BBK11: ಫಸ್ಟ್ ಟೈಮ್ ಬರಿಗಾಲಲ್ಲಿ ವೀಕೆಂಡ್ ಶೋ ನಡೆಸಿಕೊಟ್ಟ ಕಿಚ್ಚ ಸುದೀಪ್‌; ಏನಿದರ ವಿಶೇಷ?

author-image
admin
Updated On
ಬರಿಗಾಲು, ಚಾಪೆ ಮೇಲೆ ಮಲಗೋದು.. ಕಿಚ್ಚ ಸುದೀಪ್‌ ಕಟ್ಟು ನಿಟ್ಟಿನ ವ್ರತ ಆಚರಣೆ ಹೇಗಿದೆ ಗೊತ್ತಾ?
Advertisment
  • ಸುದೀಪ್ ಚಪ್ಪಲಿ ಧರಿಸದಿರುವುದಕ್ಕೆ ಒಂದು ವಿಶೇಷ ಕಾರಣ ಇದೆ
  • ಭಾನುವಾರ ಕೇಸರಿ ಬಣ್ಣದ ಇಂಡೋ ವೆಸ್ಟ್ರರ್ನ್ ಶೈಲಿಯ ಕುರ್ತ
  • 9 ದಿನವೂ ಒಂದು ಹೊತ್ತಿನ ಊಟ ಮಾತ್ರ ಸೇವಿಸುವ ಕಿಚ್ಚ ಸುದೀಪ್

ಬಿಗ್ ಬಾಸ್ ಸೀಸನ್ 11 ಭರ್ಜರಿಯಾಗಿ ಆರಂಭವಾಗಿ ಮೊದಲ ವಾರವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಈ ಬಾರಿ ಹೊಸ ಅಧ್ಯಾಯ ಎಂದಿದ್ದ ಬಿಗ್ ಬಾಸ್ ಟೀಮ್ ವೀಕ್ಷಕರಿಗೆ ಸಾಕಷ್ಟು ಹೊಸತನವನ್ನೇ ನೀಡುತ್ತಿದೆ. ವೀಕೆಂಡ್‌ನಲ್ಲಂತೂ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಪ್ರಿಯರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಕಾಸ್ಟ್ಯೂಮ್ ಈ ಬಾರಿ ಸಖತ್ ಸ್ಪೆಷಲ್‌ ಹಾಗೂ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: BIGG BOSS ಡೋರ್ ಉಡೀಸ್ ಮಾಡ್ತೀನಿ ಎಂದಿದ್ದ ಜಗದೀಶ್​​.. ಕಿಚ್ಚನ ಮಾತಿಗೆ ಫುಲ್ ಸೈಲೆಂಟ್! 

ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೀಕೆಂಡ್ ಶೋವನ್ನು ಬರಿಗಾಲಲ್ಲಿ ನಡೆಸಿಕೊಟ್ಟಿದ್ದಾರೆ. ವಾರದ ಕತೆ ಹಾಗೂ ಸೂಪರ್ ಸಂಡೇ ಎರಡೂ ಶೋವನ್ನು ಕಿಚ್ಚ ಸುದೀಪ್ ಅವರು ಬರಿಗಾಲಲ್ಲಿ ನಡೆಸಿಕೊಟ್ಟಿದ್ದಾರೆ.

publive-image

ಕಿಚ್ಚ ಸುದೀಪ್ ಅವರು ಚಪ್ಪಲಿ ಧರಿಸದಿರುವುದಕ್ಕೆ ಒಂದು ವಿಶೇಷ ಕಾರಣವೂ ಇದೆ. ಈಗ ನವರಾತ್ರಿ ಬಂದಿರೋದ್ರಿಂದ ಸುದೀಪ್ ಅವರು ಟ್ರೆಡಿಷನಲ್ ಲುಕ್‌ನಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಶನಿವಾರ ಬೂದು ಬಣ್ಣ ಮತ್ತು ಭಾನುವಾರ ಕೇಸರಿ ಬಣ್ಣದ ಇಂಡೋ ವೆಸ್ಟ್ರರ್ನ್ ಶೈಲಿಯ ಕುರ್ತ ಹಾಕಿರುವ ಕಿಚ್ಚ ಸುದೀಪ್ ಸೂಪರ್ ಸಂಡೇಗೆ ಸ್ಪೆಷಲ್ ಟಚ್ ಕೊಟ್ಟಿದ್ದಾರೆ.

ಏನಿದು ನವರಾತ್ರಿ ವ್ರತ?
ಕಿಚ್ಚ ಸುದೀಪ್ ಅವರು ಕಳೆದ ನಾಲ್ಕು ವರ್ಷಗಳಿಂದ ನವರಾತ್ರಿ ವ್ರತವನ್ನು ಆಚರಿಸುತ್ತಿದ್ದಾರೆ. ಈ ಸಮಯದಲ್ಲಿ ಸುದೀಪ್ ಅವರು 9 ದಿವಸ ಒಂದು ಹೊತ್ತಿನ ಊಟ, ಅಲ್ಪ ಮಾತು, ಚಾಪೆಯ ಮೇಲೆ ಮಲಗುತ್ತಾರೆ. ಬರಿಗಾಲಲ್ಲಿ ನಡೆಯುವ ಸುದೀಪ್ ಅವರು ಆಯಾ ದಿನದ ವಿಶೇಷತೆಯ ಕಲರ್ ಡ್ರೆಸ್ ಧರಿಸುತ್ತಾರೆ.

ಇದನ್ನೂ ಓದಿ: ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡ ಧ್ವನಿ.. ಅಮ್ಮ-ಮಗನ ಬಾಂಧವ್ಯಕ್ಕೆ ವೀಕ್ಷಕರಲ್ಲಿ ಕಣ್ಣೀರು..! ವಿಡಿಯೋ 

ನವರಾತ್ರಿಯಲ್ಲಿ ಕಿಚ್ಚ ಸುದೀಪ್ ಅವರು 9 ದಿನವೂ ಒಂದು ಹೊತ್ತಿನ ಊಟ ಮಾತ್ರ ಸೇವಿಸುತ್ತಾರೆ. ಶೂಟಿಂಗ್ ಸಮಯದಲ್ಲೂ ಕಠಿಣ ವ್ರತ ಆಚರಿಸುವ ಸುದೀಪ್ ಅವರು ಈ ವರ್ಷವೂ ನವರಾತ್ರಿ ವ್ರತವನ್ನು ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment