/newsfirstlive-kannada/media/post_attachments/wp-content/uploads/2024/10/Kiccha-Sudeep-BRB-1.jpg)
ಬಿಗ್ ಬಾಸ್ ವೇದಿಕೆಗೆ ಬರಿಗಾಲಲ್ಲಿ ಬಂದು ಎಲ್ಲರಿಗೂ ಶಾಕ್ ಕೊಟ್ಟಿದ್ದ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ನವರಾತ್ರಿಯಲ್ಲಿ ಕಠಿಣ ವ್ರತ ಆಚರಣೆಯ ಸಮಯದಲ್ಲೇ ಕಿಚ್ಚ ಸುದೀಪ್ ಹೊಸ ಅವತಾರ ರಿವೀಲ್ ಆಗಿದೆ.
ಇದನ್ನೂ ಓದಿ: ಬರಿಗಾಲು, ಚಾಪೆ ಮೇಲೆ ಮಲಗೋದು.. ಕಿಚ್ಚ ಸುದೀಪ್ ಕಟ್ಟು ನಿಟ್ಟಿನ ವ್ರತ ಆಚರಣೆ ಹೇಗಿದೆ ಗೊತ್ತಾ?
ಕಿಚ್ಚ ಸುದೀಪ್ ಅವರು ಕೇವಲ ರಿಯಾಲಿಟಿ ಶೋನಲ್ಲಿ ಅಷ್ಟೇ ಅಲ್ಲ. ತಮ್ಮ ಸಿನಿಮಾಗಳಿಗೂ ಭರ್ಜರಿ ತಯಾರಿ ನಡೆಸಿದ್ದಾರೆ. ಇದಕ್ಕೆ ಸಾಕ್ಷಿ ಈಗ ರಿಲೀಸ್ ಆಗಿರುವ ಹೊಸ ಲುಕ್. ಕಿಚ್ಚ ಸುದೀಪ್ ಅವರು ಸಖತ್ ವರ್ಕೌಟ್ ಮಾಡಿದ್ದು ಕಟ್ಟು ಮಸ್ತಾದ ತಮ್ಮ ದೇಹವನ್ನು ಪ್ರದರ್ಶಿಸಿದ್ದಾರೆ.
ಕಿಚ್ಚ ಸುದೀಪ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಸಿನಿಮಾ ಬಿಲ್ಲ ರಂಗ ಬಾಷಗೆ ತಯಾರಿಗಿರುವ ಫೋಟೋ ರಿಲೀಸ್ ಮಾಡಿದ್ದಾರೆ. ಫುಲ್ ವರ್ಕೌಟ್ ಮಾಡಿರುವ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ.
ಬಿಲ್ಲ ರಂಗ ಬಾಷ ಸಿನಿಮಾಕ್ಕೆ ಭರ್ಜರಿ ತಯಾರಿ ನಡೆಸಿರುವ ಕಿಚ್ಚ ಸುದೀಪ್ ಹೊಸ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸುದೀಪ್ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
ಇದನ್ನೂ ಓದಿ: BBK11: ನಿಮ್ಮ ಅಪ್ಪನಾಣೆಗೆ ಆಗಲ್ಲ.. ಲಾಯರ್ ಜಗದೀಶ್ ಬೆವರಿಳಿಸಿದ ಕಿಚ್ಚ ಸುದೀಪ್ ಮಾತು; ಫುಲ್ ವೈರಲ್!
ಕಿಚ್ಚ ಸುದೀಪ್ ಅವರ ಈ ಹೊಸ ಲುಕ್ ಬಿಲ್ಲ ರಂಗ ಬಾಷದ ಮೊದಲ ಪೋಸ್ಟರ್ ರೀತಿ ಹವಾ ಸೃಷ್ಟಿಸಿದೆ. 51 ವರ್ಷದ ಸುದೀಪ್ ಅವರ ಈ ಹೊಸ ಲುಕ್‌ಗೆ ಪ್ಯಾನ್ ಇಂಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ