/newsfirstlive-kannada/media/post_attachments/wp-content/uploads/2024/10/bigg-boss41.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ನಿನ್ನೆ ಬಿಗ್​ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿಗಳು ಆಚೆ ಬಂದಿದ್ದಾರೆ. ಲಾಯರ್​ ಜಗದೀಶ್​ ಹಾಗೂ ರಂಜಿತ್​ ಬಿಗ್​ಬಾಸ್​ ಮನೆಯಿಂದ ನೇರವಾಗಿ ಮುಖ್ಯ ದ್ವಾರದಿಂದ ಹೊರ ಬಂದಿದ್ದಾರೆ.
ಇದನ್ನೂ ಓದಿ:BBK11: ಜಗದೀಶ್ ಎಲಿಮಿನೇಟ್.. ಬಿಗ್ ಬಾಸ್ ಮೇಲೆ ಕಂಪ್ಲೇಂಟ್; ಕಿಚ್ಚ ಸುದೀಪ್ ಖಡಕ್ ಮಾತು; ಏನಂದ್ರು?
/newsfirstlive-kannada/media/post_attachments/wp-content/uploads/2024/10/bigg-boss40.jpg)
ಆದರೆ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಬಿಗ್​ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆ ಬಿಗ್​ಬಾಸ್​ ಮನೆಯಿಂದ ತಪ್ಪು ಮಾಡಿದವರು ಹೊರಗಡೆ ಹೋದ್ರು. ಆದರೆ ನಿಮ್ಮಲ್ಲಿ ಎಷ್ಟು ಜನ ಸರಿ ಇದ್ದೀರಾ? ಒಬ್ಬರು ಚಪ್ಪಲಿ ಎತ್ತಿ ಬಿಸಾಡುತ್ತಾರೆ ಎಂದರೆ ಅದು ಓಕೆನಾ? ಪ್ರಾಮಾಣಿಕತೆ ಅನ್ನೋದೇ ಸೂಟ್​ ಆಗೋದಿಲ್ಲ ಈ ಮನೆಗೆ ಅಂತ ಕಿಡಿಕಾರಿದ್ದಾರೆ.
View this post on Instagram
ಬಳಿಕ ಮಾನಸ ಅವರ ಬಗ್ಗೆ ಮಾತಾಡಿದ ಕಿಚ್ಚ, ಮಾನಸಾ ಮೇಡಂ, ನೀವು ಮಾತಾಡಿದ ಕೆಲವು ತಪ್ಪುಗಳನ್ನು ಇಟ್ಟುಕೊಂಡು ನಿಮ್ಮನ್ನು ಏಕೆ ಮನೆಯಲ್ಲಿ ಇರಲು ಬಿಡಬೇಕು ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮಾನಸ ಗಳಗಳನೇ ಕಣ್ಣೀರು ಹಾಕಿದ್ದಾರೆ. ಸದ್ಯ ರಿಲೀಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಮನೆ ಮಂದಿಗೆ ಸಖತ್​​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಕಿಚ್ಚ ಸುದೀಪನ ಸಿಟ್ಟಿಗೆ ಮನೆಮಂದಿ ಫುಲ್​ ಸೈಲೆಂಟ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/bigg-boss39.jpg)
ಮೊನ್ನೆ ಬಿಗ್​ಬಾಸ್​ ಮನೆಯಲ್ಲಿ ನಡೆದ ಗಲಾಟೆಯ ಬಗ್ಗೆ ಕಿಚ್ಚ ಸುದೀಪ್​ ಸ್ಪರ್ಧಿಗಳ ಜೊತೆ ಚರ್ಚೆ ಮಾಡಿದ್ದಾರೆ. ಅಂದು ನಡೆದ ಗಲಾಟೆ ವೇಳೆ ಮಾನಸ ಲಾಯರ್​ ಜಗದೀಶ್​ಗೆ ಬಾಯಿಗೆ ಬಂದ ಹಾಗೇ ಮಾತಾಡಿದ್ದರು. ಏಕವಚನದಲ್ಲಿ ಮಾತಾಡಿದ್ದಕ್ಕಾಗಿ ಕಿಚ್ಚ ಸುದೀಪ್​, ನೀವು ಹೇಳಿ ಮಾನಸ ಮೇಡಂ ಬಿಗ್​ಬಾಸ್​ ಮನೆಯಲ್ಲಿ ಯಾಕೆ ಇರಬೇಕು ಅಂತ ಪ್ರಶ್ನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us