/newsfirstlive-kannada/media/post_attachments/wp-content/uploads/2025/02/Kiara-Advani.jpg)
ಬಾಲಿವುಡ್‌ನ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ತಾಯಿಯಾಗುತ್ತಿದ್ದಾರೆ. ಕಿಯಾರಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೋಡಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ವಿಶೇಷವಾದ ಫೋಟೋ ಹಂಚಿಕೊಂಡಿರುವ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಗ್ರೇಟೆಸ್ಟ್ ಗಿಫ್ಟ್ ಕಮಿಂಗ್ ಸೂನ್ ಎಂದಿದ್ದಾರೆ. ನಮ್ಮ ಜೀವನದ ಗ್ರೇಟೆಸ್ಟ್ ಗಿಫ್ಟ್ ಆಗಮನವಾಗುತ್ತಿದೆ ಅನ್ನೋ ಮೂಲಕ ತಾವು ಚೊಚ್ಚಲ ಮಗುವಿಗೆ ತಂದೆ-ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/Kiara-Advani-mother.jpg)
ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜಂಟಿಯಾಗಿ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ಕೊಟ್ಟಿದ್ದಾರೆ. ಸ್ಟಾರ್ ಜೋಡಿಯ ಫೋಸ್ಟ್ ಫುಲ್ ವೈರಲ್ ಆಗಿದ್ದು, ಬಾಲಿವುಡ್‌ನ ಹಲವು ತಾರೆಯರು ಪ್ರೀತಿಯಿಂದ ಕಂಗ್ರಾಟ್ಸ್ ಹೇಳಿದ್ದಾರೆ. ಬಾಲಿವುಡ್‌ನ ಕ್ಯೂಟ್ ಕಪಲ್ ಕೊಟ್ಟ ಗುಡ್‌ನ್ಯೂಸ್‌ಗೆ ಶುಭಾಶಯಗಳ ಮಳೆಯೇ ಸುರಿದಿದೆ.
2023, ಫೆಬ್ರವರಿ 7ಕ್ಕೆ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇವರ ಮದುವೆಗೆ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಬಳಿಕ ಮುಂಬೈನಲ್ಲಿ ಸ್ಟಾರ್ ಜೋಡಿ ಆರತಕ್ಷತೆ ನಡೆದಿದ್ದು, ಮೆಗಾ ಸ್ಟಾರ್‌ಗಳ ಸಂಗಮಕ್ಕೆ ಸಾಕ್ಷಿಯಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us