಯುಸಿ

    ಕುಟುಂಬದ ಜೊತೆ ದೈವದ ಹರಕೆ ತೀರಿಸಿದ ಕೆಜಿಎಫ್ ಚಿತ್ರದ ನಟಿ

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆಜಿಎಫ್‌ ಸಿನಿಮಾ ಖ್ಯಾತಿಯ ಶ್ರೀನಿಧಿ ಶೆಟ್ಟಿ ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ದಾರೆ. ಆಗಾಗ ಫೋಟೋಶೂಟ್​ ಕೂಡ ಮಾಡಿಸುತ್ತಿರುತ್ತಾರೆ. ನಟಿ ಶ್ರೀನಿಧಿ ಶೆಟ್ಟಿ ದೈವಭಕ್ತೆಯಾಗಿದ್ದು ನೇಮೋತ್ಸವ ಹರಕೆ ತೀರಿಸಿದ್ದಾರೆ.

ಇದನ್ನೂ ಓದಿ: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್​ನಲ್ಲಿ ಮೊಬೈಲ್ ಇಟ್ಟು ವಿಡಿಯೋ.. ಅಪ್ರಾಪ್ತ ಅರೆಸ್ಟ್​

ಮಂಗಳೂರು ಹೊರವಲಯದ ಕಿನ್ನಿಗೋಳಿ ಎಂಬಲ್ಲಿರುವ ಶ್ರೀನಿಧಿ ಶೆಟ್ಟಿಯವರ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಹರಕೆಯ ನೇಮೋತ್ಸವ ಅದ್ಧೂರಿಯಿಂದ ನಡೆಯಿತು. ಈ ವೇಳೆ ಕೆಜಿಎಫ್​ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರು ನೇಮೋತ್ಸವ ಹರಕೆ ತೀರಿಸಿದ್ದಾರೆ. ಈ ಹಿಂದೆ ಶ್ರೀನಿಧಿ ಶೆಟ್ಟಿ ಹರಕೆ ಹೊತ್ತಿದ್ದರಿಂದ ಕಿನ್ನಿಗೋಳಿ ಸಮೀಪ ತಾಳಿಪಾಡಿಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆದಿದೆ. ಇದರಲ್ಲಿ ಶ್ರೀ ನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಮೋತ್ಸವ ಹರಿಕೆ ತೀರಿಸಿದ ಕೆಜಿಎಫ್​ ಖ್ಯಾತಿಯ ಬ್ಯೂಟಿ ಶ್ರೀನಿಧಿ ಶೆಟ್ಟಿ.. ಎಲ್ಲಿ?

https://newsfirstlive.com/wp-content/uploads/2024/05/SHRI_NIDHI.jpg

Load More