/newsfirstlive-kannada/media/post_attachments/wp-content/uploads/2024/08/kiccha-sudeep.jpg)
ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11ರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಿಗ್​ಬಾಸ್​ ಸೀಸನ್​​ ಸೀಸನ್​ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಯಾವಾಗಪ್ಪ ಬಿಗ್​ಬಾಸ್​ ಬರುತ್ತೆ​ ​ಅಂತ ಕಾಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/kiccha-sudeep1.jpg)
ಈ ಬಾರಿಯ ಬಿಗ್​ಬಾಸ್​ ಹೋಸ್ಟ್ ಮಾಡಲು ಕಿಚ್ಚ ಸುದೀಪ್​ ಬದಲು ಬೇರೆ ಸ್ಟಾರ್​ ನಟ ಬರುತ್ತಾರೆ ಎಂದು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಬೆಂಗಳೂರಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು.. ಬಿಗ್​ಬಾಸ್​ನಲ್ಲಿ ಹತ್ತು ವರ್ಷದ ಜರ್ನಿ ಡೆಡಿಕೇಟ್ ಮಾಡಿದ್ದೇನೆ. ಬಿಗ್​ಬಾಸ್ ಅನ್ನೋದು ದೊಡ್ಡ ಎಫರ್ಟ್. ಬಿಗ್​ಬಾಸ್​ ನಾನು ನಡೆಸಿಕೊಡ್ತೇನೆ ಅಂತ ನಿಮಗೆ ಗೊತ್ತು. ಆದರೆ ಬಿಗ್​ಬಾಸ್​ ನಡೆಸಿಕೊಡೋಕೆ ನಾನು ಏನೆಲ್ಲಾ ಮಾಡ್ತೀನಿ ಅಂತ ಯಾರಿಗೂ ಗೊತ್ತಿಲ್ಲ ಎಂದರು.
ಬಿಗ್​ಬಾಸ್ ಬಗ್ಗೆ ನನಗೆ ಯಾವುದೇ ಕ್ಲಾರಿಟಿ ಇಲ್ಲ. ಪ್ರೋಟೋಕಾಲ್ ಇರುತ್ತದೆ. ಅವರದ್ದೇ ಒಂದು ಪ್ಲಾನಿಂಗ್ ಇರುತ್ತದೆ. ಯೆಸ್.. ಕಷ್ಟ ಆಗ್ತಿದೆ, ಅಮ್ಮನಿಗೆ ಅಡುಗೆ ಮಾಡೋದು ಕಷ್ಟ ಅನಿಸುತ್ತೆ. ಹಾಗಂತ ಬಿಡೋಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/kiccha-sudeep3.jpg)
ಮ್ಯಾಕ್ಸ್ ಸಿನಿಮಾಗೆ ತುಂಬಾ ಟೈಮ್ ಕೊಟ್ಟಿದ್ದೇನೆ. ಚೆನ್ನೈನ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಮುಗಿಸಿ ರಾತ್ರೋರಾತ್ರಿ ಬೆಂಗಳೂರು ಬರ್ತಿದ್ದೆ. ಬಳಿಕ ಇಡೀ ದಿನದ ಎಪಿಸೋಡ್​ ನೋಡಿ ಅದಕ್ಕೆ ಏನೆಲ್ಲಾ ಮಾತಾಡಬೇಕು ಅಂತ ಪ್ರಿಪೇರ್ ಮಾಡಿಕೊಳ್ಳುತ್ತೀನಿ. ಸುಮಾರು 7-8 ಗಂಟೆಗಳ ಕಾಲ ನಾನು ನಿಂತುಕೊಂಡು ಹೋಸ್ಟ್ ಮಾಡುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us