Advertisment

Kiccha Sudeep: ‘ಗುಡ್​ ಮಾರ್ನಿಂಗ್​ ಕಂದಾ..’ ಅಮ್ಮನ ಕೊನೆಯ ಸಂದೇಶವನ್ನು ನೆನೆದು ಕಿಚ್ಚ ಸುದೀಪ್ ಟ್ವೀಟ್

author-image
AS Harshith
Updated On
PHOTOS: ಸವಿ ಸವಿ ನೆನಪು.. ಅಮ್ಮನ ಜೊತೆಗಿರುವ ಕಿಚ್ಚನ ಅಪರೂಪದ ಫೋಟೋ ಇಲ್ಲಿವೆ​
Advertisment
  • ಅಕ್ಟೋಬರ್ 18ರಂದು ಅವಳ ಕೊನೆಯ ಮೆಸೇಜ್​ ಸ್ವೀಕರಿಸಿದೆ
  • ಅಮ್ಮ ನನ್ನ ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ
  • ಅಮ್ಮಾ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ ಎಂದ ಕಿಚ್ಚ ಸುದೀಪ್​

ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದಾರೆ. ಎಕ್ಸ್​ನಲ್ಲಿ ತಾಯಿಯ ಬಗ್ಗೆ ಬರೆದುಕೊಳ್ಳುವ ಮೂಲಕ ತನ್ನೊಳಗಿನ ನೋವನ್ನು ಬೇಸರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಿತೈಷಿಗಳಿಗೆ ಧನ್ಯವಾದ ಹೇಳಿದ್ದಾರೆ.

Advertisment

ಎಕ್ಸ್​ನಲ್ಲಿ ಬರೆದುಕೊಂಡ ಕಿಚ್ಚ ಸುದೀಪ್​ ‘‘ನನ್ನಮ್ಮ.. ನಿಸ್ಪಕ್ಷಪಾತಿ, ಪ್ರೇಮಮಯಿ, ಕ್ಷಮಯಾಧರಿತ್ರಿ, ಕೊಡುಗೈ, ಜೊತೆಗೆ ತುಂಬಾನೇ ಕಾಳಜಿ ಹೊಂದಿದ್ದ ಜೀವ...ನನ್ನ ಜೀವನದಲ್ಲಿ ಆಕೆಗೆ ತುಂಬಾನೇ ಬೆಲೆ ಕೊಟ್ಟಿದ್ದೀನಿ, ಗೌರವಿಸಿದ್ದೀನಿ, ಸಂಭ್ರಮಿಸಿದ್ದೀನಿ, ಕೊನೆತನಕವೂ ನನ್ನ ಮನಸ್ಸಲ್ಲಿ ಅವಳನ್ನ ಹಚ್ಚಹಸಿರಾಗಿ ಕಾಪಾಡಿಕೊಳ್ತೀನಿ
ಗೌರವಿಸಿದ್ದೀನಿ, ಯಾಕಂದ್ರೆ, ಆಕೆ ಅಕ್ಷರಶಃ ಮನುಷ್ಯ ರೂಪದಲ್ಲಿ ನನ್ನ ಜೊತೆಗಿದ್ದ ದೇವತೆ
ನನ್ನ ಪಾಲಿಗೆ ಅವಳೊಂಥರಾ ಹಬ್ಬವಾಗಿದ್ಲು, ನನ್ನ ಟೀಚರ್ ಆಗಿದ್ಲು, ಸದಾ ನನಗಾಗಿ ಒಳಿತನ್ನೇ ಬಯಸುವ ವೆಲ್​ವಿಷರ್ ಕೂಡ ಆಗಿದ್ಲು.. ನನ್ನ ಮೊಟ್ಟ ಮೊದಲ ಫ್ಯಾನ್​ ಕೂಡ ನನ್ನ ಅಮ್ಮನೇ.. ಯಾಕಂದ್ರೆ, ನಾನು ಮಾಡಿದ ಕೆಲಸ ಅಷ್ಟಕ್ಕಷ್ಟೇ ಅನಿಸಿದಾಗಲೂ ಅದನ್ನೂ ನನ್ನಮ್ಮ ಇಷ್ಟಪಟ್ಟಿದ್ದಳು.

ನನ್ನಮ್ಮ ಈಗ ನನ್ನ ಪಾಲಿಗೆ ಒಂದು ಸುಂದರ ನೆನಪಷ್ಟೇ..ಹಾಗಾಗಿಯೇ, ಅವಳು ನನ್ನ ಜೀವನದಲ್ಲಿ ಕೊನೆವರೆಗೂ ಹಚ್ಚಹಸಿರಾಗಿರ್ತಾಳೆ..

ನನಗೀಗ ಆಗ್ತಿರೋ ಸಂಕಟವನ್ನ ವ್ಯಕ್ತಪಡಿಸೋದಕ್ಕೆ ನನ್ನ ಬಳಿ ಪದಗಳೇ ಇಲ್ಲ. ಏನಾಯ್ತು ಅನ್ನೋದನ್ನ ಅರಗಿಸಿಕೊಳ್ಳಲೂ ಸಾಧ್ಯವಾಗ್ತಿಲ್ಲ. 24 ಗಂಟೆ ಅಷ್ಟೇ...ಎಲ್ಲವೂ ಬದಲಾಗಿ ಹೋಯ್ತು

Advertisment

ಪ್ರತಿನಿತ್ಯ ನನ್ನ ಮೊಬೈಲ್​​ಗೆ ಬರ್ತಿದ್ದ ಮೊದಲನೇ ಮೆಸೇಜ್​ ಕಳುಹಿಸುತ್ತಿದ್ದದ್ದೇ ನನ್ನಮ್ಮ...ಮುಂಜಾನೆ 05:30ರ ಸುಮಾರಿಗೆ ಬರ್ತಿದ್ದ ಆ ಮೆಸೇಜಲ್ಲಿ "ಗುಡ್​ ಮಾರ್ನಿಂಗ್​ ಕಂದ" ಅಂತಾ ಇರ್ತಿತ್ತು..ಅಕ್ಟೋಬರ್​ 18ನೇ ತಾರೀಖಿನ ಬೆಳಗ್ಗೆಯೇ ಕೊನೆ...ನನ್ನಮ್ಮ ಕಳುಹಿಸಿದ ಕೊನೆಯ ಮೆಸೇಜ್​ ಆವತ್ತೇ ಆಗಿತ್ತು...ಬಿಗ್​​ಬಾಸ್​ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ನಾನು ಮರುದಿನ ಬೆಳಗ್ಗೆ ಎದ್ದಾಗ ನನ್ನ ಮೊಬೈಲ್​ನಲ್ಲಿ ಅಮ್ಮನ ಗುಡ್​ ಮಾರ್ನಿಂಗ್​ ಮೆಸೇಜ್​ ಇರಲಿಲ್ಲ..ಎಷ್ಟೋ ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿ ಆಕೆಯ ಮೆಸೇಜ್​​ ನನ್ನ ಕಣ್ಣಿಗೆ ಕಾಣಿಸಲಿಲ್ಲ. ನಾನೂ ಕೂಡ ಆಕೆಗೆ ಗುಡ್​ ಮಾರ್ನಿಂಗ್​ ವಿಶ್​ ಮಾಡ್ಲಿಲ್ಲ.. ಮೆಸೇಜ್​ ಬಾರದಿದ್ದ ಕಾರಣಕ್ಕೆ ನಾನು ಅಮ್ಮನಿಗೆ ಫೋನ್​ ಮಾಡಿ ಎಲ್ಲವೂ ಸರಿಯಾಗಿದ್ಯಾ ಅಂತಾ ವಿಚಾರಿಸೋಣ ಅಂದುಕೊಂಡೆ. ಆದ್ರೆ, ಬಿಗ್​ಬಾಸ್​​ ಶನಿವಾರದ ಸ್ಪೆಷಲ್​ ಶೋ ಕುರಿತ ಡಿಸ್ಕಷನ್​ ಇದ್ದದ್ದರಿಂದ ಅದು ಸಾಧ್ಯವಾಗಲಿಲ್ಲ. ನಾನು ಬಿಗ್​​ಬಾಸ್​ ವೇದಿಕೆ ಹತ್ತುವ ಕೆಲವೇ ನಿಮಿಷಗಳ ಮುಂಚೆ ಒಂದು ಫೋನ್​ ಬಂತು..ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದಾಳೆ ಅಂತಾ ಹೇಳಿದ್ರು..ಆ ಸುದ್ದಿ ಕೇಳಿದ ಕೂಡಲೇ ನಾನು ಅಲ್ಲೇ ಆಸ್ಪತ್ರೆಯಲ್ಲಿದ್ದ ನನ್ನ ಸಹೋದರಿಗೆ ಫೋನ್​ ಮಾಡಿ ವಿಚಾರಿಸಿದೆ..ಡಾಕ್ಟರ್​​ಗಳ ಜೊತೆ ಮಾತನಾಡಿ ಬಳಿಕ ಸ್ಟೇಜ್​ ಹತ್ತಿದೆ. ಅದಾದ ಕೆಲ ಹೊತ್ತಿನ ಬಳಿಕ, ನಾನು ಬಿಗ್​ಬಾಸ್​ ವೇದಿಕೆ ಮೇಲಿದ್ದಾಗಲೇ ನನ್ನ ಜೊತೆ ಇರುವವರಿಗೆ ನನ್ನ ತಾಯಿ ಕ್ರಿಟಿಕಲ್ ಆಗಿದ್ದಾಳೆ ಎನ್ನುವ ಸುದ್ದಿ ಬಂತು. ನಾನು ನನ್ನ ಜೀವನದಲ್ಲಿ ಎಂದೂ ಕೂಡ ಇಷ್ಟೊಂದು ಅಸಹಾಯಕನಾಗಿರಲಿಲ್ಲ.. ನನ್ನ ತಾಯಿ ಆರೋಗ್ಯದ ಬಗ್ಗೆ ಚಿಂತಾಕ್ರಾಂತನಾಗಿಯೇ ಶನಿವಾರದ ಎಪಿಸೋಡ್​ ಹ್ಯಾಂಡಲ್​ ಮಾಡ್ತಿದ್ದೆ..
ಸಾಕಷ್ಟು ಒತ್ತಡಗಳಿದ್ದರೂ ಎಲ್ಲೂ ಕುಗ್ಗದೇ ಶಾಂತವಾಗಿ, ಸಮರ್ಥವಾಗಿ ಆ ಎಪಿಸೋಡ್​ನ​​ ನಿಭಾಯಿಸಿದ್ದೀನಿ ಅಂದ್ರೆ ಅದಕ್ಕೆ ನನ್ನ ತಾಯಿಯೇ ಕಾರಣ..ಆಕೆ ವೃತ್ತಿಯನ್ನು ಗೌವಿಸುವುದರ ಬಗ್ಗೆ ಹೇಳಿಕೊಟ್ಟ ಆದರ್ಶಗಳು ಎಂದಿಗೂ ಚಿರಸ್ಥಾಯಿ
ಶನಿವಾರದ ಎಪಿಸೋಡ್​ ಮುಗಿದ ಕೂಡಲೇ ನಾನು ಆಸ್ಪತ್ರೆಗೆ ಓಡೋಡಿ ಹೋದೆ. ಆದರೆ, ಆಸ್ಪತ್ರೆ ತಲುಪುವ ಕೆಲ ನಿಮಿಷಗಳ ಮುಂಚೆಯೇ ಆಕೆಯನ್ನ ವೆಂಟಿಲೇಟರ್​​ನಲ್ಲಿ ಇಡಲಾಗಿತ್ತು..ನನ್ನ ತಾಯಿಗೆ ಪ್ರಜ್ಞೆ ಇದ್ದಾಗ ನಾನು ಅವಳನ್ನು ನೋಡಲು ಸಾಧ್ಯವಾಗಲೇ ಇಲ್ಲ.. ಭಾನುವಾರ ಮುಂಜಾನೆ ಆಕೆ ತನ್ನ ಜೀವನದ ಹೋರಾಟ ಮುಗಿಸಿದ್ದಳು..ಎಲ್ಲವೂ..ಕೆಲವೇ ಕೆಲವು ಗಂಟೆಗಳಲ್ಲಿ ಎಲ್ಲವೂ ಬದಲಾಗಿಬಿಡ್ತು.

ಇದನ್ನ ಹೇಗೆ ಸರಿಪಡಿಸಬೇಕು ಗೊತ್ತಿಲ್ಲ. ನನಗೆ ಈ ಸತ್ಯವನ್ನ ಹೇಗೆ ಸ್ವೀಕರಿಸಬೇಕು ಗೊತ್ತಾಗುತ್ತಿಲ್ಲ. ನಮಗಂತೂ ದೊಡ್ಡ ಪೆಟ್ಟಾಗಿದೆ. ನಾನು ಶೂಟಿಂಗ್​ಗೆ ಹೋಗುವ ಮುನ್ನ ಬಿಗಿಯಾದ ಅಪ್ಪುಗೆ ಕೊಟ್ಟಿದ್ದ ನನ್ನಮ್ಮ ಕೆಲವೇ ಗಂಟೆಗಳಲ್ಲಿ ಇಲ್ಲವಾಗಿಬಿಟ್ಟಿದ್ದಾಳೆ.

ಈ ಘಟನೆಯಿಂದ ನಮ್ಮ ಒಡೆದಿರುವ ಹೃದಯಗಳು ಮತ್ತೆ ಸರಿಯಾಗೋದಕ್ಕೆ ಖಂಡಿತ ಸಮಯ ಹಿಡಿಯುತ್ತೆ ಅನ್ನೋದಷ್ಟೇ ಸತ್ಯ
ನನ್ನ ತಾಯಿಯೊಬ್ಬಳು ನಿಷ್ಕಲ್ಮಶ ಜೀವವಾಗಿದ್ದಳು. ಅವಳನ್ನ ಮಿಸ್​ ಮಾಡಿಕೊಳ್ತೀನಿ..
ನನ್ನ ತಾಯಿಗೆ ಕಂಬನಿ ಮಿಡಿದ ಎಲ್ಲರಿಗೂ ಥ್ಯಾಂಕ್ಸ್​, ಮೆಸೇಜ್​ಗಳ ಮೂಲಕ ಟ್ವೀಟ್​​ಗಳ ಮೂಲದ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ
ರೆಸ್ಟ್​ ವೆಲ್​ ಅಮ್ಮ
ಐ ಲವ್​ ಯೂ, ಐ ಮಿಸ್​​ ಯೂ ಟೆರಿಬಲಿ’’ ಎಂದು ಕಿಚ್ಚ ಸುದೀಪ್​ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

Advertisment


">October 21, 2024

ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ಅವರ ತಾಯಿ ಸರೋಜಾರವರು ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ಅಸುನೀಗಿದರು. ಅಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment