/newsfirstlive-kannada/media/post_attachments/wp-content/uploads/2024/06/dboss20.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಅಂಡ್ ಗ್ಯಾಂಗ್ ಪೊಲೀಸರ ವಶದಲ್ಲಿದ್ದಾರೆ. ಇನ್ನು ಇದೇ ಕೇಸ್ ಸಂಬಂಧ ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಾಧ್ಯಮಗಳಿಂದ ಈ ವಿಚಾರದ ಬಗ್ಗೆ ತಿಳಿದುಕೊಳ್ಳುತ್ತಿದ್ದೀವಿ. ಸತ್ಯ ಹೊರ ಬರಬೇಕು ಅಂತ ಪೊಲೀಸರು ಮಾಧ್ಯಮ ಕೆಲಸ ಮಾಡುತ್ತಿದೆ. ನನ್ನ ಪ್ರಕಾರ ದೊಡ್ಡ ಸ್ಥಾನದಲ್ಲಿರುವ ಸಿಎಂ, ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಆ ಹೆಣ್ಣು ಮಗುವಿಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು. ರೇಣುಕಾಸ್ವಾಮಿಗೆ ಹುಟ್ಟಬೇಕಾಗಿರುವ ಆ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗಬೇಕು ಅಂದರೆ ಉತ್ತಮವಾಗಿ ತನಿಖೆಯಾಗಬೇಕು. ಸಂಪೂರ್ಣ ವಾತಾವರಣ ಸರಿಯಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಅಂತ ಹೇಳಿದ್ದಾರೆ.
ಇನ್ನು, ನಟ ದರ್ಶನ್ರನ್ನ ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕಿಚ್ಚ ಸುದೀಪ್, ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ. ಈ ಕೇಸ್ನಿಂದ ಹೊರಗೆ ಬಂದರೆ ಬ್ಯಾನ್ ಅನ್ನುವ ಪದ ಬರಲ್ಲ.
ಇಲ್ಲಿ ಬೇಕಾಗಿರುವುದು ನ್ಯಾಯ. ಎಲ್ಲಾರೂ ನೋಡುತ್ತಿರುವುದು ಪೊಲೀಸರು ಏನು ಕೆಲಸ ಮಾಡ್ತಿದ್ದಾರೆ ಅನ್ನೋದು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ