/newsfirstlive-kannada/media/post_attachments/wp-content/uploads/2024/04/SUDEEP.jpg)
ರಾಯಚೂರು: ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ ಅವರು ಪತ್ನಿ ಸಮೇತ ಇಂದು ರಾಯಚೂರು ನಗರದಲ್ಲಿರುವ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಗರದ ಗಾಂಧಿ ವೃತ್ತದಲ್ಲಿರುವ ಹನುಮಾನ್ ದೇವಾಲಯಕ್ಕೆ ಕಿಚ್ಚ ಸುದೀಪ್ ದಂಪತಿ ಭೇಟಿ ನೀಡಿದ್ದಾರೆ. ಈ ವೇಳೆ ಪತ್ನಿ ಪ್ರಿಯಾ ಸುದೀಪ್ ಜೊತೆ ಸೇರಿ ಹೋಮ ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುದೀಪ್ ಅವರು ದೇವಾಲಯದ ಜೀರ್ಣೋದ್ಧಾರ ವೇಳೆಯು ಭೇಟಿ ನೀಡಿದ್ದರು. ಈ ಹನುಮಾನ್ ಗುಡಿ ಇತ್ತೀಚೆಗೆಷ್ಟೇ ಉದ್ಘಾಟನೆಯಾಗಿತ್ತು.
/newsfirstlive-kannada/media/post_attachments/wp-content/uploads/2024/04/SUDEEP_PRIYA.jpg)
ಇನ್ನು ನಟ ಸುದೀಪ್ ಅವರು ದೇವಾಲಯಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿದ್ದಾರೆ. ಬಿರು ಬಿಸಿಲನ್ನು ಲೆಕ್ಕಿಸದೇ ಫ್ಯಾನ್ಸ್​ ನೆಚ್ಚಿನ ನಟನಿಗಾಗಿ ಹೊರಗಡೆ ಕಾದು ಕುಳಿತ್ತಿದ್ದಾರೆ. ಇನ್ನು ಸುದೀಪ್ ದಂಪತಿ ದೇವಾಸ್ಥಾನದ ಒಳಗೆ ದೇವರಿಗೆ ಹೋಮ ಹವನ, ಪೂಜೆಗಳನ್ನ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us