/newsfirstlive-kannada/media/post_attachments/wp-content/uploads/2024/12/SUDEEP_DARSHAN.jpg)
ಬೆಂಗಳೂರು: ಮ್ಯಾಕ್ಸ್​ ಮೂವಿ ಸಕ್ಸಸ್ ಸಂಭ್ರಮದಲ್ಲಿ ಮ್ಯಾಕ್ಸಿಮಮ್ ಮಾಸ್​ಕಾಲ ಶುರುವಾಯಿತೆಂದು ಬರೆಸಿದ್ದ ಕೇಕ್ ಅನ್ನು ಕಿಚ್ಚ ಸುದೀಪ್ ಕಟ್ ಮಾಡಿದ್ದರು. ಆದರೆ ಇದು ದರ್ಶನ್​ಗೆ ಟಾಂಗ್ ಕೊಟ್ಟಿದ್ದು ಎಂದು ಅರ್ಥೈಸಲಾಗಿತ್ತು. ಆದರೆ ಈ ಸಂಬಂಧ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು, ನನಗೂ ದರ್ಶನ್​ ನಡುವೆ ಏನೂ ಇಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ನಾನು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಪ್ರತಿ ಕಲಾವಿದರ ಪರಿಶ್ರಮ ಹಾಕಿನೇ ಒಂದು ಹಂತಕ್ಕೆ ತಲುಪಿರುತ್ತಾರೆ. ಇಲ್ಲಿ ಅವರವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬಾಸ್ ಅಂತ ಕರೆಯುತ್ತಾರೆ. ನಾನು ಕೇಕ್ ಕಟ್ ಮಾಡಿರುವುದನ್ನು ಯಾರಿಗೋ ಟಾಂಗ್ ಕೊಟ್ಟರು ಎಂದು ಹೇಳುವುದು ಎಷ್ಟು ಸರಿ?. ಕನ್ನಡ ಚಿತ್ರರಂಗ ತುಂಬಾ ನೋವಿನಲ್ಲಿದೆ. ಎಲ್ಲರೂ ಸೇರಿದರೆ ಒಂದು ಚಿತ್ರರಂಗ ಆಗುತ್ತೆ. ಅದು ಬೆಳೆಯಬೇಕು ಎಂದರೆ ಇದನ್ನೆಲ್ಲಾ ಬಿಟ್ಟು ಬಿಡಬೇಕು ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/12/SUDEEP.jpg)
ನನ್ನ ಅಭಿಮಾನಿಗಳು ಹೋಗಿ ದರ್ಶನ್ ಸಿನಿಮಾ ನೋಡುತ್ತಾರೆ. ಅವರ ಅಭಿಮಾನಿಗಳು ಬಂದು ನನ್ನ ಸಿನಿಮಾ ನೋಡುತ್ತಾರೆ. ದರ್ಶನ್ ಫ್ಯಾನ್​ ಬಗ್ಗೆ ಈ ಮೊದಲೇ ಹೇಳಿದ್ದೆ. ಅವರಿಗೆ ಏನ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಅವರೆಲ್ಲಾ ನೋವಲ್ಲಿದ್ದಾರೆ. ಕೆಟ್ಟ ಅಹಂಕಾರ ನಮ್ಮಲ್ಲಿದೆ ಎಂದು ಅಂದುಕೊಂಡಿರುವುದೇ ತಪ್ಪು ಅಲ್ವಾ?. ಹಿರಿಯರು ಸಿನಿಮಾ ರಂಗವನ್ನು ಬೆಳೆಸಿ ನಮ್ಮ ಕೈಯಲ್ಲಿ ಕೊಟ್ಟು ಹೋಗಿದ್ದಾರೆ. ನಾವು ಇನ್ನಷ್ಟು ಬೆಳೆಸಿ ಅದನ್ನು ಮುಂದಿನ ಜನರೇಷನ್​​ಗೆ ಕೊಡಬೇಕು. ಚಿತ್ರರಂಗದಲ್ಲಿ ಇದೊಂದು ಸಂಪ್ರದಾಯ, ಒಂದು ಕುಟುಂಬ ಎಂದು ಹೇಳಿದರು.
ನಾನು ಬಾಸ್ ಎಂದು ಕರೆಯುವುದು ನನ್ನ ತಂದೆಗೆ. ನಾವು, ನೀವು ಪ್ರೀತಿಯಿಂದ ಮಾತನಾಡಿಕೊಳ್ಳಬೇಕು ಆಗುತ್ತೆ. ಯಾರಲ್ಲೂ ಬೇಧ-ಭಾವ ಬೇಡ. ಕನ್ನಡ ಚಿತ್ರರಂಗ ಮುಖ್ಯನಾ, ನಾನಾ ನೀನಾ ಎನ್ನುವುದು ಮುಖ್ಯನಾ?. ಆದರೆ ಇದರಲ್ಲಿ ಯಾವುದು ಮುಖ್ಯವಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us