/newsfirstlive-kannada/media/post_attachments/wp-content/uploads/2024/10/Kiccha-Sudeep-4.jpg)
[caption id="attachment_92877" align="alignnone" width="800"]
ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ಮನೆಯಲ್ಲಿ ಸಾವಿನ ಸುದ್ದಿ ಕೇಳಿಬಂದಿದೆ. ಬಾದ್​​ ಷಾ ಸುದೀಪ್​ ತಾಯಿ ಸರೋಜರವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ್ದಾರೆ.[/caption]
[caption id="attachment_92878" align="alignnone" width="800"]
ಸರೋಜಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು.[/caption]
[caption id="attachment_92879" align="alignnone" width="800"]
ಚಿಕಿತ್ಸೆ ಫಲಕಾರಿಯಾಗದೆ ಕಿಚ್ಚ ಸುದೀಪ್​ ತಾಯಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ 7:04ಕ್ಕೆ ಇಹಲೋಕ ತ್ಯಜಿಸಿದ್ದಾರೆ.[/caption]
[caption id="" align="alignnone" width="800"]
ಸರೋಜಾರವರು ಪತಿ ಎಮ್​ ಸಂಜೀವ್​, ಮಗ ಸುದೀಪ್​, ಮಗಳಾದ ಸುಜಾತಾ, ಸುರೇಖಾ ಸೇರಿ ಮೂವರು ಮಕ್ಕಳು, ಒಟ್ಟು ಐವರು ಮೊಮ್ಮಕ್ಕಳು ಅಗಲಿದ್ದಾರೆ.[/caption]
[caption id="attachment_92874" align="alignnone" width="800"]
ಇಂದು ಮಧ್ಯಾಹ್ನ 12 ಗಂಟೆಗೆ ಪಾರ್ಥಿವ ಶರೀರವನ್ನ ಜೆಪಿ ನಗರದ ನಿವಾಸಕ್ಕೆ ಕುಟುಂಬಸ್ಥರು ತರಲಿದ್ದಾರೆ.[/caption]
[caption id="attachment_92881" align="alignnone" width="800"]
ಸುದೀಪ್​ ತಾಯಿ ಸರೋಜಾರವರು ಮೂಲತಃ ಮಂಗಳೂರಿನವರು. ವಿಕ್ರಾಂತ್​ ರೋಣ ಸಿನಿಮಾದ ಸಂದರ್ಶನವೊಂದರಲ್ಲಿ ಸುದೀಪ್​ ತಾಯಿ ತುಳು ಮಾತನಾಡುತ್ತಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದರು.[/caption]
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us