newsfirstkannada.com

ರಮೇಶ್ ಕುಮಾರ್ vs ಕೆ.ಹೆಚ್‌.ಮುನಿಯಪ್ಪ..! ದೆಹಲಿಯಲ್ಲಿ ಎರಡು ಬಣಗಳಿಂದ ಕೋಲಾರ ಟಿಕೆಟ್​​ಗಾಗಿ ಶಕ್ತಿ ಪ್ರದರ್ಶನ..!

Share :

Published March 21, 2024 at 7:49am

    ಹೈಕಮಾಂಡ್ ಮುಂದೆ ಕೋಲಾರ ಕಾಂಗ್ರೆಸ್‌ ನಾಯಕರ ಫೈಟ್

    ರಮೇಶ್ ಕುಮಾರ್ ಯಾರಿಗೆ ಟಿಕೆಟ್ ನೀಡಬೇಕು ಎನ್ನುತ್ತಿದ್ದಾರೆ?

    ಸಚಿವ ಕೆ.ಹೆಚ್​. ಮುನಿಯಪ್ಪರ ಲಾಬಿ ಯಾರಿಗಾಗಿ..?

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಕಾವೇರತೊಡಗಿದೆ. ಮತ್ತೊಂದೆಡೆ ರಾಜಕೀಯ ಪಕ್ಷಗಳು ಗೆಲ್ಲುವ ಕುದುರೆಗಳನ್ನು ಅಖಾಡಕ್ಕಿಳಿಸಲು ಭಾರೀ ಕಸರತ್ತು ಮಾಡ್ತಿವೆ. ರಾಜ್ಯದ 2ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್​ ಹೈಕಮಾಂಡ್​ ಬಳಿ ಚರ್ಚೆ ನಡೆಸಿದೆ. ಆದರೆ ಕಾಂಗ್ರೆಸ್​ಗೆ ಕೋಲಾರದ ಟಿಕೆಟ್​ ತಲೆನೋವಾಗಿ ಪರಿಣಮಿಸಿದೆ. ಕೋಲಾರದ ಟಿಕೆಟ್​ಗಾಗಿ ಆಕಾಂಕ್ಷಿಗಳು ದೆಹಲಿಯಲ್ಲಿ ಹೈಕಮಾಂಡ್​ ಮುಂದೆ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಬೆಂಬಲಿಗರ ಜೊತೆ ರಮೇಶ್​ಕುಮಾರ್​, ಮುನಿಯಪ್ಪ ದೆಹಲಿ ಪ್ರವಾಸ

ಕೋಲಾರದ ಕಾಂಗ್ರೆಸ್​ ಟಿಕೆಟ್​ಗಾಗಿ ಸಚಿವ ಕೆ.ಹೆಚ್​.ಮುನಿಯಪ್ಪ ಮತ್ತು ಮಾಜಿ ಸಚಿವ ರಮೇಶ್​ಕುಮಾರ್​ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಷ್ಟೇ ಅಲ್ಲ, ತಮ್ಮ ಬೆಂಬಲಿಗರ ಜೊತೆ ದೆಹಲಿಗೆ ತೆರಳಿ, ಹೈಕಮಾಂಡ್​ ಬಳಿ ಟಿಕೆಟ್​ ಡಿಮ್ಯಾಂಡ್​ ಇಟ್ಟಿದ್ದಾರೆ.

ಕೋಲಾರ ‘ಕೈ’ ಟಿಕೆಟ್ ಕದನ

ದೆಹಲಿಯಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್​ ನಾಯಕರ ಬಣ ಶಕ್ತಿ ಪ್ರದರ್ಶನ ಮಾಡಿದ್ದು. ಎಲ್. ಹನುಮಂತಯ್ಯ ಪರ ರಮೇಶ್ ಕುಮಾರ್ ಟೀಂ ಲಾಬಿ ಮಾಡಿದೆ. ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, ಎಲ್​.ಹನುಮಂತಯ್ಯ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಚಿವ ಕೆ.ಹೆಚ್​.ಮುನಿಯಪ್ಪಗೆ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಹೈಕಮಾಂಡ್​ ಸೂಚಿಸಿದೆ. ಆದ್ರೆ ಇದಕ್ಕೆ ಹಿಂದೇಟು ಹಾಕಿರುವ ಸಚಿವ ಕೆ.ಹೆಚ್​.ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಹತ್ತು-ಹದಿನೈದು ಮಂದಿಯ ತಂಡದೊಂದಿಗೆ ಉಭಯ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಬಣಗಳ ವಾದಕ್ಕೆ ಹೈಕಮಾಂಡ್​ ನಾಯಕರು ಸುಸ್ತಾಗಿದ್ದಾರೆ. ಒಂದ್ವೇಳೆ ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ಕೊಟ್ಟರೆ ಮುನಿಯಪ್ಪಗೆ ಸಿಟ್ಟು.. ಅತ್ತ ಮುನಿಯಪ್ಪಗೆ ಕೊಟ್ಟರೆ ರಮೇಶ್ ಕುಮಾರ್‌ ಅಸಮಾಧಾನಗೊಳ್ಳಲಿದ್ದಾರೆ. ಹೀಗಾಗಿ ಯಾವ ಬಣಕ್ಕೆ ಮಣೆ ಹಾಕಬೇಕೆಂಬ ಗೊಂದಲದಲ್ಲಿ ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಸಿಲುಕಿಕೊಂಡಿದ್ದಾರೆ.

17 ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮ
ರಾಜ್ಯದ 21 ಕ್ಷೇತ್ರಗಳ ಟಿಕೆಟ್​ ಫೈನಲ್​ಗಾಗಿ ಕಳೆದ ಎರಡು ದಿನಗಳಿಂದ ಸಿಎಂ, ಡಿಸಿಎಂ ದೆಹಲಿಯಲ್ಲಿ ಬೀಡುಬಿಟ್ಟು, ಕಾಂಗ್ರೆಸ್​ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿ ಫೈನಲ್​ ಮಾಡಿದ್ದಾರೆ. 2ನೇ ಪಟ್ಟಿಯಲ್ಲಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕೋಲಾರದಲ್ಲಿ ಟಿಕೆಟ್​ ಫೈಟ್​ ಇರುವ ಕಾರಣ, ಕೋಲಾರ ಸೇರಿದಂತೆ 4 ಕ್ಷೇತ್ರಗಳನ್ನು ಪೆಂಡಿಂಗ್​ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು ಎಂದು ಸಿಇಸಿ ಸಭೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇವತ್ತು ಬೆಳಗ್ಗೆಯೇ ಕಾಂಗ್ರೆಸ್​ ಪಟ್ಟಿ ರಿಲೀಸ್​ ಆಗುವ ಸಾಧ್ಯತೆ ಇದೆ. ಈ ಬಾರಿ ಐವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 50% ಯುವಕರಿಗೆ ಅವಕಾಶ ನೀಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಒಟ್ಟಾರೆ, ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ 20 ಕ್ಷೇತ್ರಗಳ ಟಾರ್ಗೆಟ್​ ಫಿಕ್ಸ್​ ಮಾಡಿಕೊಂಡಿರುವ ಕಾಂಗ್ರೆಸ್​ ಗೆಲ್ಲುವ ಕುದುರೆಗಳನ್ನು ಅಖಾಡಕ್ಕೆ ಇಳಿಸಲು ಕಸರತ್ತು ಮಾಡ್ತಿದೆ. ಆದ್ರೆ 3-4 ಕ್ಷೇತ್ರಗಳಲ್ಲಿ ಗೊಂದಲವಿದ್ದು, ಅದನ್ನು ಯಾವ ರೀತಿ ಪರಿಹರಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ವರದಿ: ಜಗದೀಶ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಮೇಶ್ ಕುಮಾರ್ vs ಕೆ.ಹೆಚ್‌.ಮುನಿಯಪ್ಪ..! ದೆಹಲಿಯಲ್ಲಿ ಎರಡು ಬಣಗಳಿಂದ ಕೋಲಾರ ಟಿಕೆಟ್​​ಗಾಗಿ ಶಕ್ತಿ ಪ್ರದರ್ಶನ..!

https://newsfirstlive.com/wp-content/uploads/2024/03/RAMESH-KUMAR.jpg

Load More