/newsfirstlive-kannada/media/post_attachments/wp-content/uploads/2024/11/Kharge-Vs-Yogi-1.jpg)
ಮಲ್ಲಿಕಾರ್ಜುನ್​ ಖರ್ಗೆ, ಕಾಂಗ್ರೆಸ್​ನ ಕ್ಯಾಪ್ಟನ್​​. ಮೊನ್ನೆ ಮಹಾರಾಷ್ಟ್ರದಲ್ಲಿ ಯೋಗಿ ಜೊತೆಗೆ ನಡೆದ ಮಾತಿನ ವಾಗ್ಯುದ್ಧ ದೇಶವನ್ನೇ ಮತ್ತೊಮ್ಮೆ ರಜಾಕಾರರ ರಾಕ್ಷಸತನ ನೆನಪಿಸಿತ್ತು. ಇದೀಗ ಇದೇ ಮಾತಿನ ಬಗ್ಗೆ ಖರ್ಗೆ ಹುಟ್ಟೂರು ಜನ, ಕುಟುಂಬಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಇಡೀ ದೇಶದಲ್ಲೇ ಸದ್ದು ಮಾಡ್ತಿದೆ. ಅದರಲ್ಲೂ ಯೋಗಿ ಆದಿತ್ಯನಾಥ್​​ ಹೊತ್ತಿಸಿದ ಕಿಡಿ, ಧಗಧಗಿಸ್ತಿದೆ. ಸಾಧು-ಸಂತರನ್ನ ಕೆಣಕಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮಾತಿನ ಪೆಟ್ಟು ಕೊಟ್ಟ ಯೋಗಿ, 80 ವರ್ಷಗಳ ಹಿಂದಿನ ಘಟನೆ ಪ್ರಸ್ತಾಪಿಸಿ ತಿರುಗೇಟು ನೀಡಿದ್ರು.ರಜಾಕಾರರ ಕೃತ್ಯ ಪ್ರಸ್ತಾಪಿಸಿ ಖರ್ಗೆ ರಾಜಕಾರಣವನ್ನ ಕುಟುಕಿದ ಸಿಎಂ ಯೋಗಿ, ಮತ ಬ್ಯಾಂಕ್‌ಗಾಗಿ ಕುಟುಂಬದವರ ತ್ಯಾಗವನ್ನ ಖರ್ಗೆ ಮರೆತಿದ್ದಾರೆ ಅಂತ ತಿವಿದಿದ್ರು.
/newsfirstlive-kannada/media/post_attachments/wp-content/uploads/2024/11/Kharge-Vs-Yogi.jpg)
ಸಿಎಂ ಯೋಗಿ ಮಾತಿಗೆ ಖರ್ಗೆ ಫ್ಯಾಮಿಲಿ ಬೇಸರ!
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ, ಇದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹುಟ್ಟೂರು.. ರಜಾಕಾರರ ರಾಕ್ಷಸತನದಲ್ಲಿ ಸುಟ್ಟುಹೋದ ಮನೆ ಅವಶೇಷ ಈಗಲೂ ಇದೆ. ಈ ದಾಳಿ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ತಾಯಿ ಹಾಗೂ ತಂಗಿ ಸಹ ಮೃತರಾಗಿದ್ದರು. ಕುಟುಂಬಸ್ಥರನ್ನು ಕಳೆದುಕೊಂಡ ಬಳಿಕ ಖರ್ಗೆ ತಂದೆ ಮಾಪಣ್ಣ ವರವಟ್ಟಿ ತೊರೆದು, ಕಲಬುರಗಿಗೆ ಹೋಗಿ ನೆಲೆಸಿದ್ದರು.. ಈ ಗ್ರಾಮ ತೊರೆದ ಬಳಿಕ ಮಲ್ಲಿಕಾರ್ಜುನ ಖರ್ಗೆ ದೇಶವೇ ಗುರುತಿಸುವಂತೆ ರಾಜಕೀಯ ನಾಯಕನಾಗಿ ಬೆಳೆದಿದ್ದು ಇತಿಹಾಸ. ಇದೀಗ ಮಾಸದ ಗಾಯ ಕೆದಕಿದ ಯೋಗಿ ಮಾಡಿದ ಟೀಕೆಗೆ ಖರ್ಗೆ ಕುಟುಂಬ ಅಸಮಾಧಾನ ಹೊರಹಾಕಿದೆ.
ಇದನ್ನೂ ಓದಿ:50 MLAಗಳಿಗೆ ತಲಾ ₹50 ಕೋಟಿ ಆಫರ್.. ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ
ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಕುರಿತು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರ ಸಂಬಂಧಿ ಸರಸ್ವತಿ ಖರ್ಗೆ, ಮಲ್ಲಿಕಾರ್ಜುನ್ ಖರ್ಗೆ ಆಗಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಆಗಲಿ, ಕಳೆದು ಹೋದ ಆ ಘಟನೆಯ ನೆನಪನ್ನೇ ತೆಗೆಯುವುದಿಲ್ಲ ಎಂದಿದ್ದಾರೆ. ಇನ್ನು ಮತ್ತೊಬ್ಬ ಸಂಬಂಧಿ ಸಂಜೀವ್​ ಕುಮಾರ್ ಮಾತನಾಡಿ, ಅಂದಿನ ಸಂದರ್ಭ ಹಾಗಿತ್ತು. ಹಿಂದೂ ಮುಸ್ಲಿಂ ಕದನಗಳು ನಡೆಯುತ್ತಿದ್ದವು. ಈಗ ಸ್ವತಂತ್ರ ಭಾರತದಲ್ಲಿ ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಈಗ ಯೋಗಿ ಆದಿತ್ಯನಾಥ್ ಹಳೆಯ ವಿಷಯವನ್ನು ಕೆದಕುವುದು ತಪ್ಪು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us