/newsfirstlive-kannada/media/post_attachments/wp-content/uploads/2023/10/bigg-boss-89.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಶುರುವಾಗಿ ಒಂದು ವಾರ ಕಳೆದಿದೆ. ಬಿಗ್ಬಾಸ್ ಸೀಸನ್ 10ನೇ ಮೊದಲ ವಾರದ ಕಿಚ್ಚನ ಪಂಚಾಯ್ತಿ ಕಟ್ಟೆ ಸಜ್ಜಾಗಿದೆ. ಕಿಚ್ಚನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮ ನಡೆಯುತ್ತಿದೆ. ಇನ್ನೂ ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪ್ರೋಮೋ ರಿಲೀಸ್ ಆಗಿದೆ.
ರಿಲೀಸ್ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಆಡಿದ ಮಾತುಗಳು ಸಖತ್ ಕುತೂಹಲ ಮೂಡಿಸಿವೆ. ‘ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡರೆ, ದೇವರೇ ಕ್ಷಮಿಸಿ ಒಂದು ವರ ಕೊಡುತ್ತಾನೆ’ ಎಂದು ಹೇಳಿರೋ ಮಾತುಗಳು ಸಾಮಾಜಿಕ ಜಾಲತಾಣಲ್ಲಿ ಭಾರೀ ವೈರಲ್ ಆಗಿದೆ.
ಮತ್ತೊಂದು ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಸಂತೋಷ ಅವರು ಡ್ರೋನ್ ಪ್ರತಾಪ್ ಬಗ್ಗೆ ಮಾತಾಡುವುದರ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಆ ಮಾತುಗಳನ್ನು ಅವರು ಯಾರಿಗೆ ಹೇಳಿದ್ದಾರೆ ಎಂಬುವುದು ಪ್ರೊಮೋದಲ್ಲಿ ಗೊತ್ತಾಗುತ್ತಿವೆ. ಇನ್ನೂ ಕಿಚ್ಚನ ಜೊತೆ ಮೊದಲ ಪಂಚಾಯತಿಯಲ್ಲಿ ಬಿಗ್ಬಾಸ್ ಸ್ಪರ್ಧಿಗಳು ಮಾತನಾಡೋಕೆ ಕಾತುರದಿಂದ ಕಾಯುತ್ತಿದ್ದಾರೆ. ಈಗ ಕಿಚ್ಚ ಸುದೀಪ್ ಅವರ ಜೊತೆ ಮಾತುಕಥೆ ನಡೆಸುವ ಹಂತ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ