BBK11: ‘ಬಾಸ್​ ಚೈತ್ರಾದ್ದು ಬರೀ ಡೌವ್​ಗಳು ಸರ್​’; ರಜತ್​ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್​

author-image
Veena Gangani
Updated On
BBK11: ‘ಬಾಸ್​ ಚೈತ್ರಾದ್ದು ಬರೀ ಡೌವ್​ಗಳು ಸರ್​’; ರಜತ್​ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್​
Advertisment
  • ಎಲ್ಲರ ಮುಂದೆಯೇ ಚೈತ್ರಾ ಡೌವ್​ ಮಾಡ್ತಾರೆ ಎಂದ ರಜತ್
  • 14ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ ಬಿಗ್​ಬಾಸ್​ ಸೀಸನ್ 11
  • ಏಕಾಏಕಿ ಮನೆಯಲ್ಲಿ ಚೈತ್ರಾ ಕುಂದಾಪುರ ಬಿದ್ದು ಹೊರಲಾಡಿದ್ದೇಕೆ?

ಕನ್ನಡದ ಬಿಗ್​​ಬಾಸ್​ ಸೀಸನ್​ 11, 14ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ವೇದಿಕೆಗೆ ಕಿಚ್ಚ ಸುದೀಪನ ಖಡಕ್​ ಎಂಟ್ರಿಯಾಗಿದೆ. ಭಾನುವಾರದ ಎಪಿಸೋಡ್​ ಕಾರಣ ಕಿಚ್ಚ ಸುದೀಪ್​ ಮನೆ ಮಂದಿಯ ಜೊತೆಗೆ ನಗೆ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ:ಇದು ಪರೋಪಕಾರ ಅಂದ್ರೆ.. ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚೆಂದವೋ!

publive-image

ಕಲರ್ಸ್​ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್, ನಿನ್ನೆ ಬಿಗ್​ಬಾಸ್​ ಮನೆಗೆ ಒಂದು ದೆವ್ವ ಬರುತ್ತೆ ಅಲ್ವಾ ಅವಾಗ ಹೇಗಿತ್ತು ಚೈತ್ರಾ ಅವರ ರಿಯಾಕ್ಷನ್​ ಅಂತ ಹೇಳುತ್ತಾರೆ. ಅದಕ್ಕೆ ರಜತ್ ಚೈತ್ರಾ ಅವರ ರೀತಿ ಪ್ರೋಮೋ ಕ್ಲಿಪ್​ ಯಾರಿಗೂ ಕೊಡೋದಕ್ಕೆ ಸಾಧ್ಯನೇ ಇಲ್ಲ ಸರ್, ಬಿದ್ದು ಉರುಳಾಡಿ, ಅಷ್ಟೇ ಯಾಕೆ ತ್ರಿವಿಕ್ರಮ್​ ಕಾಲನ್ನು ಹಿಡಿದು ಒದ್ದಾಡಿದ್ದೇ ಒದ್ದಾಡಿದ್ದು ಸರ್, ಬರೀ ಡೌವ್​ಗಳು ಸಾರ್​ ಇವರದ್ದು ಅಂತ ಕಿಚ್ಚ ಸುದೀಪ್​ ಮುಂದೆ ಹೇಳಿದ್ದಾರೆ.

ಇನ್ನೂ ರಜತ್ ಮಾತನ್ನು ಕೇಳಿಸಿಕೊಂಡ ಕಿಚ್ಚ ವೇದಿಕೆ ಮೇಲೆ ಬಿದ್ದು ಬಿದ್ದು ನಕ್ಕಿದ್ದಾರೆ. ಅಲ್ಲದೇ ಮನೆಮಂದಿ ಕೂಡ ರಜತ್ ಮಾತಿಗೆ ನಕ್ಕಿದ್ದಾರೆ. ಆಗ ಚೈತ್ರಾ ನಾ ನಿನ್ನ ಬಿಡಲಾರೆ ಸಿನಿಮಾ ನೋಡಿದ್ದಾಗನಿಂದಲೂ ನನಗೆ ಭಯ ಸರ್ ಅಂತ ಹೇಳಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರ ಎಲಿಮಿನೇಷನ್​ ಇಲ್ಲದ ಕಾರಣ ಯಾವ ಸ್ಪರ್ಧಿ ಕೂಡ ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗೋದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment