Video: ಡ್ರೋನ್‌ ಪ್ರತಾಪ್‌ಗೆ ಕೊನೆಗೂ ಸಿಕ್ಕ ನ್ಯಾಯ; ತುಕಾಲಿ, ವರ್ತೂರು ಟೊಮ್ಯಾಟೋಗೆ ಪಂಚ್‌ ಕೊಟ್ಟ ಕಿಚ್ಚ ಸುದೀಪ್‌

author-image
admin
Updated On
Video: ಡ್ರೋನ್‌ ಪ್ರತಾಪ್‌ಗೆ ಕೊನೆಗೂ ಸಿಕ್ಕ ನ್ಯಾಯ; ತುಕಾಲಿ, ವರ್ತೂರು ಟೊಮ್ಯಾಟೋಗೆ ಪಂಚ್‌ ಕೊಟ್ಟ ಕಿಚ್ಚ ಸುದೀಪ್‌
Advertisment
  • ಓಪನ್ ಅಪ್ ಮಾಡಿಸೋದು ಅಂದ್ರೆ ಹೀಗೆ ಸಾರ್ ಎಂದು ಸುದೀಪ್
  • ಓಪನ್ ಅಪ್ ಮಾಡಿಸೋದು ಅಂದ್ರೆ ಹೀಗೆ ಸಾರ್.. ನಾಟಿ ಟೊಮ್ಯಾಟೋ.. ವೆರಿ ನಾಟಿ!
  • ಇಂದು ತೀವ್ರ ಕುತೂಹಲ ಕೆರಳಿಸಿದ ಸೂಪರ್ ಸಂಡೇ ವಿಥ್ ಸುದೀಪ್

ಬಿಗ್‌ಬಾಸ್ ಸೀಸನ್‌ 10ರಲ್ಲಿ ಡ್ರೋನ್ ಪ್ರತಾಪ್‌ ಹಾಗೂ ತುಕಾಲಿ ಸಂತೋಷ್ ಫೈಟ್ ಸಖತ್ ಸದ್ದು ಮಾಡಿದೆ. ಕಾಮಿಡಿ ಮಾಡಿ ನೆಪದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ತುಕಾಲಿ ಸಂತೋಷ್ ಆಡಿರೋ ಮಾತುಗಳು ಸಾಕಷ್ಟು ಚರ್ಚೆಗೆ ಗುರಿಯಾಗಿದೆ. 17 ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ಅವರ ಬಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ವ್ಯಕ್ತವಾಗಿದೆ. ಡ್ರೋನ್ ಪ್ರತಾಪ್ ಅವರ ಬಗ್ಗೆ ತುಕಾಲಿ ಸಂತೋಷ್ ಮಾಡಿರೋ ಕಿತಾಪತಿ ಈಗ ಕಿಚ್ಚ ಸುದೀಪ್‌ ಅವರ ಅಂಗಳದಲ್ಲಿದೆ.

publive-image

ಡ್ರೋನ್ ಪ್ರತಾಪ್‌ ಬೇಡವಾದ ಮಾತುಗಳನ್ನಾ ಆಡಿ ತುಕಾಲಿ ಸಂತೋಷ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಮಿಡಿ ಅನ್ನೋದು ಎಲ್ಲರು ಸೇರಿ ಮನಸಾರೆ ನಗುವಂತೆ ಇರ್ಬೇಕು ಹೊರತಾಗಿ ಒಬ್ಬರಿಗೆ ಹರ್ಟ್​ ಆಗೋ ರೀತಿ ಇರಬಾರದು. ಡ್ರೋನ್ ಪ್ರತಾಪ್ ಅವರಿಗೆ ನ್ಯಾಯ ಸಿಗಬೇಕು ಅನ್ನುವಷ್ಟರ ಮಟ್ಟಿಗೆ ವೀಕ್ಷಕರು ರೊಚ್ಚಿಗೆದ್ದಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಅವರಿಗೆ ಕಿಚ್ಚ ಸುದೀಪ್ ಅವರ ಬೆಂಬಲ ಸಿಕ್ಕಿದ್ದು, ತುಕಾಲಿ ಸಂತೋಷ್ ಅವರಿಗೆ ಮಾತಿನಲ್ಲೇ ಸಖತ್ ಪಂಚ್ ಕೊಟ್ಟಿದ್ದಾರೆ.

publive-image

ಸೀಸನ್ 10ರ ಮೊದಲ ವಾರದ ಬಳಿಕ ಬಿಗ್‌ಬಾಸ್‌ ಮನೆಯ ಕಥೆ ಕಿಚ್ಚನ ಜೊತೆ ಈಗಾಗಲೇ ಶುರುವಾಗಿದೆ. ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ತುಕಾಲಿ ಸಂತೋಷ್‌ಗೆ ಖಡಕ್ ಟಾಂಗ್ ಕೊಟ್ಟಿದ್ದರು. ಈ ವಾರದ ಪಂಚಾಯ್ತಿಯಲ್ಲಿ ಭಾನುವಾರ ಮತ್ತಷ್ಟು ರೋಚಕವಾಗಿರೋದು ಪಕ್ಕಾ ಆಗಿದೆ. ಕಲರ್ಸ್‌ ಕನ್ನಡ ವಾಹಿನಿ ಭಾನುವಾರದ ಕಿಚ್ಚನ ಪ್ರೋಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ಡ್ರೋನ್ ಪ್ರತಾಪ್‌ ಸಖತ್ ಜೋಶ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

publive-image

ಸದ್ಯ ಸೂಪರ್ ಸಂಡೇ ವಿಥ್ ಸುದೀಪ್ ಪ್ರೋಮೋದಲ್ಲಿ ಡ್ರೋನ್ ಪ್ರತಾಪ್‌ ಅವರಿಗೆ ಕಿಚ್ಚನ ಸಂಪೂರ್ಣ ಬೆಂಬಲ ಸಿಕ್ಕಿದೆ. ವಿಡಿಯೋದಲ್ಲಿ ಒಂದು ಸಾಂಗ್ ನಿಮಗೋಸ್ಕರ ಪ್ರತಾಪ್ ಅವ್ರೇ ಚೆನ್ನಾಗಿ ಱಂಪ್ ವಾಕ್ ಮಾಡಿ ಎಂದು ಸುದೀಪ್ ಹುರಿದುಂಬಿಸಿದ್ದಾರೆ. ಜೊತೆಗೆ ಒಂದೆರಡು ಸ್ಟೆಪ್ ಚೆನ್ನಾಗಿ ಹಾಕಬೇಕಿತ್ತಪ್ಪಾ ಅನ್ನೋ ಮೂಲಕ ಡ್ರೋನ್ ಪ್ರತಾಪ್ ಜೋಶ್ ಹೆಚ್ಚಿಸಿದ್ದಾರೆ. ಡ್ರೋನ್ ಪ್ರತಾಪ್‌ ಅವರಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ತುಕಾಲಿ ಸಂತೋಷ್‌ಗೆ ಟಾಂಗ್ ಕೊಟ್ಟಿದ್ದಾರೆ.


">October 15, 2023

ಇದನ್ನೂ ಓದಿ: ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ?- ಖಡಕ್​​ ವಾರ್ನಿಂಗ್​ ಕೊಟ್ಟ ಕಿಚ್ಚ ಸುದೀಪ್​

ಓಪನ್ ಅಪ್ ಆಗ್ಬೇಕು ಅಂತ ತುಕಾಲಿ ಅವ್ರೇ ತಾವು ಹೇಳ್ತಾ ಇದ್ರಿ.. ಓಪನ್ ಅಪ್ ಮಾಡಿಸೋದು ಅಂದ್ರೆ ಹೀಗೆ ಸಾರ್ ಎಂದು ಸುದೀಪ್ ಬಿಗ್‌ಬಾಸ್‌ ಮನೆಯ ಕಿಚ್ಚು ಹೆಚ್ಚಿಸಿದ್ದಾರೆ. ನಂತರ ನಂದೂ ವರ್ತೂರು ಟೊಮ್ಯಾಟೋ ಅಲ್ಲ.. ನಾಟಿ ಟೊಮ್ಯಾಟೋ.. ವೆರಿ ನಾಟಿ ಅನ್ನೋ ಮೂಲಕ ಕಿಚ್ಚ ಸುದೀಪ್ ಅವರು ತುಕಾಲಿ ಸಂತೋಷ್ ಅವರ ಬೇಡದ ಮಾತುಗಳಿಗೆ ಸಖತ್ ಕಾಲೆಳೆದಿದ್ದಾರೆ. ಈ ಪ್ರೋಮೋದ ಮೂಲಕ ಇವತ್ತು ಪ್ರಸಾರವಾಗೋ ಬಿಗ್‌ಬಾಸ್‌ ಶೋನಲ್ಲಿ ವರ್ತೂರು ಸಂತೋಷ್ ಅವರ ಬೆವರಿಳಿಸಿರೋದು ಪಕ್ಕಾ ಆಗಿದೆ. ಈ ಮೂಲಕ ಡ್ರೋನ್ ಪ್ರತಾಪ್ ಪರ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಅಭಿಯಾನಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment