newsfirstkannada.com

VIDEO: ‘ಆ ಹೆಣ್ಣಿಗೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು’- ಕಿಚ್ಚ ಸುದೀಪ್‌

Share :

Published June 16, 2024 at 6:47pm

  ರೇಣುಕಾಸ್ವಾಮಿ ಪತ್ನಿ ಸಹಾನಾಗೆ, ಹುಟ್ಟುವ ಮಗುವಿನ ನ್ಯಾಯ ಸಿಗಬೇಕು

  ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ನಟ ಕಿಚ್ಚ ಸುದೀಪ್​ ಹೇಳಿದ್ದೇನು?

  ಕೊಲೆ ಕೇಸ್​ನಲ್ಲಿ ನ್ಯಾಯ ಸಿಗಬೇಕು ಅಂದರೆ ಉತ್ತಮವಾಗಿ ತನಿಖೆ ಆಗಬೇಕು

ಬೆಂಗಳೂರು: ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್​ನಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್​ ಅಂಡ್​ ಗ್ಯಾಂಗ್ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ದಿನ ಕಳೆದಂತೆ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ಪೊಲೀಸ್​ ಅಧಿಕಾರಿಗಳು  ಒಂದೊಂದೆ ಸಾಕ್ಷಿಯನ್ನು ಕಲೆ ಹಾಕುತ್ತಿದ್ದಾರೆ. ಈ ಕೊಲೆ ಕೇಸ್​ ಹಿಂದೆ ನಟ ದರ್ಶನ್​​ ಇದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಇಡೀ ಕನ್ನಡ ಚಿತ್ರರಂಗವೇ ಫುಲ್​ ಶಾಕ್​ಗೆ ಒಳಗಾಗಿತ್ತು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅರೆಸ್ಟ್‌.. ಕಿಚ್ಚ ಸುದೀಪ್‌ ಖಡಕ್ ರಿಯಾಕ್ಷನ್; ಹೇಳಿದ್ದೇನು?

ಇನ್ನು, ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ನಟ ಕಿಚ್ಚ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಮೃತ ರೇಣುಕಾಸ್ವಾಮಿ ಪತ್ನಿ ಹಾಗೂ ಹುಟ್ಟುವ ಮಗುವಿನ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಮಾಧ್ಯಮಗಳಿಂದ ಈ ವಿಚಾರದ ಬಗ್ಗೆ ತಿಳಿದುಕೊಳ್ಳುತ್ತಿದ್ದೀವಿ. ಸತ್ಯ ಹೊರ ಬರಬೇಕು ಅಂತ ಪೊಲೀಸರು ಮಾಧ್ಯಮ ಕೆಲಸ ಮಾಡುತ್ತಿದೆ. ನನ್ನ ಪ್ರಕಾರ ದೊಡ್ಡ ಸ್ಥಾನದಲ್ಲಿರುವ ಸಿಎಂ, ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಆ ಹೆಣ್ಣು ಮಗುವಿಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು. ರೇಣುಕಾಸ್ವಾಮಿಗೆ ಹುಟ್ಟಬೇಕಾಗಿರುವ ಆ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗಬೇಕು ಅಂದರೆ ಉತ್ತಮವಾಗಿ ತನಿಖೆಯಾಗಬೇಕು. ಸಂಪೂರ್ಣ ವಾತಾವರಣ ಸರಿಯಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಅಂತ ಹೇಳಿದ್ದಾರೆ.

ಹೀಗೆ ಮಾತನ್ನು ಮುಂದುವರೆಸಿದ ಅವರು, ನಾನು ಅವರ ಪರ, ಇವರ ಪರ ಮಾತಾಡಲ್ಲ. ರೇಣುಕಾಸ್ವಾಮಿ ಪತ್ನಿ ಸಹನಾಗೆ ನ್ಯಾಯ ಸಿಗಬೇಕು. ಪ್ರತಿಯೊಂದು ವಿಚಾರ ನನಗೆ ಗೊತ್ತಿಲ್ಲ. ಎಲ್ಲರ ಹೃದಯ ನೊಂದಿದೆ. ಏನು ನಂಗೆ ಸರಿಯಾಗಿ ಕಾಣ್ತಿಲ್ಲ. ಚಿತ್ರರಂಗಕ್ಕೂ ಏನು ಸರಿಯಾಗಿ ಕಾಣ್ತಿಲ್ಲ. ಕಲಾವಿದರು ತುಂಬಾ ಜನ ಇದಾರೆ. ಚಿತ್ರರಂಗಕ್ಕೂ ಒಂದು ಕ್ಲಿನ್ ಚಿಟ್ ಸಿಕ್ಕಿದೆ. ಈ ಕೇಸ್​ಯಿಂದ ದರ್ಶನ್ ಆಚೆ ಬಂದ್ರೆ ಏನು ಇರಲ್ಲ. ಬ್ಯಾನ್ ಅರ್ಥ ಗೊತ್ತಿಲ್ಲ. ಬ್ಯಾನ್ ಗಿಂತ ನ್ಯಾಯ ಅನ್ನೋ ಪದ ದೊಡ್ಡದು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಯಾವತ್ತು ಈ ತರ ಆಗಬಾರದು. ಎಷ್ಟೋ ವರ್ಷಗಳ ಇತಿಹಾಸ ಚಿತ್ರರಂಗಕ್ಕಿದೆ. ನನ್ನ ಕಣ್ಣ ಮುಂದೆ ಆ ಫ್ಯಾಮಿಲಿ ಮಾತ್ರ ಬರುತ್ತಿದೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಆ ಹೆಣ್ಣಿಗೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು’- ಕಿಚ್ಚ ಸುದೀಪ್‌

https://newsfirstlive.com/wp-content/uploads/2024/06/kiccha-sudeep2.jpg

Load More