newsfirstkannada.com

Breaking News: ನಾಳೆ ವಿಶ್ವಕಪ್ ಪಂದ್ಯ ನಡೆಯಲು ಬಿಡೋದಿಲ್ಲ -ಖಲಿಸ್ತಾನಿ ಉಗ್ರರಿಂದ ಎಚ್ಚರಿಕೆ

Share :

Published November 18, 2023 at 1:56pm

  ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ ಪಂದ್ಯ

  ವಿಡಿಯೋ ರಿಲೀಸ್ ಮಾಡಿ ಬೆದರಿಕೆ ಕೊಟ್ಟ ಉಗ್ರ

  ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್​ನಿಂದ ಬೆದರಿಕೆ

ನಾಳೆ ನಡೆಯುವ ವಿಶ್ವಕಪ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರರಿಂದ ಮತ್ತೊಂದು ಬೆದರಿಕೆ ಬಂದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸೋದಾಗಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದಾನೆ.

ಎರಡನೇ ವಿಡಿಯೋ ಬಿಡುಗಡೆ ಮಾಡಿರುವ ಖಲಿಸ್ತಾನಿ ಉಗ್ರ, ಭಾರತ-ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲು ಬಿಡುವುದಿಲ್ಲ. ಪಂದ್ಯವನ್ನು ನಿಲ್ಲಿಸುತ್ತೇವೆ ಎಂದು ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾನೆ. ಅಂದ್ಹಾಗೆ ಈತ, ಈ ರೀತಿ ಬೆದರಿಕೆ ವಿಡಿಯೋ ಬಿಡುಗಡೆ ಮಾಡುತ್ತಿರೋದು ಮೊದಲೇನಲ್ಲ. ಅಕ್ಟೋಬರ್​ನಲ್ಲಿ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದ.

ಇತ್ತೀಚೆಗೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಧರ್ಮಶಾಲದ ಸರ್ಕಾರಿ ಕಟ್ಟಡದ ಗೊಡೆ ಮೇಲೆ ಖಲಿಸ್ತಾನಿ ಬರಹ ಪತ್ತೆಯಾಗಿತ್ತು. ಧರ್ಮಶಾಲಾದ ಜಲಶಕ್ತಿ ಕಟ್ಟದ ಗೊಡೆ ಮೇಲೆ ‘ಖಲಿಸ್ತಾನಿ ಜಿಂದಾಬಾದ್’ ಎಂದು ಬರೆಯಲಾಗಿತ್ತು. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಉಗ್ರರು ದಾಳಿ ಮಾಡುವ ಆತಂಕ ಎದುರಾಗಿತ್ತು. ಆದರೆ ಅದ್ಯಾವುದಕ್ಕೂ ಭದ್ರತಾ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿಲ್ಲ. ಅದರಂತೆ ನಾಳೆ ನಡೆಯುವ ಪಂದ್ಯಕ್ಕೆ ಪೊಲೀಸ್ ಅಧಿಕಾರಿಗಳು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ನಾಳೆ ವಿಶ್ವಕಪ್ ಪಂದ್ಯ ನಡೆಯಲು ಬಿಡೋದಿಲ್ಲ -ಖಲಿಸ್ತಾನಿ ಉಗ್ರರಿಂದ ಎಚ್ಚರಿಕೆ

https://newsfirstlive.com/wp-content/uploads/2023/11/Team-India_Win.jpg

Load More