/newsfirstlive-kannada/media/post_attachments/wp-content/uploads/2024/12/KIADB-WROTE-LETTER-1.jpg)
ನೀರಾವರಿ ವಿದ್ಯುತ್​ ಬಿಲ್ ಪಾವತಿಸುವಂತೆ ಸಿದ್ದಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭವೃದ್ಧಿ ಮಂಡಳಿ ಪತ್ರ ಬರೆದಿದ್ದು, ಅದನ್ನು ಕಂಡ ಸಿದ್ದಗಂಗಾ ಮಠದ ಆಡಳಿತ ಮಂಡಳಿ ಶಾಕ್​ ಆಗಿದೆ,. ಕೆಐಎಡಿಬಿ ಅಭೀಯಂತರರಿಂದ ಸಿದ್ದಗಂಗಾ ಮಠಕ್ಕೆ ಸುಮಾರು 70 ಲಕ್ಷ 31 ಸಾವಿರದ 438 ರೂಪಾಯಿ ಕಟ್ಟುವಂತೆ ಪತ್ರ ಬರೆದಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರೋದ್ರಿಂದ ಈ ವಿದ್ಯುತ್ ಬಿಲ್​ನ್ನುನ ಣಿವು ಭರಸಲು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಕಳೆದ ಏಪ್ರಿಲ್ 6 ರಂದು ಕೆಐಎಡಿಬಿಯಿಂದ ಸಿದ್ದಗಂಗಾ ಮಠಕ್ಕೆ ಬಂದಿರುವ ಪತ್ರ ಇದಾಗಿದ್ದು. ಏಪ್ರಿಲ್ 15 ರಂದು ಸಿದ್ದಗಂಗಾ ಮಠದಿಂದ ಕೆಐಎಡಿಬಿಗೆ ಮರು ಪತ್ರ ರವಾನೆಯಾಗಿದೆ. ಪತ್ರ ರವಾನೆಯಾಗಿ 8 ತಿಂಗಳಾದರೂ ಕೂಡ ಕೆಐಎಡಿಬಿ ಯಾವುದೇ ಕ್ರಮ ಕೈಗೊಂಡಿಲ್ಲ. ಮರಳಿ ಅಧಿಕಾರಿಗಳು ಬಿಲ್ ಕಟ್ಟುವಂತೆ ಮೌಖಿಕವಾಗಿ ಮಠದ ಆಡಳಿತ ಮಂಡಗಳಿಗೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/12/KIADB-WROTE-LETTER.jpg)
ಇದನ್ನೂ ಓದಿ:ಮನೆ.. ಮನೆ.. ರಾಮಾಯಣ, ನೋ ಬ್ರೋಕರ್ ಆ್ಯಪ್​ ನಂಬಿ ಹಣ ಕೊಡುವ ಮುಂಚೆ ಹುಷಾರ್​!
ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್​ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿಯವರೆಗೆ ಕೇವಲ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆಯಷ್ಟೇ. ಸದ್ಯ ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಎಕ ವೆಚ್ಚವಾದ ಬಿಲ್​​ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಪತ್ರ ಬರೆದಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಹಣ ದೋಚಲು ಹೊಸ ದಾರಿ ಕಂಡು ಹಿಡಿದ ಖದೀಮರು; ಮದುವೆ ಇನ್ವಿಟೇಷನ್ ಎಂದು ಓಪನ್ ಮಾಡಿದ್ರೆ ಫಿನೀಶ್!
/newsfirstlive-kannada/media/post_attachments/wp-content/uploads/2024/03/SIDDAGANGA.jpg)
ನೀರಿನ ಕರ ಕಟ್ಟೋದು ಸಹಜ, ಆದರೇ ಇಡೀ ಕೆರೆಗೆ ನೀರು ತುಂಬಿಸಿದ ವಿದ್ಯುತ್ ಬಿಲ್ ಮಠದಿಂದ ಯಾಕೆ ಕಟ್ಟಬೇಕು ಎಂದು ಮಠದ ಆಡಳಿತ ಮಂಡಳಿ ಪ್ರಶ್ನೆ ಮಾಡಿದೆ. ಕೆರೆಗೆ ನೀರು ತುಂಬಿಸಿರುವುದು ಒಂದು ಸರ್ಕಅರಿ ಯೋಜನೆ. ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಪೂರೈಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಹಾಗಾಗಿ ಸರ್ಕಾರವೇ ಬಜೆಟ್​ನಲ್ಲಿ ಹಣ ಮೀಸಲಿಡಲಿ. ಮಠ ನೀರನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಮಠದ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಹಂತದಲ್ಲಿ ಇದೆ ಎಂದು ಮಠದ ಆಡಳಿತ ಮಂಡಳಿ ಮರುಪತ್ರ ಬರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us