KicchaSudeep: ಬಿಗ್ ಬಾಸ್ ಫ್ಯಾನ್ಸ್‌ಗೆ ಬಿಗ್ ಶಾಕ್‌.. ಅಪ್ಪನ ನಿರ್ಧಾರಕ್ಕೆ ಸಾನ್ವಿ ಸುದೀಪ್ ಏನಂದ್ರು?

author-image
admin
Updated On
KicchaSudeep: ಬಿಗ್ ಬಾಸ್ ಫ್ಯಾನ್ಸ್‌ಗೆ ಬಿಗ್ ಶಾಕ್‌.. ಅಪ್ಪನ ನಿರ್ಧಾರಕ್ಕೆ ಸಾನ್ವಿ ಸುದೀಪ್ ಏನಂದ್ರು?
Advertisment
  • ಇದು ನನ್ನ ಕೊನೆಯ ಸೀಸನ್ ಎಂದು ಅನೌನ್ಸ್ ಮಾಡಿದ ಕಿಚ್ಚ ಸುದೀಪ್
  • ಕಿಚ್ಚ ಸುದೀಪ್ ಶಾಕಿಂಗ್ ನಿರ್ಧಾರಕ್ಕೆ ಮಗಳು ಸಾನ್ವಿ ಮೊದಲ ರಿಯಾಕ್ಷನ್
  • ಅಪ್ಪ.. ಬಿಗ್ ಬಾಸ್‌ ಶೋನಲ್ಲಿ ನಿಮ್ಮಂತೆ ಬೇರೆ ಯಾರೂ ಇಲ್ಲ!

ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಅಂದ್ರೆ ಸುದೀಪ್.. ಸುದೀಪ್ ಅಂದ್ರೆ ಬಿಗ್ ಬಾಸ್ ಅಂತ ಅವರ ಅಭಿಮಾನಿಗಳು ಕರೆಯುತ್ತಾರೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಒಂದು ಖದರ್ ಬಂದಿದ್ದೇ ಸುದೀಪ್ ಅವರಿಂದ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಅವರು ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ದಿಢೀರ್​ ಬಿಗ್​ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ ಸುದೀಪ್​​; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ! 

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳುವ ಮಾತನಾಡಿದ್ದಾರೆ. ಖುದ್ದು ಈ ಬಗ್ಗೆ ಅನೌನ್ಸ್ ಮಾಡಿರುವ ಕಿಚ್ಚ ಸುದೀಪ್, 11 ವರ್ಷ ಈ ಪಯಣ ಅದ್ಬುತ . ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನ ಚಾನಲ್ ಮತ್ತು ಇಷ್ಟು ವರ್ಷ ಬಿಗ್ ಬಾಸ್ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್ ಅವರು ನಿನ್ನೆ ರಾತ್ರಿ ತೆಗೆದುಕೊಂಡ ಈ ತೀರ್ಮಾನ ಅತಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಎಲ್ಲರೂ ಸುದೀಪ್ ಅವರ ನಿರ್ಧಾರಕ್ಕೆ ಅಚ್ಚರಿಗೊಂಡಿದ್ದಾರೆ. ಕೆಲವರು ಸುದೀಪ್ ಅವರು ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಅಂತ ಮನವಿಯನ್ನು ಮಾಡುತ್ತಿದ್ದಾರೆ. ಆದರೆ ಸುದೀಪ್ ಅವರು ತಾವು ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವುದು ಅನುಮಾನವಾಗಿದೆ. ಇದಕ್ಕೆ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಮಾಡಿರೋ ಈ ಪೋಸ್ಟ್ ಸಾಕ್ಷಿಯಾಗಿದೆ.

ಇದನ್ನೂ ಓದಿ: 11 ವರ್ಷ ಬಿಗ್​ಬಾಸ್ ಪಯಣ ಅದ್ಭುತ -ಕಿಚ್ಚನ ಇಂತಹ ನಿರ್ಧಾರಕ್ಕೆ ಕಾರಣವೇನು..? 

ಬಿಗ್ ಬಾಸ್‌ಗೆ ವಿದಾಯ ಹೇಳುವ ಕಿಚ್ಚ ಸುದೀಪ್ ಅವರ ನಿರ್ಧಾರಕ್ಕೆ ಸಾನ್ವಿ ಸುದೀಪ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಸುದೀಪ್ ಅವರ ಟ್ವೀಟ್‌ಗೆ ಪೋಸ್ಟ್ ಮಾಡಿರುವ ಸಾನ್ವಿ, ಅಪ್ಪ ಬಿಗ್‌ ಬಾಸ್‌ ಶೋದಲ್ಲಿ ನಿಮಗೆ ಬೇರೆ ಯಾರು ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನಿಮ್ಮ ಕೊಡುಗೆಗೆ ನಾನು ಗೌರವಿಸುತ್ತೇನೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿದ್ದಾರೆ.

publive-image

ಸಾನ್ವಿ ಸುದೀಪ್ ಹೇಳಿದ್ದೇನು?
ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂತದ್ದು. ಬೇರೆ ಯಾರು ನಿಮ್ಮ ರೀತಿ ಮಾಡಲು ಸಾಧ್ಯವಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನೀವು ಅಮೋಘವಾಗಿ ಕಾಣಿಸಿಕೊಳ್ಳುವುದನ್ನ ತಪ್ಪಿಸಿಕೊಳ್ಳುತ್ತೀರಿ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ.

ಬಿಗ್‌ ಬಾಸ್‌ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವು ನೀಡಿರುವ ಕೊಡುಗೆಗೆ ನಾನು ಹೆಮ್ಮೆ ಪಡುತ್ತೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment