/newsfirstlive-kannada/media/post_attachments/wp-content/uploads/2025/05/kiara-advani.jpg)
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ‘ಮೆಟ್ ಗಾಲಾ 2025’ ನಡೆಯುತ್ತಿದೆ. ಇದಕ್ಕೆ ದೇಶ ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ ರೆಡ್ ಕಾರ್ಪೆಟ್ನಲ್ಲಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ:ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್.. ಈ ಯುದ್ಧ ಕವಾಯತ್ನ ಉದ್ದೇಶ ಏನು..?
ಆದ್ರೇ ಈ ಬಾರಿಯ ಮೆಟ್ ಗಾಲಾ 2025ನಲ್ಲಿ ಭಾರತದ ಕೆಲವೇ ಕೆಲವು ಮಂದಿ ಇದರಲ್ಲಿ ಭಾಗಿ ಆಗಿದ್ದಾರೆ. ಅದರಲ್ಲಿ ಎಲ್ಲರ ಕಣ್ಮನ ಸೆಳೆದಿದ್ದು ಬಾಲಿವುಡ್ ನಡಿ ಕಿಯಾರಾ ಅಡ್ವಾಣಿ.
ಹೌದು, ಈ ಬಾರಿಯ ಮೆಟ್ ಗಾಲಾ 2025 ಫ್ಯಾಷನ್ ಹಬ್ಬಕ್ಕೆ ಮತ್ತಷ್ಟೂ ಮೆರಗು ತಂದಿದ್ದು ಎಂದ್ರೆ ಅದು ಕಿಯಾರಾ ಅಡ್ವಾಣಿ. ಮೊನ್ನೆಯಷ್ಟೇ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ದಂಪತಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕಟ್ಟಿದ್ದರು.
ಸದ್ಯ ನಟಿ ಕಿಯಾರಾ ತಮ್ಮ ಮೊದಲ ಮಗುವಿನ ನಿರೀಕ್ಷೆಯದ್ದಾರೆ. ಇದೇ ಖುಷಿಯಲ್ಲಿದ್ದ ನಟಿ ಕಿಯಾರಾ ತಮ್ಮ ಬೇಬಿ ಬಂಪ್ ಜೊತೆ ಮೆಟ್ ಗಾಲಾಗೆ ಆಗಮಿಸಿದ್ದಾರೆ. ಗರ್ಭಿಣಿ ಆಗಿಯೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
View this post on Instagram
ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪ್ರೆಗ್ನೆಂಟ್ ಆಗಿರೋ ನಟಿ ಅಂದದ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್ ಹಾಕುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ನಟಿ ಕಿಯಾರಾ ಅಡ್ವಾಣಿ ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಪ್ರೆಗ್ನೆಂಟ್ ಆಗುವುದಕ್ಕೂ ಮೊದಲೇ ಸಿನಿಮಾದ ಶೂಟ್ನ ಕಂಪ್ಲೀಟ್ ಮಾಡಿದ್ದಾರೆ. ಅಲ್ಲದೇ ‘ವಾರ್ 2’ ಚಿತ್ರಕ್ಕೂ ಕಿಯಾರಾ ನಾಯಕಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ