ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​.. ಕಿಚ್ಚ ಸುದೀಪ್ ಅವರಿಂದಲೇ ಬಿಗ್​ಬಾಸ್​ ಸೀಸನ್​ 12 ಹೋಸ್ಟ್..!

author-image
Veena Gangani
Updated On
ಅಂದು ಕಿಚ್ಚ ಯಾಕೆ ಬಿಗ್​​ಬಾಸ್​ನಿಂದ ಹೊರ ಬರಲು ನಿರ್ಧರಿಸಿದ್ದರು..? ಸುದೀಪ್ ಖಡಕ್ ರಿಯಾಕ್ಷನ್..!
Advertisment
  • ಈ ಬಾರಿಯ ಬಿಗ್​ಬಾಸ್​ ನಿರೂಪಕ ಇವರೇ ನೋಡಿ
  • ಕಿಚ್ಚ ಸುದೀಪ್​ ಅಭಿಮಾನಿಗಳು ಖುಷಿ ಪಡೋ ಸುದ್ದಿ
  • ಕಳೆದ 11 ಸೀಸನ್​ ಅನ್ನು ಯಶಸ್ವಿಯಾಗಿ ನಿರೂಪಣೆ ಮಾಡಿರೋ ಸುದೀಪ್

ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್​ಬಾಸ್​. ಈಗಾಗಲೇ 11 ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್​ಬಾಸ್​ ಸೀಸನ್​ 12 ಬಂದೇ ಬಿಡ್ತು. ಈಗಾಗಲೇ ಸೀಸನ್ 11 ಮುಕ್ತಾಯಗೊಂಡು 5 ತಿಂಗಳು ಪೂರ್ಣಗೊಂಡಿದೆ. ಮುಂದಿನ ಸೀಸನ್​ಗಾಗಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಅಪ್ಡೇಟ್ ಕೊಟ್ಟಿದೆ ತಂಡ.

ಇದನ್ನೂ ಓದಿ:ಬಿಗ್​ಬಾಸ್​ಗೆ ಹೋಗಲು ಭರ್ಜರಿ ಆಫರ್​.. ಈ ಚಾನ್ಸ್​ ನೀವು ಮಿಸ್ ​ಮಾಡ್ಕೋಬೇಡಿ..!

publive-image

ಹೌದು, ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 12ಕ್ಕೂ ಕಿಚ್ಚ ಸುದೀಪ್​ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್​ಬಾಸ್​ ಟೀಮ್​ ಇಂದು ನಡೆದ ಪ್ರೆಸ್‌ ಮೀಟ್​ನಲ್ಲಿ ಹಂಚಿಕೊಂಡಿದೆ.

publive-image

ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 12 ನಿರೂಪಣೆ ಮಾಡಲು ಕಿಚ್ಚ ಸುದೀಪ್ ಅವರು ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ ಎಂದು ಬಿಗ್​ಬಾಸ್​ ಟೀಮ್​ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment