/newsfirstlive-kannada/media/post_attachments/wp-content/uploads/2024/12/SUDEEP_DARSHAN-1.jpg)
ಬೆಂಗಳೂರು: ಮ್ಯಾಕ್ಸ್​ ಮೂವಿ ಸಕ್ಸಸ್ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಅವರು ಮ್ಯಾಕ್ಸಿಮಮ್ ಮಾಸ್​ಕಾಲ ಶುರು ಎಂದು ಬರೆಸಿದ್ದ ಕೇಕ್ ಕಟ್ ಮಾಡಿದ್ದರು. ಇದನ್ನು ದರ್ಶನ್​ಗೆ ಟಾಂಗ್ ಕೊಟ್ಟಿದ್ದಾರೆ ಅಂತ ಹೇಳಲಾಗಿತ್ತು. ಇದರಿಂದ ಬೇಸರ ವ್ಯಕ್ತಪಡಿಸಿರುವ ಕಿಚ್ಚ, ನಾವು ಯಾರಿಗೂ ಯಾರೂ ಟಾಂಗ್ ಕೊಡಬೇಕಾಗಿಲ್ಲ. ಚಿತ್ರರಂಗದಲ್ಲಿ ಇರುವವರೆಲ್ಲಾ ನಮ್ಮ ಸಹೋದರರೇ ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು ಮ್ಯಾಕ್ಸ್​ ಮೂವಿ ಯಶಸ್ವಿ ಸಂಭ್ರಮದ ವೇಳೆ ಬೆಂಗಳೂರಿನಲ್ಲಿ ಮಾತನಾಡಿ, ನಾವು ಯಾರಿಗೂ ಯಾರೂ ಟಾಂಗ್ ಕೊಡಬೇಕಾಗಿಲ್ಲ. ಚಿತ್ರರಂಗದಲ್ಲಿ ಇರುವವರೆಲ್ಲಾ ನಮ್ಮ ಸಹೋದರರು. ಎಲ್ಲರೂ ಅವರವರ ನೋವುಗಳಲ್ಲಿ ಇರುತ್ತಾರೆ. ಅವರನ್ನು ಅವರ ಪಾಡಿಗೆ ಬಿಡಬೇಕು. ಉರಿಯುತ್ತಿರುವ ಬೆಂಕಿಗೆ ಎಣ್ಣೆ ಹಾಕಬಾರದು. ಆಗಿರುವ ಗಾಯಕ್ಕೆ ಉಪ್ಪು ಹಾಕಬಾರದು. ಇದನ್ನೆಲ್ಲ ಬಿಟ್ಟು ಮನಸೋಳಗೆ ನಗಾಡೋಣ, ಖುಷಿಯಿಂದ ಇರೋಣ, ಎಣ್ಣೆ ಹೊಡೆಯೋಣ ಎಂದು ಸುದೀಪ್ ಮುಗುಳು ನಗು ನಗುತ್ತ ಹೇಳಿದರು.
/newsfirstlive-kannada/media/post_attachments/wp-content/uploads/2024/01/DARSHAN_SUDEEP_1.jpg)
ಇದನ್ನೂ ಓದಿ: ದರ್ಶನ್​ಗೂ ನನಗೂ ಯಾವುದೇ ಪ್ರಾಬ್ಲಂ ಇಲ್ಲ- ದಾಸನ ಬಗ್ಗೆ ಕಿಚ್ಚ ಸುದೀಪ್ ಮತ್ತೇನು ಹೇಳಿದರು?
ನಮ್ಮ ಚಿತ್ರರಂಗದಲ್ಲಿ ಇನ್ನೂ ಕಿರಿಯರು ಇದ್ದಾರೆ. ಅವರು ಬೆಳೆದರೆ ನಮ್ಮ ಚಿತ್ರರಂಗ ಇನ್ನು ಮುಂದೆ ಹೋಗಲು ಸಾಧ್ಯ. ಯಾರು ಯಾರಿಗೂ ನೋವು ಕೊಡಬೇಕು ಎಂದು ಮಾತನಾಡಲ್ಲ. ಇನ್​ಡೈರೆಕ್ಟ್​ ಆಗಿ ಮಾತನಾಡಲ್ಲ. ಎಲ್ಲರಿಗೂ ಡೈರೆಕ್ಟ್​ ಆಗಿ ಹೇಳುವಂತ ಬುದ್ಧಿ, ಮಾತು ಎಲ್ಲ ಭಗವಂತ ಕೊಟ್ಟಿದ್ದಾನೆ. ನಾವು ಇನ್​ಡೈರೆಕ್ಟ್ ಆಗಿ ಯಾರಿಗು ಏನು ಹೇಳುತ್ತಿಲ್ಲ. ನಾವು ಯಾರಿಗೂ ಯಾರೂ ಟಾಂಗ್ ಕೊಡಬೇಕಾಗಿಲ್ಲ ಎಂದು ಸುದೀಪ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us