ಬಿಗ್ಬಾಸ್ ನಿರೂಪಣೆ ಮಾಡೋದರ ವಿಚಾರದ ಬಗ್ಗೆ ಏನಂದ್ರು?
ದಿಢೀರ್ ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಹೇಳಿದ್ದೇನು?
ಬಿಗ್ಬಾಸ್ ಬಗ್ಗೆ ನನಗೆ ಯಾವುದೇ ಕ್ಲಾರಿಟಿ ಇಲ್ಲ- ಹೀಗ್ಯಾಕೆ ಅಂದ್ರು ಕಿಚ್ಚ
ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಿಗ್ಬಾಸ್ ಸೀಸನ್ ಸೀಸನ್ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಯಾವಾಗಪ್ಪ ಬಿಗ್ಬಾಸ್ ಬರುತ್ತೆ ಅಂತ ಕಾಯುತ್ತಿದ್ದಾರೆ.
ಇದನ್ನೂ ಓದಿ: ವೀಕ್ಷಕರಿಗೆ ಗುಡ್ನ್ಯೂಸ್; ಶೀಘ್ರದಲ್ಲೇ ಬರಲಿದೆ ಬಿಗ್ಬಾಸ್ ಸೀಸನ್ 11ರ ಹೊಸ ಪ್ರೋಮೋ..!
ಈ ಬಾರಿಯ ಬಿಗ್ಬಾಸ್ ಹೋಸ್ಟ್ ಮಾಡಲು ಕಿಚ್ಚ ಸುದೀಪ್ ಬದಲು ಬೇರೆ ಸ್ಟಾರ್ ನಟ ಬರುತ್ತಾರೆ ಎಂದು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಬೆಂಗಳೂರಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು.. ಬಿಗ್ಬಾಸ್ನಲ್ಲಿ ಹತ್ತು ವರ್ಷದ ಜರ್ನಿ ಡೆಡಿಕೇಟ್ ಮಾಡಿದ್ದೇನೆ. ಬಿಗ್ಬಾಸ್ ಅನ್ನೋದು ದೊಡ್ಡ ಎಫರ್ಟ್. ಬಿಗ್ಬಾಸ್ ನಾನು ನಡೆಸಿಕೊಡ್ತೇನೆ ಅಂತ ನಿಮಗೆ ಗೊತ್ತು. ಆದರೆ ಬಿಗ್ಬಾಸ್ ನಡೆಸಿಕೊಡೋಕೆ ನಾನು ಏನೆಲ್ಲಾ ಮಾಡ್ತೀನಿ ಅಂತ ಯಾರಿಗೂ ಗೊತ್ತಿಲ್ಲ ಎಂದರು.
ಬಿಗ್ಬಾಸ್ ಬಗ್ಗೆ ನನಗೆ ಯಾವುದೇ ಕ್ಲಾರಿಟಿ ಇಲ್ಲ. ಪ್ರೋಟೋಕಾಲ್ ಇರುತ್ತದೆ. ಅವರದ್ದೇ ಒಂದು ಪ್ಲಾನಿಂಗ್ ಇರುತ್ತದೆ. ಯೆಸ್.. ಕಷ್ಟ ಆಗ್ತಿದೆ, ಅಮ್ಮನಿಗೆ ಅಡುಗೆ ಮಾಡೋದು ಕಷ್ಟ ಅನಿಸುತ್ತೆ. ಹಾಗಂತ ಬಿಡೋಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮ್ಯಾಕ್ಸ್ ಸಿನಿಮಾಗೆ ತುಂಬಾ ಟೈಮ್ ಕೊಟ್ಟಿದ್ದೇನೆ. ಚೆನ್ನೈನ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಮುಗಿಸಿ ರಾತ್ರೋರಾತ್ರಿ ಬೆಂಗಳೂರು ಬರ್ತಿದ್ದೆ. ಬಳಿಕ ಇಡೀ ದಿನದ ಎಪಿಸೋಡ್ ನೋಡಿ ಅದಕ್ಕೆ ಏನೆಲ್ಲಾ ಮಾತಾಡಬೇಕು ಅಂತ ಪ್ರಿಪೇರ್ ಮಾಡಿಕೊಳ್ಳುತ್ತೀನಿ. ಸುಮಾರು 7-8 ಗಂಟೆಗಳ ಕಾಲ ನಾನು ನಿಂತುಕೊಂಡು ಹೋಸ್ಟ್ ಮಾಡುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ