newsfirstkannada.com

ಐವರು ಸಚಿವರ ಮಕ್ಕಳಿಗೂ ಟಿಕೆಟ್; ಸಚಿವರ ಪತ್ನಿ, ಮಾಜಿ ಸಚಿವರ ಪುತ್ರರಿಗೂ ಕಾಂಗ್ರೆಸ್​ ಟಿಕೆಟ್..!

Share :

Published March 22, 2024 at 7:45am

    ಕಾಂಗ್ರೆಸ್​ನಲ್ಲಿ 4 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ, ಯಾಕೆ?

    ಕೋಲಾರದಲ್ಲಿ ಹನುಮಂತಯ್ಯ, ಕೆ.ಎಚ್‌.ಮುನಿಯಪ್ಪ ನಡುವೆ ಪೈಪೋಟಿ

    ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್

ರಾಜ್ಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಹೊಸ ಮುಖಗಳಿಗೆ ಆದ್ಯತೆ ಸಿಕ್ಕಿದೆ ಮಾತ್ರವಲ್ಲದೇ, ಐವರು ಸಚಿವರ ಮಕ್ಕಳಿಗೂ ಕಾಂಗ್ರೆಸ್​ ಹೈಕಮಾಂಡ್​ ಮಣೆ ಹಾಕಿದೆ. ಇದರಲ್ಲಿ ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಕರ್ನಾಟಕದಲ್ಲಿ 20 ಕ್ಷೇತ್ರಗಳ ಗೆಲುವಿನ ಗುರಿ ಇಟ್ಟಿಕೊಂಡಿರುವ ಕಾಂಗ್ರೆಸ್​, ಇದುವರೆಗೆ 24 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಹಿಂದೆ ಮೊದಲ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡಿತ್ತು. ಇದೀಗ ಕಗ್ಗಂಟಾಗಿದ್ದ ಕ್ಷೇತ್ರಗಳಿಗೆ ಅಳೆದು ತೂಗಿ, ಟಿಕೆಟ್​ ಘೋಷಣೆ ಮಾಡಿದೆ. ರಾಜ್ಯದ 2ನೇ ಪಟ್ಟಿಯಲ್ಲಿ ಸಚಿವರ ಸಂಬಂಧಿಗಳಿಗೆ ಹೆಚ್ಚು ಟಿಕೆಟ್​ ನೀಡಿದೆ.

ಐವರು ಸಚಿವರ ಮಕ್ಕಳಿಗೆ ಕಾಂಗ್ರೆಸ್​ ಹೈಕಮಾಂಡ್​ ಮಣೆ

  • ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್​
  • ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ
  • ಬಾಗಲಕೋಟೆ- ಸಂಯುಕ್ತಾ ಪಾಟೀಲ್​
  • ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
  • ಬೀದರ್​ – ಸಾಗರ್ ಖಂಡ್ರೆ

‘ಟಿಕೆಟ್​ ಕೊಟ್ಟಿದ್ದಕ್ಕೆ ಖುಷಿಯಾಗಿದೆ’

ಎಲ್ಲ ಅಭ್ಯರ್ಥಿಗಳಿಗೆ ಖುಷಿಯಾದಂತೆ ನನಗೂ ತುಂಬಾ ಸಂತಸವಾಗಿದೆ. ತತ್ವ ಸಿದ್ಧಾಂತದ ಪರ ಹೋರಾಟ ಮಾಡೋಕೆ ಪಕ್ಷ ನನಗೊಂದು ಅವಕಾಶ ಕೊಟ್ಟಿದೆ. ಕಂಗ್ರೆಸ್​ ಕೊಟ್ಟಿರುವಂತ ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನ್ನಲ್ಲಿದೆ.

ಸಂಯುಕ್ತಾ ಪಾಟೀಲ್​, ಸಚಿವ ಶಿವಾನಂದ್ ಪಾಟೀಲ್​ ಪುತ್ರಿ

ಜನರು ಆಶೀರ್ವಾದ ಮಾಡ್ತಿದ್ದಾರೆ’

ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ, ನೀವೇ ಬರಬೇಕು, ನಿಮಗೆ ಆಶೀರ್ವಾದ ಮಾಡುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ನಾನು ಕೂಡ ಎಲ್ಲರಲ್ಲೂ ಇದನ್ನೆ ಮನವಿ ಮಾಡುತ್ತೇನೆ.

ಸೌಮ್ಯ ರೆಡ್ಡಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ ‘

ಶಾಮನೂರು ಸೊಸೆ, ಮಾಜಿ ಸಚಿವರ ಪುತ್ರರಿಗೆ ಟಿಕೆಟ್​

ಕೇವಲ ಸಚಿವರ ಮಕ್ಕಳಿಗಾಗಿ ಮಾತ್ರವಲ್ಲ.. ಸಚಿವರ ಪತ್ನಿ, ಮಾಜಿ ಸಚಿವರ ಪುತ್ರರಿಗೂ ಕಾಂಗ್ರೆಸ್​ ಟಿಕೆಟ್​ ನೀಡಿದೆ. ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ನಿರೀಕ್ಷೆಯಂತೆಯೇ ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲಾಗಿದೆ.‌ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಅವರಿಗೆ ಬೆಂಗಳೂರು ಕೇಂದ್ರದಿಂದ ಟಿಕೆಟ್ ನೀಡಲಾಗಿದೆ.

ಹೊಸ ಮುಖಗಳಿಗೂ ಟಿಕೆಟ್​ ನೀಡಿದ ಕಾಂಗ್ರೆಸ್​

ಸಚಿವರ ಮಕ್ಕಳು, ಸಂಬಂಧಿಗಳು, ಮಾಜಿ ಸಚಿವರ ಮಕ್ಕಳಿಗೆ ಮಾತ್ರ.. ಹೊಸ ಮುಖಗಳನ್ನು ಅದೃಷ್ಟ ಪರೀಕ್ಷೆಗಾಗಿ ಈಬಾರಿ ಕಾಂಗ್ರೆಸ್​ ಲೋಕ ಅಖಾಡಕ್ಕೆ ಇಳಿಸಿದೆ.

ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್​ ಅಸೂಟಿ ಅವರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲೂ ಕಾಂಗ್ರೆಸ್ ಹೊಸ‌ ಮುಖಕ್ಕೆ ಮಣೆ ಹಾಕಿದೆ. ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪರ್ಧಿಸಬೇಕೆಂದು ಸಾಕಷ್ಟು ಬೇಡಿಕೆ ಇತ್ತು. ಆದರೆ, ನಿರೀಕ್ಷೆಯಂತೆ ಖರ್ಗೆ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿದ್ದಾರೆ.

4 ಕ್ಷೇತ್ರಗಳ ಟಿಕೆಟ್​ ಪೆಂಡಿಂಗ್​ ಇಟ್ಟ ಕಾಂಗ್ರೆಸ್​

ರಾಜ್ಯದ 28 ಕ್ಷೇತ್ರಗಳ ಪೈಕಿ ಸದ್ಯ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್​ ಆಖಾಡಕ್ಕೆ ಇಳಿಸಿದೆ. ಆದ್ರೆ, ತೀವ್ರ ಪೈಪೋಟಿರುವ ಇರುವ 4 ಕ್ಷೇತ್ರಗಳನ್ನು ಪೆಂಡಿಂಗ್​ ಉಳಿಸಿಕೊಂಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಸೇರಿದಂತೆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಕೋಲಾರದಿಂದ ಡಾ.ಎಲ್‌.ಹನುಮಂತಯ್ಯ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅಳಿಯನ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಇನ್ನೂ ನಾಲ್ಕು ಕ್ಷೇತ್ರ ಬಾಕಿ: . ಚಾಮರಾಜನಗರ ಕ್ಷೇತ್ರದಿಂದ ತಮ್ಮ ಮಗನನ್ನು ಕಣಕ್ಕಿಳಿಸುವಂತೆ ಸಚಿವ ಹೆಚ್.ಸಿ.ಮಹದೇವಪ್ಪ ಒತ್ತಡ ಹೇರುತ್ತಿದ್ದಾರೆ. ಇವತ್ತು ಅಥವಾ ನಾಳೆ ಎಲ್ಲವೂ ಫೈನಲ್​ ಆಗುವ ಸಾಧ್ಯತೆ ಇದೆ.

ಕಗ್ಗಂಟಾಗಿದ್ದ ಕ್ಷೇತ್ರಗಳಿಗೆ ಅಳೆದೂ ತೂಗಿ ಕಾಂಗ್ರೆಸ್​ ಹೈಕಮಾಂಡ್​ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಟಿಕೆಟ್​ ಸಿಕ್ಕ ಅಭ್ಯರ್ಥಿಗಳಿಗೆ ಖುಷಿಯಾಗಿದ್ದರೆ, ಟಿಕೆಟ್​ ಮಿಸ್​ ಆದವರು ಬೇಸರದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐವರು ಸಚಿವರ ಮಕ್ಕಳಿಗೂ ಟಿಕೆಟ್; ಸಚಿವರ ಪತ್ನಿ, ಮಾಜಿ ಸಚಿವರ ಪುತ್ರರಿಗೂ ಕಾಂಗ್ರೆಸ್​ ಟಿಕೆಟ್..!

https://newsfirstlive.com/wp-content/uploads/2024/03/CONGRESS_MINISTERS_CHILDERNS.jpg

Load More