BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್​ ಖಡಕ್ ಕ್ಲಾಸ್‌!

author-image
Veena Gangani
Updated On
BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್​ ಖಡಕ್ ಕ್ಲಾಸ್‌!
Advertisment
  • ಬಿಗ್​ಬಾಸ್​ ಮನೆಯಲ್ಲಿ ಉಸ್ತುವಾರಿಗಳ ಮಧ್ಯೆ ಬಿಗ್ ಫೈಟ್
  • ಪದೇ ಪದೇ ಬಿಗ್​ಬಾಸ್​ ಮನೆಯಲ್ಲಿ ಏನಾಗ್ತಿದೆ ಗೊತ್ತಾ?
  • ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಳ್ಳೋದಕ್ಕೆ ಕಿಚ್ಚ ಸುದೀಪ್​ ರೆಡಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಗ್​ಬಾಸ್​ ಸೀಸನ್​ 11, 14ನೇ ವಾರಕ್ಕೆ ಕಾರಲಿಡಲು ಸಜ್ಜಾಗಿ ನಿಂತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಇಡೀ ವಾರ ಬಿಗ್​​ಬಾಸ್​ ಮನೆಯಲ್ಲಿ ಏನೆಲ್ಲಾ ಆಯ್ತು, ಯಾರದ್ದು ಸರಿ, ಯಾರದ್ದು ತಪ್ಪು ಅಂತ ಕ್ಲಾಸ್​ ತೆಗೆದುಕೊಳ್ಳೋದಕ್ಕೆ ಕಿಚ್ಚ ಸುದೀಪ್​ ಅವರು ರೆಡಿಯಾಗಿದ್ದಾರೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಯಲ್ಲಿ ಭವ್ಯಾ ಗೌಡ ನಿಜಕ್ಕೂ ಹೇರ್ಗಿತಾರೆ? ಗೋಲ್ಡ್​ ಸುರೇಶ್​ ಹೇಳಿದ್ದೇನು?

ಇನ್ನೂ ಈ ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗಾಗಿ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಡುತ್ತಲೇ ಓರ್ವ ಸ್ಪರ್ಧಿಯ ಉಸ್ತುವಾರಿ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ. ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಖಡಕ್​ ಡೈಲಾಂಗ್​ ಹೊಡೆದಿದ್ದಾರೆ.

publive-image

ಇನ್ನೂ, ಮೊನ್ನೆ ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿತ್ತು. ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದರು. ಇದರಿಂದ ಟಾಸ್ಕ್​ ಪೂರ್ಣಗೊಳಿಸೋದೇ ಇಡೀ ಮನೆ ಮಂದಿ ಕೈಚಲ್ಲಿ ಕುಳಿತುಕೊಂಡಿದ್ದರು. ಇದನ್ನು ನೋಡಿದ ಬಿಗ್​ಬಾಸ್​ ಟಾಸ್ಕ್ ಅನ್ನು ಅರ್ಧಕ್ಕೆ​ ರದ್ದು ಮಾಡಿದ್ದರು.

ಇದರಿಂದ ಕೆಲವು ಸ್ಪರ್ಧಿಗಳು ಚೈತ್ರಾ ಕುಂದಾಪುರ ಮೇಲೆ ಬೇಸರ ಹೊರ ಹಾಕಿದ್ದರು. ಚೈತ್ರಾ ಕುಂದಾಪುರ ಪದೇ ಪದೇ ಆಟದ ಮಧ್ಯೆ ಫೌಲ್ ಕೊಟ್ಟಿದ್ದಕ್ಕೆ, ಹಾಗೂ ಇಬ್ಬರು ಉಸ್ತುವಾರಿಗಳು ಸರಿಯಾದ ನಿರ್ಧಾರಕ್ಕೆ ಬರದಿದ್ದ ಕಾರಣಕ್ಕೆ ಟಾಸ್ಕ್​ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಇದೇ ವಿಚಾರ ಬಗ್ಗೆ ಇಂದು ಕಿಚ್ಚ ಸುದೀಪ್​ ಮಾತಾಡಲಿದ್ದಾರೆ. ಚೈತ್ರಾ ಕುಂದಾಪುರಗೆ ಮತ್ತೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment