ಮುಂದಿನ ಸೀಸನ್​ಗೂ ಕಿಚ್ಚನ ಸಾರಥ್ಯ? ಬಿಗ್​ಬಾಸ್​ ಫಿನಾಲೆಗೆ ಮುನ್ನ ಭರ್ಜರಿ ಗುಡ್​ನ್ಯೂಸ್​​ ಕೊಟ್ಟ ಸುದೀಪ್​​

author-image
Ganesh Nachikethu
Updated On
BBK11 ಐವರು ನಾಮಿನೇಟ್​.. ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್​ಪಾಸ್​ ಯಾರಿಗೆ..?
Advertisment
  • ಇಂದು ರಂಗೇರಿದ ಬಿಗ್ ಬಾಸ್ ಸೀಸನ್ 11ರ ಫಿನಾಲೆ
  • ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಎಂದರೆ ಬಿಗ್​​ಬಾಸ್
  • ಫಿನಾಲೆಗೆ ಮುನ್ನವೇ ಗುಡ್​ನ್ಯೂಸ್ ಕೊಟ್ಟ ನಟ ಸುದೀಪ್​​

ಇಂದು ಬಿಗ್ ಬಾಸ್ ಸೀಸನ್ 11ರ ಫಿನಾಲೆ ರಂಗೇರಿದೆ. ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಇದಾಗಿದ್ದು, ಈ ಬಾರಿ ಕಪ್ ಗೆಲ್ಲೋರು ಯಾರು? ಎಂದು ನೋಡಲು ಪ್ರೇಕ್ಷಕರು ಕಾಯುತ್ತಲೇ ಇದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್​ ಸೀಸನ್ 11ರ ವಿನ್ನರ್ ಅನೌನ್ಸ್ ಆಗಲಿದೆ. ಇದರ ಮಧ್ಯೆ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಒಂದಿದೆ.

ಮುಂದಿನ ಬಿಗ್​ಬಾಸ್​ ಸೀಸನ್​ಗೂ ಸುದೀಪ್​ ಸಾರಥ್ಯ?

ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಏಕಾಏಕಿ ನಟ ಸುದೀಪ್​ ಬಿಗ್​ಬಾಸ್​ ಗುಡ್​ ಬೈ ಹೇಳೋ ಮೂಲಕ ಶಾಕ್​ ಕೊಟ್ಟಿದ್ದರು. 10 ಸೀಸನ್​ ಪೂರೈಸಿದ ಇವರು 11ನೇ ಸೀಸನ್ ಮುಗಿಯೋ ಮುನ್ನವೇ ಈ ನಿರ್ಧಾರಕ್ಕೆ ಬರಲು ಕಾರಣವೇನು? ಎಂಬ ಚರ್ಚೆ ಜೋರಾಗಿತ್ತು. ಕೊನೆಗೆ ಖುದ್ದು ಸುದೀಪ್​ ಅವರೇ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈಗ ಮುಂದಿನ ಸೀಸನ್​ಗೂ ಸುದೀಪ್​ ಸಾರಥ್ಯ ಇರಲಿದ್ಯಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

Let Me See ಎಂದ ನಟ ಸುದೀಪ್​​

ಬಿಗ್​ಬಾಸ್​ ಫಿನಾಲೆ ಮಧ್ಯೆಯೇ ಒಂದು ಸುದ್ದಿ ಓಡಾಡುತ್ತಿದೆ. ಮುಂದಿನ ಬಿಗ್‌ಬಾಸ್‌ನಲ್ಲೂ ತಾವೇ ಇರುವ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದಾರೆ. ಇತ್ತೀಚೆಗೆ ಖಾಸಗಿ ಯೂಟ್ಯೂಬ್‌ ಚಾನೆಲ್‌ ಮಸ್ತ್‌ ಮಗಾ ಜತೆ ಮಾತಾಡಿರೋ ನಟ ಸುದೀಪ್​​, ನಾನು ಬರುವುದಿಲ್ಲ ಎಂದಿದ್ದೇನೆ. ಆದರೆ, ಅವರಿನ್ನೂ ಅದನ್ನು ಎಕ್ಸೆಪ್ಟ್‌ ಮಾಡಿಲ್ಲ. ನೋಡೋಣ ಏನಾಗುತ್ತದೆ ಎಂದು. Let Me See ಎಂದಿದ್ದಾರೆ.

ಇದಕ್ಕೂ ಮುನ್ನ ಮಾತಾಡಿದ್ದ ಸುದೀಪ್​​, ಎಲ್ಲರನ್ನೂ ರಿಪೇರಿ ಮಾಡುತ್ತಾ ಕೂರಲು ಆಗುವುದಿಲ್ಲ. ಎಷ್ಟು ಎಂದು ಮಾಡಲು ಸಾಧ್ಯ. ನನಗೂ ಸಾಕಾಗಿದೆ. ಬಿಗ್​ಬಾಸ್​ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್​ ಹಾಕಬೇಕು. ಈ ಎಫರ್ಟ್​ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:BBK11GrandFinale: ಅಮ್ಮನ ಕನಸು ನನಸಾಗದ ನೋವು.. ಬಿಗ್​ಬಾಸ್ ಮನೆಯಿಂದ ಮೋಕ್ಷಿತಾ ಔಟ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment