Advertisment

ಅಂಬರೀಶ್ ಮೊಮ್ಮಗನಿಗೆ ಕಿಚ್ಚ ಸುದೀಪ್ ಕೊಟ್ಟ ಗಿಫ್ಟ್ ಏನು? ನಾಮಕರಣದ ಫೋಟೋಗಳು ಇಲ್ಲಿವೆ!

author-image
admin
Updated On
ಅಂಬರೀಶ್ ಮೊಮ್ಮಗನಿಗೆ ಕಿಚ್ಚ ಸುದೀಪ್ ಕೊಟ್ಟ ಗಿಫ್ಟ್ ಏನು? ನಾಮಕರಣದ ಫೋಟೋಗಳು ಇಲ್ಲಿವೆ!
Advertisment
  • ಅಭಿಷೇಕ್‌ ಅಂಬರೀಶ್‌ ಮಗನಿಗೆ ತಂದೆಯ ಮೂಲ ಹೆಸರು
  • ದಿವಂಗತ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್!
  • ಅಂಬಿ ಮೊಮ್ಮಗನ ನಾಮಕರಣಕ್ಕೆ ಬಂದು ಹಾರೈಸಿದ ಕಿಚ್ಚ ಸುದೀಪ್

ರಾಣಾ ಅಮರ್ ಅಂಬರೀಶ್.. ಜ್ಯೂನಿಯರ್ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಮಗನಿಗೆ ತಂದೆಯ ಮೂಲ ಹೆಸರನ್ನೇ ನಾಮಕರಣ ಮಾಡಲಾಗಿದೆ. ಮಂಡ್ಯದ ಗಂಡು ಖ್ಯಾತಿಯ ದಿವಂಗತ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ಅಂಬರೀಶ್ ಅವರ ಮೊಮ್ಮಗನಿಗೆ ರೆಬೆಲ್ ಸ್ಟಾರ್ ಕುಟುಂಬಸ್ಥರು ‘ಅ’ ಅನ್ನೋ ಅಕ್ಷರದಿಂದಲೇ ಶುರುವಾಗೋ ಹೆಸರನ್ನು ಇಡೋ ಆಸೆ ಹೊಂದಿದ್ದರು.

Advertisment

publive-image

ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಟ್ ಹೋಟೆಲ್‌ನಲ್ಲಿ ಇಂದು ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಮೊಮ್ಮಗನಿಗೆ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ಮಗನಿಗೆ ಅಪ್ಪನ‌ ಹೆಸರಿಟ್ಟ ಅಭಿಷೇಕ್ ಅಂಬರೀಶ್.. ರೆಬೆಲ್‌ ಸ್ಟಾರ್‌ ಮೊಮ್ಮಗನ ಹೆಸರೇನು ಗೊತ್ತಾ? 

publive-image

ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರಕ್ಕೆ ರೆಬೆಲ್ ಸ್ಟಾರ್ ಕುಟುಂಬದ ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

Advertisment

publive-image

ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಬಂದಿದ್ದ ಕಿಚ್ಚ ಸುದೀಪ್ ಅವರು ಸ್ಪೆಷಲ್ ಗಿಫ್ಟ್ ಒಂದನ್ನ ಅಭಿಷೇಕ್ ಅಂಬರೀಶ್‌ಗೆ ನೀಡಿದ್ದಾರೆ.

publive-image

ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನಿಗೆ ತೊಟ್ಟಿಲು ರೀತಿಯ ಬುಟ್ಟಿಯಲ್ಲಿ ಪುಟ್ಟ, ಪುಟ್ಟ ಟೆಡ್ಡಿ ಬೇರ್, ಮೊಲದ ಮರಿಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

publive-image

2024ರ ನವೆಂಬರ್ 12ರಂದು ಅಭಿಷೇಕ್-ಅವಿವಾಗೆ ಗಂಡು ಮಗು ಜನಿಸಿತ್ತು. ಅ ಅನ್ನೋ ಹೆಸರಿನಲ್ಲೇ ಮಗುವಿಗೆ ಹೆಸರಿಡೋ ಪ್ಲಾನ್ ಕುಟುಂಬಸ್ಥರಲ್ಲಿ ಇತ್ತು. ಅಂಬರೀಶ್ ಅವರ ಹೆಸರಿಡೋ ಬಗ್ಗೆಯೂ ಚರ್ಚಿಸಿದ್ದ ಕುಟುಂಬಸ್ಥರು ಅಂತಿಮವಾಗಿ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment