/newsfirstlive-kannada/media/post_attachments/wp-content/uploads/2024/12/SUDEEP.jpg)
ಸ್ಯಾಂಡಲ್ವುಡ್ನಲ್ಲಿ ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಮ್ಯಾಕ್ಸಿಮಮ್ ಸೌಂಡ್ ಮಾಡ್ತಿದೆ. ಕ್ರಿಸ್ಮಸ್ ದಿನದಂದು ಥಿಯೇಟರ್ಗೆ ಲಗ್ಗೆಯಿಟ್ಟ ಮ್ಯಾಕ್ಸ್ನ ಮಾಸ್ ಅವತಾರಕ್ಕೆ ಸ್ಯಾಂಡಲ್ವುಡ್ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಮ್ಯಾಕ್ಸ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಬಾಸಿಸಂಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ಕಾಲ ಶುರುವಾಯ್ತು ಎಂದು ಬರೆಸಿದ್ದ ಕೇಕ್ ಅನ್ನು ನಟ ಸುದೀಪ್ ಕಟ್ ಮಾಡಿದ್ದರು.. ಇದು ದರ್ಶನ್‌ಗೆ ಟಾಂಗ್ ಕೊಟ್ಟಿರುವುದು ಎಂದು ದರ್ಶನ್ ಅಭಿಮಾನಿಗಳು ಅರ್ಥೈಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ವಾರ್ಗೆ ಇಳಿದಿದ್ರು. ಬಾಸಿಸಂ ವರ್ಸಸ್ ಮಾಕ್ಸಿಸಂ ಗದ್ದಲ ತಾರಕಕ್ಕೇರುತ್ತಿದ್ದಂತೆ ನಟ ಕಿಚ್ಚ ಸುದೀಪ್, ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:BBK11: ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಯಾವಾಗ? ಹೇಗಿದೆ ಪ್ಲಾನ್?
ಕಳೆದ ರಾತ್ರಿ ಮ್ಯಾಕ್ಸ್ ಚಿತ್ರದ ಥ್ಯಾಂಕ್ಸ್ ಗಿವಿಂಗ್ ಪ್ರೆಸ್ ಮೀಟ್ನಲ್ಲಿ ದರ್ಶನ್ ಅಭಿಮಾನಿಗಳ ಬಗ್ಗೆ ನೇರವಾಗೆ ಮಾತನಾಡಿರುವ ಕಿಚ್ಚ.. ಬಾಸ್ ಕೇಕ್ ವಿಚಾರಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಎಲ್ಲಾ ಅಭಿಮಾನಿಗಳು ಅವರ ಅವರ ಹೀರೋನಾ ಬಾಸ್ ಅಂತಾನೆ ಕರಿಯೋದು. ಅದು ಅಭಿಮಾನಿಗಳ ಅಭಿಮಾನ.. ಅದನ್ನು ವಿವಾದ ಮಾಡುತ್ತಿರುವುದು ಏಕೆ ಎಂದು ಬೇಸರ ವ್ಯಕ್ಯಪಡಿಸಿದ್ರು..
‘ನನ್ನ, ದರ್ಶನ್ ನಡುವೆ ಏನಿಲ್ಲ, ಎಲ್ಲರೂ ಸೇರಿದ್ರೆ ಕನ್ನಡ ಚಿತ್ರರಂಗ’
ಇನ್ನು ದರ್ಶನ್ ಬಗ್ಗೆ ನಟ ಕಿಚ್ಚ ಸುದೀಪ್ ಮನ ಬಿಚ್ಚಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ದಚ್ಚು-ಕಿಚ್ಚ ಸ್ನೇಹಿತರಂತೆ ಇದ್ದವರು. ಆದ್ರೆ ಕೆಲ ಕಾರಣಗಳಿಂದ ಇಬ್ಬರು ದೂರ ಆಗಿ ವರ್ಷಗಳೇ ಉರುಳಿವೆ. ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ನಟ ಸುದೀಪ್, ದರ್ಶನ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನ್ನ ಮತ್ತು ದರ್ಶನ್ ನಡುವೆ ಯಾವುದೇ ಸಮಸ್ಯೆ ಇಲ್ಲ. ದರ್ಶನ್ ಕಷ್ಟಪಟ್ಟು ಮೇಲೆ ಬಂದಿದ್ದಾರೆ.
ಇದನ್ನೂ ಓದಿ:ಜಾಮೀನು ಸಿಕ್ರೂ ತಪ್ಪದ ಸಂಕಷ್ಟ; ಇಂದು ದರ್ಶನ್ ವಿರುದ್ಧ ಪೊಲೀಸ್ರು ಸುಪ್ರೀಂಕೋರ್ಟ್ ಮೊರೆ!
ಇವತ್ತು ಚಿತ್ರರಂಗ ನೋವಲ್ಲಿ ಇದೆ. ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ ಎಂದು ಒಗ್ಗಟ್ಟಿನ ಮಾತು ಆಡಿದ್ದಾರೆ.ಕಿಚ್ಚನ ಈ ಮಾತುಗಳಿಗೆ ದರ್ಶನ್ ಮತ್ತು ದರ್ಶನ್ ಅಭಿಮಾನಿಗಳಿಂದ ಅದ್ಯಾವ ರಿಯಾಕ್ಷನ್ ಬರುತ್ತೋ ಗೊತ್ತಿಲ್ಲ ಆದ್ರೆ ನಟ ಸುದೀಪ್ ಮಾತುಗಳಲ್ಲೂ ಒಂದು ಅರ್ಥವಿದೆ. ಮನೆಯೊಳಗಣ ಕಿಚ್ಚು ತನ್ನ ಮನ ನೆಯ ಸುಡುವುದಲ್ಲದೆ.. ನೆರೆಮನೆಯ ಸುಡುವುದೆ ಎಂಬ ಬಸವಣ್ಣರ ವಚನ ನೆನಪಾಗುತ್ತೆ. ಸ್ಟಾರ್ ಫ್ಯಾನ್ಸ್ ವಾರ್ ಎಲ್ಲ ಬಿಟ್ಟು ಒಂದಾದ್ರೆ.. ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯೋದ್ರಲ್ಲಿ ಯಾವ ಅನುಮಾನವೂ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ