/newsfirstlive-kannada/media/post_attachments/wp-content/uploads/2025/01/rajath9.jpg)
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್​ ಫಿನಾಲೆ ನಾಳೆ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗ ಆರು ಸ್ಪರ್ಧಿಗಳಗೆ ಆಡಲು ಟಾಸ್ಕ್‌ಗಳೂ ಇಲ್ಲ. ಜಗಳ ಆಡಲು ವಿಷಯಗಳೂ ಕಾಲಿಯಾಗಿವೆ. ಈಗ ಏನಿದ್ದರು ಬಿಗ್​ಬಾಸ್​ ಟ್ರೋಫಿ ಬಗ್ಗೆಯೇ ಸ್ಪರ್ಧಿಗಳು ಚಿಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: BIGG BOSS; ಕೈ ಮುಗಿದು ಕ್ಷಮೆ ಕೇಳಿರುವ ಭವ್ಯ ಗೌಡ.. ಕಾರಣ ಏನಿರಬಹುದು..?
/newsfirstlive-kannada/media/post_attachments/wp-content/uploads/2025/01/BIGG-BOSS53.jpg)
ಆದ್ರೆ ಇದರ ಮಧ್ಯೆ ಬಿಗ್​ಬಾಸ್​ ಮನೆಯ ಪೈಲ್ವಾನ್​ಗೆ ಕಿಚ್ಚ ಸುದೀಪ್​ ಅವರು ಭರ್ಜರಿ ಗಿಫ್ಟ್​ವೊಂದನ್ನು ಕಳುಹಿಸಿ ಕೊಟ್ಟಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್​ ಅವರಿಂದ ರಜತ್​ ಕಿಶನ್​ ಎರಡು ಗಿಫ್ಟ್​ಗಳನ್ನು ಪಡೆದುಕೊಂಡಿದ್ದಾರೆ. ಕನ್ನಡದ ಬಿಗ್​ಬಾಸ್​ಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ರಜತ್ ಕಿಶನ್​. ಆದ್ರೆ ಅಚ್ಚರಿ ಎಂಬಂತೆ ರಜತ್​ ಕಿಶನ್​ ನಾಮಿನೇಷನ್​ನಿಂದ ಸೇಫ್​ ಆಗಿ ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನೂ, ಟಾಪ್​ 6​ ಫೈನಲಿಸ್ಟ್​ ಆಗಿರೋ ಸ್ಪರ್ಧಿಗಳ ಆಸೆಯನ್ನು ಬಿಗ್​ಬಾಸ್ ಒಂದೊಂದಾಗಿ ಈಡೇರಿಸುತ್ತಿದ್ದಾರೆ. ಇದೀಗ ರಜತ್​ ಅವರು ಬಿಗ್​ಬಾಸ್​ ಬಳಿ ಕೇಳಿದ್ದ ಒಂದು ಆಸೆಯನ್ನು ಈಗ ಕಂಪ್ಲೀಟ್ ಮಾಡಿದ್ದಾರೆ. ಬಿಗ್​ಬಾಸ್​ ಬಳಿಕ ರಜತ್​ ಅವರು ಆಸೆಗಳನ್ನು ಹೇಳಿಕೊಂಡಿದ್ದರು. ಅದರಲ್ಲಿ ಒಂದನ್ನು ಈಗ ಬಿಗ್​ಬಾಸ್​ ಪೂರೈಸಿದ್ದಾರೆ.
ರಜತ್​ ಬಿಗ್​ಬಾಸ್​ ಬಳಿ ಕೇಳಿದ್ದೇನು?
ನನಗೆ ಕಿಚ್ಚ ಸದೀಪ್​ ಅವರು ಧರಿಸಿದ್ದ ಜಾಕೆಟ್ ಬೇಕು ಅಂತ ಹೇಳಿದ್ದರು. ಇದೀಗ ಇದೇ ಆಸೆಯನ್ನು ಬಿಗ್​ಬಾಸ್​ ಪೂರೈಸಿದ್ದಾರೆ. ಹೌದು, ಬಿಗ್​ಬಾಸ್​ ಮನೆಗೆ ಮಾಜಿ ಸ್ಪರ್ಧಿ ರಾಜೀವ್ ಅವರು ಸೈಲೆಂಟ್ ಆಗಿ ಎಂಟ್ರಿ ಕೊಟ್ಟು ಸರ್ಪ್ರೈಸ್​ ಕೊಟ್ಟಿದ್ದಾರೆ. ಆಗ ನಾನು ರಜತ್​ ಅವರ ಆಸೆಯನ್ನು ಹೊತ್ತು ತಂದಿದ್ದೇನೆ ಎಂದಿದ್ದಾರೆ. ಆ ಕೂಡಲೇ ನಟ ರಾಜೀವ್​, ರಜತ್​ ನೀವು ಸುದೀಪ್​ ಅಣ್ಣ ಧರಿಸಿದ್ದ ಜಾಕೆಟ್​ ಬೇಕು ಅಂತ ಹೇಳಿದ್ದೀರಿ. ಆದ್ರೆ ಅಣ್ಣ ಯಾವಾಗಲೂ ಒಂದು ಪಟ್ಟ ಮೇಲೆ ಯೋಚನೆ ಮಾಡುತ್ತಾರೆ. ಹೀಗಾಗಿ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್ ದಿನ ಧರಿಸಿದ್ದ ಜಾಕೆಟ್ ಅನ್ನು ನಿನಗಾಗಿ ಕಳುಹಿಸಿ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/01/rajath11.jpg)
ಕಿಚ್ಚ ಸುದೀಪ್ ಅವರ ಜಾಕೆಟ್ ನೋಡುತ್ತಿದ್ದಂತೆ ಸ್ಪರ್ಧಿಗಳು ಫುಲ್ ಶಾಕ್​ ಆಗಿದ್ದಾರೆ. ಆಗ ರಜತ್ ಕಿಚ್ಚ ಸುದೀಪ್​ ಅವರು ಕಳುಹಿಸಿ ಜಾಕೆಟ್ ಅನ್ನು ಧರಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ. ಸುದೀಪ್​ ಸರ್​ ಥ್ಯಾಂಕ್ಯೂ ಸೋ ಮಚ್. ನೀವು ಎಲ್ಲರಿಗೂ ಇನ್ಸ್ಪಿರೇಷನ್ ಆಗಿದ್ದೀರಿ. ನಿಮ್ಮ ಬಗ್ಗೆ ಎಷ್ಟು ಹೇಳಿದ್ದರು ಸಾಕಾಗೋದಿಲ್ಲ. ಬೇಗ ಬನ್ನಿ ಸರ್​ ಶನಿವಾರ ಇದೇ ಜಾಕೆಟ್​ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us